ಸಿನೇಮಾ ನಟ,ನಟಿಯರನ್ನು ರೋಲ್ ಮಾಡೆಲ್ ಮಾಡಿಕೊಳ್ಳಬೇಡಿ-ಸಿದ್ದನಕೊಳ್ಳ ಶ್ರೀ

ಸಿನೇಮಾ ನಟ,ನಟಿಯರನ್ನು ರೋಲ್ ಮಾಡೆಲ್ ಮಾಡಿಕೊಳ್ಳಬೇಡಿ-ಸಿದ್ದನಕೊಳ್ಳ ಶ್ರೀ

ಮುದ್ದೇಬಿಹಾಳ : ಯಾವುದೇ ಸ್ವಾಮೀಜಿಯಿದ್ದರೂ ತಾವು ಪಡೆದುಕೊಂಡ ದಾನವನ್ನು ಸಮಾಜಕ್ಕೆ ಮರಳಿ ಕೊಟ್ಟಿದ್ದಾರೆ ಹೊರತು ಸ್ವಂತಕ್ಕೆ ಎಂದಿಗೂ ಬಳಸಿಲ್ಲ.ನಿವೃತ್ತ ಶಿಕ್ಷಕ ಕೆ.ಪಿ.ಹಿರೇಮಠ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಕೊಟ್ಟೂರೇಶ್ವರ ಮಠ ಕಟ್ಟುವ ಸಂಕಲ್ಪ ಕೈಗೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಸಿದ್ಧನಕೊಳ್ಳ ಕಲಾಪೋಷಕ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಪಟ್ಟಣದ ವಿದ್ಯಾನಗರದಲ್ಲಿ ಗುರು ಕೊಟ್ಟೂರೇಶ್ವರ ಗ್ರಾಮೀಣ ವಿವಿದೋದ್ಧೇಶಗಳ ವಿದ್ಯಾಪ್ರಸಾರ ಸಂಸ್ಥೆಯಿoದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ನೂತನ ಶಿಲಾಮಠ(ಕಲ್ಲಿನಮಠ)ದ ಭೂಮಿಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿನೇಮಾ ನಟ,ನಟಿಯರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಳ್ಳಬೇಡಿ.ರಿಯಲ್ ಹಿರೋಗಳು ಎಂದರೆ ನಿಮ್ಮ ತಂದೆ ತಾಯಂದಿರು.ಅವರಿಗೆ ಗೌರವ ಕೊಡಬೇಕು.ಅವರನ್ನೇ ರೋಲ್ ಮಾಡೆಲ್ ಆಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ಕೊಟ್ಟೂರೇಶ್ವರರು ಮಹಾಶಿವರಣರಾಗಿದ್ದರು.ಜಂಗಮ ಸಮಾಜದ ಸಂಬAಧ ನೀರು ಮೀನಿನ ಸಂಬoಧ.ಜoಗಮ ಅಂದರೆ ಜಗದ್ಭರಿತ.ಸಮಾಜಕ್ಕಾಗಿ ಜಂಗಮರಿದ್ದಾರೆ. ಅದಕ್ಕೆ ಕೆ.ಪಿ.ಹಿರೇಮಠ ಅಂತವರು ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಕುಟುಂಬದವರ ಸಹಮತದಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಾಗೆಯನ್ನು ಕೊಟ್ಟು ಮಠ ಕಟ್ಟಲು ಸಹಕಾರ ನೀಡುವುದಾಗಿ ಶಿಕ್ಷಕ ದಂಪತಿ ಕೆ.ಪಿ.ಹಿರೇಮಠ ಅವರು ಹೇಳಿರುವುದು ದಾನದ ಮಹತ್ವವನ್ನು ಸಾರಿದ್ದಾರೆ.ಅವರಂತಹ ದಾನಿಗಳ ಸಂಖ್ಯೆ ಹೆಚ್ಚಬೇಕು.ಮಠದ ನಿರ್ಮಾಣಕ್ಕೆ ನಮ್ಮಿಂದಾದ ಸಹಕಾರ ನೀಡುವುದಾಗಿ ಹೇಳಿದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್ ಮಾತನಾಡಿ, ತಮ್ಮ ಮನೆ ಮಾರಿಯಾದರೂ ಗುಡಿಯನ್ನು ಕಟ್ಟುತ್ತೇನೆ ಎಂದಿರುವ ಕೆ.ಪಿ.ಹಿರೇಮಠ ಸರ್ ಅವರ ಆದರ್ಶ ಮಾದರಿಯಾದದ್ದು.ಕೆಲವರು ಐದು ರೂಪಾಯಿ ದಾನ ಮಾಡಿ 95 ರೂಪಾಯಿ ತಮ್ಮಲ್ಲಿ ಇಟ್ಟುಕೊಂಡು ಐದು ರೂಪಾಯಿ ದಾನ ಮಾಡಿದ್ದನ್ನೆ ಊರು ತುಂಬೆಲ್ಲ ಹೇಳಿಕೊಳ್ಳುತ್ತಾರೆ.ಆದರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ದೇವಸ್ಥಾನ ಮಠ ಕಟ್ಟುವ ಸಂಕಲ್ಪ ಕೈಗೊಂಡು ಸಾಕಾರ ಮೆರೆದಿರುವ ಸರಳತೆಯ ವ್ಯಕ್ತಿ ಹಿರೇಮಠ ಸರ್ ಅವರು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ ಎಂದರು.

