ಮದ್ಯಪ್ರಿಯರಿಗೆ ಬಿಗ್ ಶಾಕ್..! ಪ್ರತೀ ಬಾಟಲ್ ಗೆ ₹20 ಏರಿಕೆ

ಮದ್ಯಪ್ರಿಯರಿಗೆ ಬಿಗ್ ಶಾಕ್..! ಪ್ರತೀ ಬಾಟಲ್ ಗೆ ₹20 ಏರಿಕೆ

ಬೆಂಗಳೂರು: ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಬಿದ್ದಿದ್ದು, ಪ್ರತಿ ಬಾಟಲ್ ಗೆ 5 -20 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.

ಕಳೆದ ತಿಂಗಳಷ್ಟೇ ಬಿಯರ್ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ ಐದನೇ ಬಾರಿಗೆ ಬಿಯರ್ ದರ ಹೆಚ್ಚಳವಾಗಿದೆ.

ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು, ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರ ಜಾರಿಯಾಗಲಿದೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ ಕನಿಷ್ಠ 5 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗುವಾಗುವುದು ಖಚಿತವಾಗಿದೆ.

ಸರ್ಕಾರ ಬಿಯರ್ ಮೇಲಿನ ತೆರಿಗೆಯನ್ನು ಕಳೆದ ಜುಲೈ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಪ್ರತಿ ಬಾಟಲ್ ಬಿಯರ್ ಬೆಲೆ ಕನಿಷ್ಠ 10 ರೂಪಾಯಿ ಜಾಸ್ತಿಯಾಗಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಕಚ್ಚಾ ಸಾಮಗ್ರಿ ದರ ಹೆಚ್ಚಳ ಕಾರಣ ನೀಡಿ ಪ್ರತಿ ಬಿಯರ್ ಬಾಟಲ್ ಮೇಲೆ ಕನಿಷ್ಠ 5 ರಿಂದ 20 ರೂಪಾಯಿ ಹೆಚ್ಚಳಕ್ಕೆ ತೀರ್ಮಾನಿಸಿವೆ.

ರಾಜ್ಯದಲ್ಲಿ ಹೆಚ್ಚಾಗಿ ಬಳಕೆಯಾಗುವ ಲೆಜೆಂಡ್, ಆರ್ಸಿ ಸ್ಟ್ರಾಂಗ್, ನಾಕೌಟ್, ಬುಲೆಟ್, ಪವರ್ ಕೂಲ್ ಸೇರಿ ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಏರಿಕೆಯಾಗಲಿದೆ ಎನ್ನಲಾಗಿದೆ.

Latest News

ಮುದ್ದೇಬಿಹಾಳ : ಮಾ.15 ರಂದು ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್

ಮುದ್ದೇಬಿಹಾಳ : ಮಾ.15 ರಂದು ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್

ಮುದ್ದೇಬಿಹಾಳ : ಪಟ್ಟಣದ ವಿದ್ಯಾನಗರದ ಶಿರವಾಳ ಲೇಔಟ್‌ದಲ್ಲಿರುವ ಪ್ರಗತಿ ಜೆಸಿ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ

ಮುದ್ದೇಬಿಹಾಳ : ಮಾ.12 ರಂದು ಪದ್ಮಾವತಿ ಅಮ್ಮನವರ ಮಹಾರಥೋತ್ಸವ

ಮುದ್ದೇಬಿಹಾಳ : ಮಾ.12 ರಂದು ಪದ್ಮಾವತಿ ಅಮ್ಮನವರ ಮಹಾರಥೋತ್ಸವ

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ಅಮ್ಮನವರ ಜಾತ್ರಾ ಮಹೋತ್ಸವ ಮಾ.12,13 ರಂದು

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಮುದ್ದೇಬಿಹಾಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳುವ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ಸೌಹಾರ್ದತೆಯನ್ನು ಬೆಸೆಯುವ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ಮುದ್ದೇಬಿಹಾಳ : ರಂಜಾನ್ ಹಬ್ಬ ಎಲ್ಲ ಹಬ್ಬಗಳ ಜೊತೆಗೆ ಆಚರಣೆಗೆ ಬರುತ್ತದೆ.ನಾವೆಲ್ಲ ಯುದ್ಧವನ್ನು ಖಂಡಿಸಬೇಕು.ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಈ ಯುದ್ಧ ನಡೆಯಬೇಕಾದ ಅವಶ್ಯಕತೆ ಇರಲಿಲ್ಲ.ಯುದ್ಧ ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಮಾಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಉರ್ದು ಶಾಲೆ ಆವರಣದಲ್ಲಿ ಶುಕ್ರವಾರ ದೇವಿಕಾ ಸುಬ್ಬರಾವ್ ಫೌಂಡೇಶನ್‌ದಿAದ ರಂಜಾನ್ ಹಬ್ಬದ ನಿಮಿತ್ಯ ಆಯೋಜನೆ ಮಾಡಿದ್ದ ಇಫ್ತಿಯಾರ್ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಮಾನವೀಯ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ ಮಾ.9 ರಂದು ಸಾಯಂಕಾಲ 5ಗಂಟೆಗೆ ಪಟ್ಟಣದ ಮಹಾಂತೇಶ ನಗರದ ಗಣೇಶ ಗುಡಿ ಹತ್ತಿರದಲ್ಲಿರುವ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ಶಾಲೆಯ ಗೌರವಾಧ್ಯಕ್ಷ ವೇ.ಸಂಗಯ್ಯ ಹಾಲಗಂಗಾಧರಮಠ ವಹಿಸುವರು.ವೈದ್ಯರಾದ ಡಾ.ಚಂದ್ರಶೇಖರ ಶಿವಯೋಗಿಮಠ ಅಧ್ಯಕ್ಷತೆ ವಹಿಸುವರು.ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಹುಲ್ಲೂರ ಎಸ್.ಎನ್.ಡಿ ನ್ಯಾಶನಲ್