ಬೆಂಗಳೂರು: ಎನ್‌ಐಎ 5 ತಿಂಗಳ ನಂತರ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಇಂದು ಆರೋಪಿಗಳನ್ನು ಕರೆ ತಂದು ಸ್ಪಾಟ್ ಮಹಜರು ನಡೆಸುತ್ತಿದೆ.
ಎನ್‌ಐಎ ಕೆಫೆಗೆ ಆರೋಪಿಗಳನ್ನು ಕರೆತಂದು ಆರೋಪಿ ಮುಜಾವೀರ್ ಹುಸೇನ್ ಶಾಜಿಬ್ ನಿಂದ ಕ್ರೈಂ ಸೀನ್ ರೀ ಕ್ರಿಯೆಟ್ ಮಾಡಿಸುತ್ತಿದ್ದಾರೆ.
ಶಂಕಿತ ಉಗ್ರ ಕೃತ್ಯ ನಡೆದ ದಿನ ಎಲ್ಲಿಂದ ಬಂದ? ಹೇಗೆ ನಡೆದುಕೊಂಡು ಬಂದ? ಕೆಫೆ ಒಳಗಡೆ ಎಲ್ಲೆಲ್ಲಿ ಸುತ್ತಾಡಿದ್ದ? ಎಲ್ಲವನ್ನೂ ರೀ ಕ್ರಿಯೆಟ್ ಮಾಡಿ ತೋರಿಸುತ್ತಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ಆ ದಿನ ಧರಿಸಿದ್ದ ಬಟ್ಟೆ ಹಾಗೂ ಕ್ಯಾಪ್ ಧರಿಸಿಯೇ ಸೀನ್ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಅವತ್ತಿನ ರೀತಿ, ಅಂದರೆ ಬ್ಲಾಕ್ ಬ್ಯಾಗ್ ಹಾಕಿಕೊಂಡು ಸನ್ನಿವೇಶವನ್ನು ಮರು ಸೃಷ್ಟಿ ಮಾಡಿಸಲಾಗುತ್ತಿದೆ.
ಹಾಗೆಯೇ ಇದೆಲ್ಲವನ್ನು ಎನ್‌ಐಎ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದರು.
ಈ ಘಟನೆ ರಾಜಧಾನಿ ಬೆಂಗಳೂರು ನಗರದ ಜನರನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೆ ಬಿಜೆಪಿ ಇದನ್ನು ರಾಜಕೀಯ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು.