
ಮುದ್ದೇಬಿಹಾಳ : ಸಮಾಜಕ್ಕೆ ಪ್ರೇರಣೆಯಾಗುವ ಸೇವೆಯನ್ನು ನಾವೆಲ್ಲ ಮಾಡಬೇಕು ಎಂದು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್ ಹೇಳಿದರು.

ಪಟ್ಟಣದ ಮೇಲಿನ ಓಣಿಯಲ್ಲಿ ಲಾಡ್ಲೇಮಶ್ಯಾಕ್ ನಾಯ್ಕೋಡಿ ಕುಟುಂಬದವರಿಂದ ಭಾನುವಾರ ಬಡ ಮುಸ್ಲಿಂರಿಗೆ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಚಿಂತನೆಯಳ್ಳವರಿಂದ ಇಂತಹ ಕಾರ್ಯ ಸಾಧ್ಯ ಎಂದರು.
ಸಹಕಾರಿ ಧುರೀಣ ಲಾಡ್ಲೇಮಶಾಕ ನಾಯ್ಕೋಡಿ ಮಾತನಾಡಿ, ನನ್ನ ತಾಯಿಯ ಆಸೆಯಂತೆ ಏಳು ವರ್ಷದಿಂದ ಆಹಾರಧಾನ್ಯ ಕಿಟ್‌ನ್ನು ಕೊಡುವ ಕೆಲಸ ಮಾಡುತ್ತಿದ್ದೇವೆ. ನಾವು ಇದು ಪ್ರಚಾರಕ್ಕೆ ಮಾಡುತ್ತಿಲ್ಲ. ಇದು ಮತ್ತೊಬ್ಬರಿಗೆ ಪ್ರೇರಣೆದಾಯಕವಾಗಲಿ ಎಂದು ಕಿಟ್ ವಿತರಿಸುತ್ತಿದ್ದೇವೆ ಎಂದರು.
ಎಂಜಿವಿಸಿ ಕಾಲೇಜು ಪ್ರಾಧ್ಯಾಪಕ ಅಬ್ದುಲರಹೀಮ ಮುಲ್ಲಾ ಮಾತನಾಡಿ, ಶ್ರೀಮಂತರು ಧಾನ ಧರ್ಮ ಮಾಡುವೂದು ದೊಡ್ಡದಲ್ಲ. ಆದರೆ ಲಾಡ್ಲೇಮಶಾಕ ನಾಯ್ಕೋಡಿ ಅವರು ಅಷ್ಟೊಂದು ಉಳ್ಳವರಲ್ಲ. ಮಧ್ಯಮ ವರ್ಗದಲ್ಲಿದ್ದುಕೊಂಡು ತಾವು ದುಡಿದ ಆದಾಯದಲ್ಲಿ ಬಡವರಿಗೆ ಮೀಸಲಿಟ್ಟು ರಂಜಾನ ತಿಂಗಳಲ್ಲಿ ಜಕಾತಿನ ಹೆಸರಲ್ಲಿ ತಮ್ಮ ಸಮಾಜ ಅಷ್ಟೇ ಅಲ್ಲದೆ ಇತರೆ ಸಮಾಜದ ಬಡ ಕುಟುಂಬದವರನ್ನು ಮನೆಗೆ ಕರಿಯಿಸಿ ಆಹಾರಧಾನ್ಯ ಕಿಟ್ ವಿತರಿಸುವುದು ಇನೊಬ್ಬರಿಗೆ ಪೇರಣೆಯಾಗಿದೆ ಎಂದರು.
ದಿವ್ಯ ಸಾನಿದ್ಯವನ್ನು ಮೌಲಾನ ನಿಸಾರಅಹ್ಮದ ಜಾಮಿಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮುಖಂಡರಾದ ಎಂ. ಬಿ. ಜಕ್ಕೇರಾಳ, ಹೈದರಲಿ ನಾಯ್ಕೋಡಿ, ರಫೀಕ ಶಿರೋಳ, ಅಜೀಜ್ ಢವಳಗಿ, ನಬೀಲಾಲ ನಾಯ್ಕೋಡಿ, ದಾವಲಬಿ ನಾಯ್ಕೋಡಿ, ಬುಡ್ಡೇಸಾಬ ಚಪ್ಪರಬಂದ ಇದ್ದರು.