Celebrate Eid ul Fitr with devotion

ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

ಮುದ್ದೇಬಿಹಾಳ : ತಾಲ್ಲೂಕಿನಾದ್ಯಂತ ಸೋಮವಾರ ಮುಸ್ಲಿಂರ ಪವಿತ್ರ ಹಬ್ಬ ಈದ್ ಉಲ್ ಫಿತ್ರ ಆಚರಣೆಯನ್ನು ಶ್ರದ್ದಾ, ಭಕ್ತಿಯಿಂದ ಆಚರಿಸಲಾಯಿತು.

ಚಂದ್ರ ದರ್ಶನ ಸಮೀತಿ ನಿರ್ದೇಶನದಂತೆ ಭಾನುವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಸೋಮವಾರ ಹಬ್ಬದ ಆಚರಣೆಗೆ ಕರೆ ನೀಡಲಾಗಿತ್ತು. ಪಟ್ಟಣದ ಮಸೀದಿಗಳ ಮೂಲಕ ಮೆರವಣಿಗೆಯಲ್ಲಿ ಕಿಲ್ಲಾದಲ್ಲಿರುವ ಮಸೀದಿಗೆ ಆಗಮಿಸಿದ ಮುಸ್ಲಿಂ ಬಾಂಧವರು ಅಲ್ಲಿಂದ ತಕಬೀರ ಹೇಳುತ್ತಾ ತಾಳಿಕೋಟಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಆಗಮಿಸಿದರು.

ಬಳಿಕ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಬಳಿಕ ಸ್ನೇಹಿತರು,ಕುಟುಂಬಸ್ಥರೊಂದಿಗೆ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಹಿಂದೂ ಬಾಂಧವರನ್ನು ತಮ್ಮ ಮನೆಗಳಿಗೆ ಕರೆಯಿಸಿಕೊಂಡು ಸುರಕುರ್ಮಾ, ಔತಣದ ಆತಿಥ್ಯ ನೀಡಿ ಸತ್ಕರಿಸಿದರು. ಮುಂಜಾಗ್ರತಾ ಕ್ರಮವಾಗಿ ಸಿಪಿಐ ಮಹ್ಮದಫಸಿವುದ್ದೀನ, ಪಿಎಸ್‌ಐ ಸಂಜಯ ತಿಪರೆಡ್ಡಿ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು. ಮೌಲಾನಾ ಮುಫ್ತಿ ಅಫ್ತಾಬ ಈದ್ ಉಲ್ ಫಿತ್ರನ ಸಂದೇಶ ಹೇಳಿದರು.

Latest News

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಕೊಣ್ಣೂರಿನ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಜ.14 ರಂದು ಸಂಜೆ 5 ಗಂಟೆಗೆ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ:                     M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ: M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಮುದ್ದೇಬಿಹಾಳ : ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಮುನ್ನಾ ದಿನ

ತಂಗಡಗಿಯಲ್ಲಿ ದಿನದರ್ಶಿಕೆ ಬಿಡುಗಡೆ :                             ಸತ್ಯದ ಪರ ವರದಿಗಳಿಗೆ ಸದಾ ಜಯ-ಶ್ರೀಶೈಲ ಮರೋಳ

ತಂಗಡಗಿಯಲ್ಲಿ ದಿನದರ್ಶಿಕೆ ಬಿಡುಗಡೆ : ಸತ್ಯದ ಪರ ವರದಿಗಳಿಗೆ ಸದಾ ಜಯ-ಶ್ರೀಶೈಲ ಮರೋಳ

ಮುದ್ದೇಬಿಹಾಳ : ಸತ್ಯದ ಪರವಾಗಿರುವ ವರದಿಗಳಿಗೆ ಸದಾ ಸಾಮಾಜಿಕವಾಗಿ ಸ್ಪಂದನೆ ಇದ್ದೇ ಇರುತ್ತದೆ.ವರದಿಯನ್ನು ಉತ್ಪೇಕ್ಷೆಯಾಗಿ

ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಜಿಲ್ಲಾ ಅಧಿಕಾರಿಗೆ ಮನವಿ.

ಕಚಕನೂರ ಗ್ರಾಮದ : ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕಚಕನೂರ ಗ್ರಾಮದ ಸ.ನಂ. 122/3

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜುಮುದ್ದೇಬಿಹಾಳ : ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಇದೇ ಪ್ರಥಮ ಬಾರಿಗೆ ಮುದ್ದೇಬಿಹಾಳದಲ್ಲಿ ಭಾನುವಾರ ಹಿಂದೂ ಮಹಾ ಸಮ್ಮೇಳನ ನಡೆಯಲಿದ್ದು ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.ಮುದ್ದೇಬಿಹಾಳದ ಬನಶಂಕರಿ ದೇವಸ್ಥಾನದಿಂದ ಮದ್ಯಾಹ್ನ 3.45 ಕ್ಕೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಅಂದಾಜು 20 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.ಸಂಜೆ 5.30 ಕ್ಕೆ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿರುವ

ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಸೊಸೆ:       ಹುಲ್ಲೂರು ತಾಂಡಾದ ದೀಪಾ ಸಿನ್ನೂರಗೆ ಡಾಕ್ಟರೇಟ್

ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಸೊಸೆ: ಹುಲ್ಲೂರು ತಾಂಡಾದ ದೀಪಾ ಸಿನ್ನೂರಗೆ ಡಾಕ್ಟರೇಟ್

ಮುದ್ದೇಬಿಹಾಳ (ವಿಜಯಪುರ ) : ಪ್ರಸ್ತುತ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ (KSAWU) ಬಯೋಇನ್ಫರ್ಮ್ಯಾಟಿಕ್ಸ್ ವಿಭಾಗದಲ್ಲಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ದೀಪಾ ಕೆ. ಸಿನ್ನೂರ ಅವರಿಗೆ ಬಿ.ಎಲ್.ಡಿ.ಇ. (ಪರಿಗಣಿತ ವಿಶ್ವವಿದ್ಯಾಲಯ) ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿ ಗೌರವಿಸಿದೆ. ​​        ಈಚೇಗೆ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ​ ಬಿಎಲ್ ಡಿಇ  ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.           ಇವರು ವಿಜಯಪುರದ ಶ್ರೀ ಬಿ.