ಚಿಗುರು ಕಲಾ ಬಳಗದಿಂದ ಅನ್ನಸಂತರ್ಪಣೆ : ನ.11 ರಂದು ಕನ್ನಡ ರಾಜ್ಯೋತ್ಸವ, ಪುನೀತ್‌ಗೆ ನಮನ

ಚಿಗುರು ಕಲಾ ಬಳಗದಿಂದ ಅನ್ನಸಂತರ್ಪಣೆ : ನ.11 ರಂದು ಕನ್ನಡ ರಾಜ್ಯೋತ್ಸವ, ಪುನೀತ್‌ಗೆ ನಮನ

ಮುದ್ದೇಬಿಹಾಳ : ಸ್ಥಳೀಯ ಕಲಾವಿದರ ನೇತೃತ್ವದಲ್ಲಿ ಚಿಗುರು ಕಲಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ ನಮನ ಕಾರ್ಯಕ್ರಮ ನ.11 ರಂದು ಪಟ್ಟಣದ ಪುರಸಭೆಯ ಎದುರಿಗಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಮದ್ಯಾಹ್ನ 1.30 ಗಂಟೆಯಿAದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುವುದು.ಸಾಯಂಕಾಲ 4 ಗಂಟೆಗೆ ಟ್ರ‍್ಯಾಕ್ಸ್, ಕಾರು ಹಾಗೂ ಆಟೋಗಳಿಂದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಯಲಿದೆ ಎಂದು ಬಳಗದ ಸದಸ್ಯ ಗೋಪಾಲ ಹೂಗಾರ, ಶ್ರೀಶೈಲ್ ಹೂಗಾರ ತಿಳಿಸಿದರು.

ಸಂಜೆ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕಲಾವಿದರಾದ ಮ್ಯೂಜಿಕ್ ಮೈಲಾರಿ ಹಾಗೂ ಗಾಯಕಿ ತೃಪ್ತಿ ಧಾರವಾಡ ಅವರಿಗೆ ಸನ್ಮಾನಿಸಲಾಗುವುದು.ಪಟ್ಟಣದ ಪ್ರೌಢ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಹಾಲಿ, ಮಾಜಿ ಶಾಸಕರು, ಜನಪ್ರತಿನಿಧಿಗಳು,ಸಮಾಜ ಸೇವಕರು, ಗಣ್ಯರು ಆಗಮಿಸುವರು ಎಂದು ಅವರು ತಿಳಿಸಿದರು.

ಕಲಾವಿದರಾದ ಮುನೀರ ಅವಟಗೇರಿ,ವಿನಾಯಕ ಭಟ್, ನಿಜಾಮ್ ಬಾಗೇವಾಡಿ , ಹನಮಂತ ಮಹಾಲಿಂಗಪೂರ, ಮಲ್ಲು ತಟ್ಟಿ, ಸುನೀಲ ಬಿಸನಾಳ, ಅಟೋ ಕುಮಾರ ,ಮೌನೇಶ ಬಡಿಗೇರ, ಪ್ರಸನ್ನ ಪಾಟೀಲ ಇದ್ದರು.

Latest News

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು

ಜಲಾನಯನ ಮಹೋತ್ಸವ-2025 :         ಕುಂಟೋಜಿ,ಕವಡಿಮಟ್ಟಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ನೀರಾವರಿಗೆ ಆದ್ಯತೆ

ಜಲಾನಯನ ಮಹೋತ್ಸವ-2025 : ಕುಂಟೋಜಿ,ಕವಡಿಮಟ್ಟಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ನೀರಾವರಿಗೆ ಆದ್ಯತೆ

ಮುದ್ದೇಬಿಹಾಳ : ಜಲಾನಯನ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾಗುವ ಕೃಷಿ ಹೊಂಡ,ಜಿನುಗು

ಸರ್ಕಾರಿ ಶಾಲೆ ಉಳಿವಿಗಾಗಿ 3 ದಿವಸ ಉಪವಾಸ ಸತ್ಯಾಗ್ರಹ

ಸರ್ಕಾರಿ ಶಾಲೆ ಉಳಿವಿಗಾಗಿ 3 ದಿವಸ ಉಪವಾಸ ಸತ್ಯಾಗ್ರಹ

ಮಂಡ್ಯ : ದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ್ಷವಾದರೂ, ಸಂವಿಧಾನದಲ್ಲಿ ಆರ್ಟಿಕಲ್ 21ಎ

ಡಿ.೧೫ ರಂದು ಕಾನಿಪ ಧ್ವನಿ ಸಂಘದಿoದ ಬೆಳಗಾವಿ ಚಲೋ:               ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನಿಯಮ ಸರಳೀಕರಣಕ್ಕೆ ಆಗ್ರಹಿಸಿ ಹೋರಾಟ

ಡಿ.೧೫ ರಂದು ಕಾನಿಪ ಧ್ವನಿ ಸಂಘದಿoದ ಬೆಳಗಾವಿ ಚಲೋ: ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನಿಯಮ ಸರಳೀಕರಣಕ್ಕೆ ಆಗ್ರಹಿಸಿ ಹೋರಾಟ

ಮುದ್ದೇಬಿಹಾಳ : ರಾಜ್ಯದ ಎಲ್ಲಾ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ನೀಡಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿನ ಕಠಿಣ ಮಾನದಂಡಗಳನ್ನು ಸರಳೀಕರಣಗೊಳಿಸಬೇಕು. ಪತ್ರಕರ್ತರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಪ್ರಮುಖ ೧೨ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಡಿ.೧೫ ರಂದು ಬೆಳಗಾವಿಯ ವಿಧಾನಸೌಧದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ

ಕಾಲುವೆಯಲ್ಲಿ ಮುಳುಗಿ ಮೃತಪಟ್ಟವರ ಕುಟುಂಬಕ್ಕೆ ನಡಹಳ್ಳಿ ಸಹಾಯಧನ

ಕಾಲುವೆಯಲ್ಲಿ ಮುಳುಗಿ ಮೃತಪಟ್ಟವರ ಕುಟುಂಬಕ್ಕೆ ನಡಹಳ್ಳಿ ಸಹಾಯಧನ

ಮುದ್ದೇಬಿಹಾಳ : ಕಳೆದ ತಿಂಗಳು ತಾಲ್ಲೂಕಿನ ಶಿರೋಳ ಗ್ರಾಮದ ಹತ್ತಿರ ಇರುವ ಕಾಲುವೆಗೆ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಜೀವ ಕಳೆದುಕೊಂಡಿದ್ದ ಯುವತಿ ಹಾಗೂ ಅವಳನ್ನು ಬದುಕಿಸಲು ಹೋಗಿ ಮೃತಪಟ್ಟ ಒಂದೇ ಕುಟುಂಬದ ಮೂವರ ಕುಟುಂಬಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಾಗ್ದಾನ ಮಾಡಿದಂತೆ ಒಂದು ಲಕ್ಷ ರೂ.ಗಳನ್ನು ಅವರ ಪುತ್ರ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಸಂತ್ರಸ್ಥ ಕುಟುಂಬದವರಿಗೆ ಹಸ್ತಾಂತರಿಸಿದರು. ನಡಹಳ್ಳಿ