
ಮುದ್ದೇಬಿಹಾಳ : ತಾಲ್ಲೂಕು ನಾಗರಬೆಟ್ಟದ ಬಸ್ ನಿಲ್ದಾಣದ ಬಳಿ ಇರುವ ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ. 6 ರಂದು ಟ್ಯಾಲೆಂಟ್ ಅವಾರ್ಡ್-2025 ಸ್ಕಾಲರ್‌ಶಿಪ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಚೇರಮನ್ ಬಿ.ಜಿ.ಮಠ ತಿಳಿಸಿದರು.

ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಸ್ಕಾಲರ್‌ಶಿಪ್ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು.
ಒಟ್ಟು 50 ಲಕ್ಷ ರೂ. ಮೌಲ್ಯದ ಸ್ಕಾಲರ್‌ಶಿಪ್ ಪರೀಕ್ಷೆ ಇದಾಗಿದ್ದು ಮೊದಲ ಐದು ರ‍್ಯಾಂಕ್ ಬರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಇನ್ನುಳಿದ 15 ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯು ಶಿಕ್ಷಣ ಉಚಿತವಾಗಿ ಸಂಸ್ಥೆಯಿದ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯಿಂದ 2024ರಲ್ಲಿ ಡೆಂಟಲ್ 3, ಬಿಎಎಂಎಸ್ ನಾಲ್ಕು, ಪಶು ಇಲಾಖೆ 2, ಬಿಎಸ್ಸಿ ಅಗ್ರಿ 33, ಇಂಜಿನಿಯರಿಂಗ್ 121 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ನೀಟ್‌ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ ಎಂದು ಹೇಳಿದರು.
ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಇರ್ಫಾನ್ ಬಾಗವಾನ ಮಾತನಾಡಿ, ಟ್ಯಾಲೆಂಟ್ ಅವಾರ್ಡ್ ಸ್ಕಾಲರ್‌ಶಿಪ್ ಪರೀಕ್ಷೆ ಬರೆಯುವ ಮೊದಲ ಐದು ವಿದ್ಯಾರ್ಥಿಗಳಿಗೆ ನಗದು ಬಹುಮಾನ, 15 ವಿದ್ಯಾರ್ಥಿಗಳಿಗೆ ಸಂಪೂರ್ಣ ಸೇರಿ ಒಟ್ಟು 20 ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರಥಮ ಬಹುಮಾನ 25,000 ರೂ. ನಗದು 2.25 ಲಕ್ಷ ರೂ. ಸ್ಕಾಲರಶಿಪ್ ಸೇರಿ 2.50 ಲಕ್ಷ ರೂ, ಎರಡನೇ ಬಹುಮಾನ 20,000 ರೂ. ನಗದು 2.25 ಲಕ್ಷ ರೂ. ಸ್ಕಾಲರಶಿಪ್ ಸೇರಿ 2.45 ಲಕ್ಷ ರೂ, ಮೂರನೇ ಬಹುಮಾನ 15,000 ರೂ. ನಗದು 2.25 ಲಕ್ಷ ರೂ. ಸ್ಕಾಲರಶಿಪ್ ಸೇರಿ 2.40 ಲಕ್ಷ ರೂ, ನಾಲ್ಕನೇ ಬಹುಮಾನ 10 ಸಾವಿರ ರೂ. ನಗದು 2.25 ಸ್ಕಾಲರಶಿಪ್ ಸೇರಿ 2.35 ಲಕ್ಷ ರೂ, ಐದನೇ ಬಹುಮಾನ 5000 ರೂ. ನಗದು 2.25 ಲಕ್ಷ ರೂ. ಸ್ಕಾಲರ್‌ಶಿಪ್ ಸೇರಿ 2.30 ಲಕ್ಷ ರೂ ನೀಡಲಾಗುತ್ತದೆ ಎಂದು ಹೇಳಿದರು.
ಎಸ್.ಡಿ.ಕೆ ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯಗುರು ಶಿವಯ್ಯ ಹಿರೇಮಠ ಮಾತನಾಡಿ, ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಬಹುದು ಎಂದು ತಿಳಿಸಿದರು.
ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಗುರು ಹೀರೂ ನಾಯಕ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸಲು ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯು ಒಂದು ಉತ್ತಮ ವೇದಿಕೆ ಒದಗಿಸುತ್ತದೆ. ಪಾಲಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಸ್ಥೆಯ ಸದಸ್ಯ ಪ್ರಜ್ವಲ ಮಠ, ಕಾರ್ಯದರ್ಶಿ ಸಿದ್ದಯ್ಯ ಮಠ, ಸಿಬ್ಬಂದಿ ಎಲ್.ಎಚ್.ನದಾಫ ಇದ್ದರು.
ಪರೀಕ್ಷೆಗೆ ಬರಲು ಮುದ್ದೇಬಿಹಾಳದಲ್ಲಿ ಏ.6 ರಂದು ಬೆಳಗ್ಗೆ 9 ರಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಲು ಮೊ. 9686906101 ಸಂಪರ್ಕಿಸಬಹುದು. ಆಸಕ್ತರು ಮೊ. 8197422759, 7019251923, 8095191614 ಸಂಪರ್ಕಿಸಬಹುದಾಗಿದೆ.