ಬಸವ ಬಾಲಭಾರತಿ ಶಾಲೆಯಲ್ಲಿ ದತ್ತಿ ಉಪನ್ಯಾಸ : ಶರಣರ ವಚನಗಳ ಸಂದೇಶ ಪಾಲಿಸೋಣ-ಬಿರಾದಾರ

ಬಸವ ಬಾಲಭಾರತಿ ಶಾಲೆಯಲ್ಲಿ ದತ್ತಿ ಉಪನ್ಯಾಸ : ಶರಣರ ವಚನಗಳ ಸಂದೇಶ ಪಾಲಿಸೋಣ-ಬಿರಾದಾರ

Ad
Ad

ಮುದ್ದೇಬಿಹಾಳ : ಬಸವಾದಿ ಶರಣರು ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಮಾರ್ಗದರ್ಶನವನ್ನು ವಚನಗಳಲ್ಲಿ ನೀಡಿದ್ದು ಅವುಗಳನ್ನು ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಢವಳಗಿ ಬಸವ ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ಧನಗೌಡ ಬಿರಾದಾರ ಹೇಳಿದರು.

Ad
Ad

ತಾಲ್ಲೂಕು ಢವಳಗಿ ಬಸವ ಬಾಲಭಾರತಿ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್,ಯುವ ಘಟಕ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ಲಿಂ.ಯುಮುನಾಬಾಯಿ ಕಲಕೇರಿ, ದಿ.ಎಚ್.ಆರ್.ಕಲಕೇರಿ ಹಾಗೂ ಗಿರಿಜಾಬಾಯಿ ಕಲಕೇರಿ ಅವರ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣರು ಸಮಾಜದಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀವಂತ ಇರುವ ಅನಿಷ್ಟ ಆಚರಣೆಗಳನ್ನು ತೊಡೆದು ಹಾಕಲು ನಿತ್ಯವೂ ನಾವು ಶರಣರ ವಚನಗಳನ್ನು ಅಧ್ಯಯನ ಮಾಡಬೇಕು.ದಿ.ಎಚ್.ಆರ್.ಕಲಕೇರಿ ಅವರು ಶಿಕ್ಷಕರಾಗಿದ್ದುಕೊಂಡು ಶರಣ ತತ್ವವನ್ನು ಅನುಸರಿಸಿದವರು.ಅವರ ಪುತ್ರ ಐಎಎಸ್ ಉತ್ತೀರ್ಣರಾಗಿ ದೇಶದ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವುದನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರಿಗೆ ದೈವ ಕರುಣಿಸಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ಸಿ.ಜಿ.ನಾಗರಾಳ, ಆಯುರ್ವೇದ ವೈದ್ಯ ರಾಜಶೇಖರ ಚಿರ್ಚನಕಲ್ ಮಾತನಾಡಿ, ಕಲಕೇರಿ ಅವರ ಜೀವನ ಹಾಗೂ ಆಯುರ್ವೇದದಿಂದ ಆಗುವ ಪ್ರಯೋಜನಗಳ ಅರಿವು ಮೂಡಿಸಿದರು.ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ್, ಕಾರ್ಯದರ್ಶಿ ಜಿ.ಎಸ್.ಕೋರಿ, ಬಾಪುಗೌಡ ಪಾಟೀಲ್, ಮಲ್ಲಿಕಾರ್ಜುನ ಕೋರಿ,ಮಡಿವಾಳಪ್ಪಗೌಡ ಬಿರಾದಾರ,ಶಂಕರಗೌಡ ಬಿರಾದಾರ, ಕದಳಿ ವೇದಿಕೆ ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ಮಹಾದೇವಿ ಕಂಠಿ, ಭಾರತಿ ಪಾಟೀಲ್ ,ಶಾಲೆಯ ಮಖ್ಯಗುರು ರಮೇಶ ಮೂಲಿಮನಿ ಮೊದಲಾದವರು ಇದ್ದರು.ನಾನಾಗೌಡ ಕೊಣ್ಣೂರ ಬಸವಭಾವ ಪೂಜೆ ಮಾಡಿದರು.ಎಸ್.ಎ.ಬೇವಿನಗಿಡದ ಸ್ವಾಗತಿಸಿದರು.

