Doctor's Service Memorable : Tadasada

ವೈದ್ಯರ ಸೇವೆ ಸ್ಮರಣೀಯ : ತಡಸದ

ವೈದ್ಯರ ಸೇವೆ ಸ್ಮರಣೀಯ : ತಡಸದ

ಮುದ್ದೇಬಿಹಾಳ : ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಮ್ಮ ವೃತ್ತಿ ನಿಷ್ಠೆ ತೋರುತ್ತಿರುವ ಎಲ್ಲ ವೈದ್ಯರ ಸೇವೆ ಸ್ಮರಣೀಯವಾದದ್ದು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿದ್ಯಾ ತಡಸದ ಹೇಳಿದರು.

ಪಟ್ಟಣದ ಕುಂಟೋಜಿ ರಸ್ತೆಯಲ್ಲಿರುವ ಬಸವ ಇಂಟರ್‌ನ್ಯಾಶನಲ್ ಸ್ಕೂಲನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ವೈದ್ಯರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ಶಾಲೆಯ ಪ್ರಾಚಾರ್ಯೆ ಪ್ರಭಾ ಚಿನಿವಾರ ಮಾತನಾಡಿ, ಸಮಾಜದ ಎಲ್ಲ ರಂಗಗಳಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಆಕೆಯ ಆರೋಗ್ಯದ ಕಾಳಜಿಯನ್ನು ಈ ಕ್ಷೇತ್ರದಲ್ಲಿರುವ ಪರಿಣತ ವೈದ್ಯರು ಮಾಡುತ್ತಿರುವುದು ಮಾದರಿಯಾದದ್ದು ಎಂದರು.

ಪಟ್ಟಣದ 15 ಮಹಿಳಾ ವೈದ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರಮುಖರಾದ ಗಾಯತ್ರಿ ದೇಶಪಾಂಡೆ, ರಾಜೇಶ್ವರಿ ಪಾಟೀಲ ನಡಹಳ್ಳಿ, ಚೌಡಮ್ಮ ಶಿವಯೋಗಿಮಠ, ಪಿಂಕಿ ಓಸ್ವಾಲ್, ಭಾಗ್ಯಶ್ರೀ ಬಿರಾದಾರ, ಜಯಾ ಸಾಲಿಮಠ, ಜಯಾ ಪುರಾಣಿಕಮಠ ಮೊದಲಾದವರು ಇದ್ದರು.

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