ನಿವೃತ್ತ ಶಿಕ್ಷಕ ಕೆ.ಪಿ.ಹಿರೇಮಠ ಮಾತನಾಡಿ, ಭಕ್ತರಿದ್ದರೆ ಮಠ.ಮಠ ಇದ್ದರೆ ಭಕ್ತ.ಎರಡು ಕೊಂಡಿ ಇದ್ದ ಹಾಗೆ.ಒಂದಕ್ಕೊoದು ಬಿಟ್ಟು ಇಲ್ಲ.ಸಮಾಜದವರು,ದೈವದರು ಇದ್ದರೆ ಅದು ಯಶಸ್ವಿಯಾಗುತ್ತದೆ.ಜೀವನದಲ್ಲಿ ನಾವೆಲ್ಲ ಒಳ್ಳೆಯದನ್ನು ಮಾಡಬೇಕಾಗಿದೆ.ಸ್ವಾರ್ಥತೆ ಬೇಡವಾಗಿದೆ.ನಿಸ್ವಾರ್ಥತೆ ಬೇಕಾಗಿದೆ.ಮಠ ಕಟ್ಟುವ ಉದ್ದೇಶ ಸ್ವಾಮೀಜಿಗಳು ಉಳಿದುಕೊಳ್ಳುವುದಕ್ಕಾಗಿ,ದಾಸೋಹ ಕಾರ್ಯ ಕೈಗೊಳ್ಳುವುದಾಗಿದೆ.ಇದು ಊರ ದೈವದವರಿಗೆ ಅರ್ಪಿಸುತ್ತೇನೆ ಎಂದರು.

ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಚೀನಾದ ಯಾತ್ರಿಕ ಹೂಯೆನ್‌ತ್ಸಾಂಗ್ ತನ್ನ ಚಪ್ಪಲಿಗಳನ್ನು ತನ್ನ ದೇಶದಲ್ಲಿ ಬಿಟ್ಟು ಭಾರತಕ್ಕೆ ಬರುತ್ತಾರೆ.ಅಲ್ಲಿರುವ ಪತ್ರಕರ್ತರು ಹೂಯೇನ್‌ತ್ಸಾಂಗ್ ಅವರಿಗೆ ಕೇಳಿದಾಗ ಭಾರತದಲ್ಲಿ ಗುಡಿ ಸಂಸ್ಕೃತಿ ತವರೂರು,ಧರ್ಮ,ಪರಂಪರೆ ಜೀವಂತಿಕೆ ಇದೆ ಅದಕ್ಕಾಗಿ ನನ್ನ ದೇಶದಲ್ಲಿ ಚಪ್ಪಲಿ ಬಿಟ್ಟು ಭಾರತಕ್ಕೆ ಬಂದಿದ್ದೇನೆ ಎಂದು ಉತ್ತರಿಸುತ್ತಾನೆ.ನಮ್ಮ ಭಾಗದಲ್ಲಿ ಹಿರೇಮಠ ದಂಪತಿಗಳು ಮಠ ,ಗುಡಿ ಕಟ್ಟಿ ಬೆಳೆಸುವ ಕೆಲಸ ಮಾಡುತ್ತಿರುವುದು ಧಾರ್ಮಿಕ ಪರಂಪರೆಯ ಪುನರುಜ್ಜೀನವಾಗಿದೆ.ದೇವಸ್ಥಾನದ ನಿರ್ಮಾಣದ ಸಮಯದಲ್ಲಿ ಭಕ್ತಿಗೀತೆ,ವಚನಗೀತೆ,ಹಾಡು ಹಾಡಿಕೊಂಡು ದೇವಸ್ಥಾನ ಕಟ್ಟಬೇಕು.ಪ್ರತಿ ಕಲ್ಲಿಗೂ ಲಲಿತಾ ಸಹಸ್ರನಾಮ ಶಕ್ತಿ ತುಂಬಿ ಗುಡಿ ಕಟ್ಟಿದ್ದೇವೆ ಎಂಬ ದಾಖಲೆ ಮಾಡಲು ಇಲ್ಲಿನ ಮಹಿಳೆಯರು ಮುಂದಾಗಬೇಕು ಎಂದರು.