Latest News

ದೇಶದ ಋಣ ತೀರಿಸಲು ಯುವಕರು ಮುಂದೆ ಬನ್ನಿ : ಚಕ್ರವರ್ತಿ ಸೂಲಿಬೆಲೆ

ದೇಶದ ಋಣ ತೀರಿಸಲು ಯುವಕರು ಮುಂದೆ ಬನ್ನಿ : ಚಕ್ರವರ್ತಿ ಸೂಲಿಬೆಲೆ

ಗುಳೆದಗುಡ್ಡ : ನಮ್ಮ ಹಿರಿಯರು 5 ಋಣಗಳನ್ನು ತೀರಿಸಲು ಹೆಳಿದ್ದಾರೆ. ಅವುಗಳೆಂದರೆ ದೇವರ ಋಣ,

ಭಾರೀ ಬಿರುಗಾಳಿ,ಆಲಿಕಲ್ಲು ಮಳೆ:4000 ಪಪ್ಪಾಯಿ ಗಿಡಗಳು ನಾಶ, ದ್ರಾಕ್ಷಿ ಬೆಳೆಗೂ ಹಾನಿ

ಭಾರೀ ಬಿರುಗಾಳಿ,ಆಲಿಕಲ್ಲು ಮಳೆ:4000 ಪಪ್ಪಾಯಿ ಗಿಡಗಳು ನಾಶ, ದ್ರಾಕ್ಷಿ ಬೆಳೆಗೂ ಹಾನಿ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ, ಅಕಾಲಿಕ ಆಲಿಕಲ್ಲು

ವಾರ್ತಾ ಇಲಾಖೆಯಿಂದ ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೊಂದಣಿಗೆ ಅರ್ಜಿ ಆಹ್ವಾನ

ವಾರ್ತಾ ಇಲಾಖೆಯಿಂದ ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೊಂದಣಿಗೆ ಅರ್ಜಿ ಆಹ್ವಾನ

ಬೆಂಗಳೂರು : ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್‌ ಜಾಹೀರಾತುಗಳ

ಏ. 23 ಪ್ರತಿಭಟನೆಗೆ ಕರೆ ನೀಡಿದ : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ನರಸಿಂಹ ನಾಯಕ ರಾಜೂಗೌಡರು

ಏ. 23 ಪ್ರತಿಭಟನೆಗೆ ಕರೆ ನೀಡಿದ : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ನರಸಿಂಹ ನಾಯಕ ರಾಜೂಗೌಡರು

ವರದಿ : ಶಿವು ರಾಠೋಡ ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ಹಾಗೂ ದಲಿತರ ಹಣ

ಮೇ.18 ರಂದು ಕಲ್ಯಾಣ ಮಹೋತ್ಸವ :ಸಾಮೂಹಿಕ ವಿವಾಹ : ಹೆಸರು ನೋಂದಣಿಗೆ ಸೂಚನೆ

ಮೇ.18 ರಂದು ಕಲ್ಯಾಣ ಮಹೋತ್ಸವ :ಸಾಮೂಹಿಕ ವಿವಾಹ : ಹೆಸರು ನೋಂದಣಿಗೆ ಸೂಚನೆ

ಮುದ್ದೇಬಿಹಾಳ : ತಮ್ಮ ಪುತ್ರ ಕಿರಣ ಮದರಿ ಅವರ ಕಲ್ಯಾಣ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.18 ರಂದು ಆಯೋಜಿಸಲಾಗಿದ್ದು ಆಸಕ್ತ ವಧು ವರರು ತಮ್ಮ ಹೆಸರುಗಳನ್ನು ನೋಂದಾಯಿಸಲು ಕಲ್ಯಾಣ ಮಹೋತ್ಸವ ಸಮೀತಿ ಸಂಚಾಲಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್. ಮದರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿರುವ ಎಂ. ಎನ್. ಮದರಿ ಅವರು, ಉಳ್ಳವರ ಮದುವೆಗಳು ದುಂದುವೆಚ್ಚದಿಂದ

ನಾಗರಬೆಟ್ಟ : ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.99.46 ಫಲಿತಾಂಶ

ನಾಗರಬೆಟ್ಟ : ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.99.46 ಫಲಿತಾಂಶ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಗುಡ್ಡದ ಬಳಿ ಇರುವ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.99.46 ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 1120 ವಿದ್ಯಾರ್ಥಿಗಳಲ್ಲಿ 1114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 658 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಪಿಸಿಎಂಬಿ ವಿಭಾಗದಲ್ಲಿ 501 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ವಜ್ರಾ ಆಚಾರಿ ಶೇ.97.5 ಪ್ರಥಮ, ಸಾನಿಕಾ ಘೂಳಣ್ಣವರ ಶೇ.97.16 ದ್ವಿತೀಯ, ಸಂಪತ್ತಕುಮಾರ ಹುಗ್ಗಿ, ಸ್ನೇಹಾ