ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದ ಅಂಗವಾಡಿ ಕಾರ್ಯಕರ್ತೆಯರಿಬ್ಬರ ಬಡಿದಾಟಕ್ಕೆ ಸಿಡಿಪಿಒ , ಮೇಲ್ವಿಚಾರಕಿಯೇ ನೇರ ಹೊಣೆಗಾರರು.ಅವರನ್ನು ಅಮಾನತುಗೊಳಿಸಬೇಕು ಎಂದು ಅಂಗನವಾಡಿ ನೌಕರರ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ನೀಲಮ್ಮ ಪಾಟೀಲ್ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯಿAದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಿಲೇಕೆಮ್ಮ ನಗರದ ಅಂಗನವಾಡಿ ಕೇಂದ್ರಕ್ಕೆ ಸಂಬAಧಿಸಿದAತೆ ಕಾರ್ಯಕರ್ತೆ ಶಾಂತಾ ಮಾಮನಿ ಅವರನ್ನು ಸುಳ್ಳು ಆರೋಪಗಳ ಆಧಾರದ ಮೇಲೆ ವರ್ಗಾವಣೆಗೆ ಹುನ್ನಾರ ನಡೆಸಿದಾಗ ಪ್ರತಿಭಟನೆ ನಡೆಸಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಲಿಖಿತ ಪತ್ರ ಸಲ್ಲಿಸಿ ಕಾರ್ಯಕರ್ತೆಗೆ ಕಿರುಕುಳ ಕೊಡುತ್ತಿರುವ ಬಗ್ಗೆ ಗಮನ ಸೆಳೆಯಲಾಗಿತ್ತು.ಆಗ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಹಾಗೆ ಬಿಟ್ಟಿದ್ದರು.ಕಾರ್ಯಕರ್ತೆ ಮಗಳ ಅನಾರೋಗ್ಯದ ಸಲುವಾಗಿ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಹೋದ ಸಮಯವನ್ನು ತಿಳಿದುಕೊಂಡು ಸಿಡಿಪಿಓ ಶಿಫಾರಸ್ಸಿನ ಮೇರೆಗೆ ಇಲಾಖೆಯ ಉಪನಿರ್ದೇಶಕರು ಶಾಂತಾ ಮಾಮನಿ ಅವರ ಜಾಗಕ್ಕೆ ರೇಣುಕಾ ರಾಮಕೋಟಿ ಎನ್ನುವರನ್ನು ನಿಯೋಜಿಸಿದ್ದಾರೆ ಎಂದು ದೂರಿದರು.
ಸಿಡಿಪಿಒ, ಮೇಲ್ವಿಚಾರಕಿಯರು ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ಉಪನಿರ್ದೇಶಕರು ಸ್ವಜಾತಿ ಪ್ರೇಮ ಮೆರೆದಿದ್ದು ತಮ್ಮ ವರ್ಗಾವಣೆ ಆದೇಶ ಬಾರದೇ ಮೂಲ ಕೇಂದ್ರಕ್ಕೆ ಹೋದಾಗ ಅಲ್ಲಿದ್ದ ರೇಣುಕಾ ಹಾಗೂ ಅವರ ಜೊತೆಗೆ ಇದ್ದವರು ಶಾಂತಾ ಅವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತೆ ಶಾಂತಾ ಮಾಮನಿ ಮಾತನಾಡಿ, ನನಗೆ ಮಗಳ ಅನಾರೋಗ್ಯದ ಸಲುವಾಗಿ ರಜೆ ಪಡೆದುಕೊಂಡಿದ್ದೆ.ಒAದೆರಡು ದಿನ ಬರಲು ಆಗುವುದಿಲ್ಲ ಎಂದು ಮೇಲ್ವಿಚಾರಕಿಯರಿಗೂ ತಿಳಿಸಿದ್ದೆ.ಆದರೆ ನನಗೆ ಬೇರೆಡೆ ವರ್ಗಾವಣೆ ಆಗಿದೆ ಎಂದು ಮೌಖಿಕವಾಗಿ ತಿಳಿಸಿದರು.ಇದಾದ ಬಳಿಕ ನಾನು ಮೂಲಕ ಕೆಲಸ ಮಾಡುವ ಕೇಂದ್ರಕ್ಕೆ ಹೋದಾಗ ಅಲ್ಲಿದ್ದ ರೇಣುಕಾ ಹಾಗೂ ಅವರ ಸಂಗಡಿಗರು ಹಲ್ಲೆ ಮಾಡಿದರು.ನಾನು ಒಂದೆರಡು ಏಟು ಅವರಿಗೆ ಮರಳಿ ಕೊಟ್ಟಿದ್ದೇನೆ.ಮೂವ್ವತ್ತು ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಬೇರೆಡೆ ವರ್ಗಾವಣೆ ಮಾಡಿದರೆ ಹೇಗೆ ಸಹಿಸುವುದು ? ಬಾಣಂತಿಯರು, ಮಕ್ಕಳು ಆಹಾರ ಕೊಟ್ಟಿಲ್ಲ ಎಂದು ಹೇಳಿದರೆ ಅಲ್ಲಿಂದ ಬೇರೆ ಎಲ್ಲಿಯಾದರೂ ಕಳಿಸಿದರೂ ಅಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಮಧ್ಯೆಯೇ ದ್ವೇಷದ ವಾತಾವರಣ ಬಿತ್ತುತ್ತಿರುವ ಸಿಡಿಪಿಒ ಶಿವಮೂರ್ತಿ ಕುಂಬಾರ, ಮೇಲ್ವಿಚಾರಕಿಯವರನ್ನು ಅಮಾನತುಗೊಳಿಸಬೇಕು.ಕಾರ್ಯಕರ್ತೆ ಶಾಂತಾ ಮಾಮನಿ ಅವರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ನ.11 ರಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಶೋಭಾ ಕಾಖಂಡಕಿ, ಎಸ್.ಎ.ಹುಣಶ್ಯಾಳ ಸೇರಿದಂತೆ ಹಲವರು ಇದ್ದರು.
ಪಿಲೇಕೆಮ್ಮ ನಗರದ ಅಂಗನವಾಡಿ ಕೇಂದ್ರಕ್ಕೆ 15 ಬಾರಿ ಭೇಟಿ ಕೊಟ್ಟಿದ್ದೇನೆ.ಸದರಿ ಕಾರ್ಯಕರ್ತೆ ಶಾಂತಾ ಮಾಮನಿ ಅವರು ಮೇಲ್ವಿಚಾರಕಿಯವರು ವಗಾವಣೆ ಪ್ರತಿ ಕೊಡಲು ಹೋದರೂ ಪಡೆದುಕೊಂಡಿಲ್ಲ.ಜಗಳದ ವಿಷಯಕ್ಕೆ ಸಂಬAಧಿಸಿದAತೆ ಕಾರಣ ಕೇಳಿ ಇಬ್ಬರಿಗೂ ನೋಟಿಸ್ ಕೊಟ್ಟಿದ್ದೇವೆ.ಮೂರು ದಿನದಲ್ಲಿ ಅವರಿಂದ ಉತ್ತರ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಸಿಡಿಪಿಓ ಶಿವಮೂರ್ತಿ ಕುಂಬಾರ ಪತ್ರಿಕೆಗೆ ತಿಳಿಸಿದ್ದಾರೆ.