ಇಟಗಿ ಭೂಕೈಲಾಸ ಮೇಲುಗದ್ದುಗೆ ಮಠದ ಗುರುಶಾಂತವೀರ ಶಿವಾಚಾರ್ಯರು, ಸಾಹಿತಿ ಪ್ರೊ.ಬಿ.ಎಂ.ಹಿರೇಮಠ, ಗಣ್ಯರಾದ ಎಂ.ಬಿ.ನಾವದಗಿ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ನಿರ್ಮಾರ್ತೃಗಳಾದ ನಿವೃತ್ತ ಶಿಕ್ಷಕ ಕೆ.ಪಿ.ಹಿರೇಮಠ ಹಾಗೂ ಗುರು ಕೊಟ್ಟೂರೇಶ್ವರ ಗ್ರಾಮೀಣ ವಿವಿದೋದ್ಧೇಶಗಳ ವಿದ್ಯಾಪ್ರಸಾರ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.ಗಣ್ಯರಾದ ಬಿ.ಸಿ.ಮೋಟಗಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಇದ್ದರು.ಮಹಿಳಾ ಬಳಗದವರು ಪ್ರಾರ್ಥಿಸಿದರು.ಆಯ್.ಬಿ.ಹಿರೇಮಠ ಸ್ವಾಗತಿಸಿದರು.ಸಂಗಮ್ಮ ದೇವರಳ್ಳಿ ನಿರೂಪಿಸಿದರು.ಸುಧಾರಾಣಿ ಮೇಟಿ ವಂದಿಸಿದರು.

Latest News

Finest online slot online fairy tale casino no deposit incentive rules 2026

ContentMost recent online casino no-deposit extra now offers opposed: slot online

ದಶಮಾನೋತ್ಸವ ಆಚರಣೆ:                               ಮುದ್ದೇಬಿಹಾಳ ತಾಲ್ಲೂಕಿಗೆ ಧರ್ಮಸ್ಥಳ ಸಂಸ್ಥೆಯ ಕಾರ್ಯನಿರ್ವಹಣೆಗೆ 10 ವರ್ಷ

ದಶಮಾನೋತ್ಸವ ಆಚರಣೆ: ಮುದ್ದೇಬಿಹಾಳ ತಾಲ್ಲೂಕಿಗೆ ಧರ್ಮಸ್ಥಳ ಸಂಸ್ಥೆಯ ಕಾರ್ಯನಿರ್ವಹಣೆಗೆ 10 ವರ್ಷ

ಮುದ್ದೇಬಿಹಾಳ : ತಾಲ್ಲೂಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಣೆ ಆರಂಭಿಸಿ ಹತ್ತು ವರ್ಷಗಳು ಪೂರ್ಣಗೊಂಡ

$ slot game blazing star fifty Free Revolves

In to the Spinia Gambling enterprise, you key tables within the

Put 1 get a double stacks free 80 spins hundred free revolves to your Fortunium Gold Super Moolah

BlogsDouble stacks free 80 spins | Canadian step one money depositsPrecious metal Gamble 1 deposit added bonus, a hundred totally free revolves rather than depositAs to the reasons Enjoy inside the a casino with a great step 1 Lowest Deposit Local casino?Tips Enjoy Zeus The newest ThundererExactly what do I

Boat Online such broker bear blast slot free spins as Yahtzee

BlogsBroker bear blast slot free spins: The brand new Dice:Yahtzee ThumbAdded bonus Types You have made Which have 80 Totally free Revolves OffersEnjoy Games Both the assortment and you may equity away from casino slot games count whenever we should take advantage outside of the bonus rather than running into