
ಮುದ್ದೇಬಿಹಾಳ : ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ತಡೆಯಲು (Otoscope) ಓಟೋಸ್ಕೋಪ್ ಮೂಲಕ (ಟಾರ್ಚ್ ಹಾಕಿ) ಅಭ್ಯರ್ಥಿಗಳ ಶ್ರವಣೇಂದ್ರಿಯಗಳನ್ನು ಕೂಲಂಕಷವಾಗಿ ಪರೀಕ್ಷಿಸಲಾಯಿತು.
ಮುದ್ದೇಬಿಹಾಳದ ಅಭ್ಯುದಯ, ಎಸ್.ಎಸ್.ಶಿವಾಚಾರ್ಯ, ಶಾ ಎಸ್.ಪಿ.ಓಸ್ವಾಲ್ ಪ್ರಥಮ ದರ್ಜೆ ಕಾಲೇಜು, ನಾಗರಬೆಟ್ಟದ ಎಕ್ಸಪರ್ಟ್ ಸೈನ್ಸ್ ಕಾಲೇಜು, ಆಕ್ಸ್‌ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಾಗರಬೆಟ್ಟದ ಪಿಯು ಸೈನ್ಸ್ ಕಾಲೇಜು, ಎಂ.ಜಿ.ಎಂ.ಕೆ, ಜ್ಞಾನಭಾರತಿ, ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ನಡೆಸಲಾಯಿತು.
ಯಾವುದೇ ವಿದ್ಯುನ್ಮಾನ ಯಂತ್ರಗಳಾದ ಬ್ಲೂಟೂತ್ ಹಾಗೂ ಇಯರ್-ಫೋನ್‌ಗಳನ್ನು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ತಜ್ಞ ವೈದ್ಯರು, ಶ್ರವಣಶಾಸ್ತ್ರಜ್ಞರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ. ಸತೀಶ ತಿವಾರಿ , ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ, ಪಿಎಸ್ ಐ ಸಂಜಯ ತಿಪರಡ್ಡಿ ಸೇರಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಯದಂತೆ ನೋಡಿಕೊಂಡರು.
ಒಟ್ಟು 3532 ಅಭ್ಯರ್ಥಿಗಳು ಮುದ್ದೇಬಿಹಾಳದಲ್ಲಿ ಪರೀಕ್ಷೆ ಬರೆದರು ಎಂದು ಸರ್ಕಾರ. ಪಪೂ ಕಾಲೇಜು ಪ್ರಾಚಾರ್ಯ ಎಸ್.ಎಸ್.ಅಂಗಡಿ ತಿಳಿಸಿದ್ದಾರೆ.
