ಮುದ್ದೇಬಿಹಾಳ : ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕಾರ್ಮಿಕನೊಬ್ಬನ ಕೈ ಸಿಲುಕಿಕೊಂಡು ಎಲುಬುಗಳು ತುಂಡಾಗಿರುವ ಘಟನೆ ಮಂಗಳವಾರ ಇಲ್ಲಿನ ಪಟ್ಟಣದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಬಳಿ ನಡೆದಿದೆ.
ಅಬ್ಬಿಹಾಳ ಗ್ರಾಮದ ಕಾರ್ಮಿಕ ಗಂಗಣ್ಣ ಬಸಪ್ಪ ಕಂಬಳಿ(25) ಘಟನೆಯಲ್ಲಿ ಅವರ ಬಲಗೈ ಮಣಿಕಟ್ಟಿಗೆ ತೀವ್ರ ಗಾಯವಾಗಿ ನರಗಳು ಮತ್ತು ಎಲಬು ತುಂಡಾಗಿದೆ.ವಿಷಯ ತಿಳಿದ ತಕ್ಷಣ ಹತ್ತಿರದಲ್ಲಿಯೇ ಇದ್ದ ಅಗ್ನಿಶಾಮಕ ಇಲಾಖೆ ಇಡೀ ತಂಡದ ಸಿಬ್ಬಂದಿ ಧಾವಿಸಿ ಬಂದು ಕಾರ್ಮಿಕನನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದರು.
ಕಾಂಕ್ರಿಟ್ ಮಿಕ್ಸರ್‌ನಲ್ಲಿ ಕೈ ಸಿಲುಕಿ ತೀವ್ರ ನೋವಿನಿಂದ ಒದ್ಡಾಡುತ್ತಿದ್ದ ಅವರನ್ನು ತಕ್ಷಣ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಲಕರಣೆಗಳನ್ನು ಬಳಸಿ ಕಾಂಕ್ರೀಟ್ ಮಿಕ್ಸರ್‌ನಿಂದ ಕೈ ಹೊರತಗೆದರು.ಬಳಿಕ ಅವರ ವಾಹನದಲ್ಲಿಯೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಲಾಯಿತು.
ಅಗ್ನಿಶಾಮಕ ಇಲಾಖೆಯ ಅಧಿಕಾರಿ ಬಸವರಾಜ ಬಿರಾದಾರ,ಪ್ರಮುಖ ಅಗ್ನಿಶಾಮಕ ಸುಭಾಷ ರಾಥೋಡ್ ,ಚಾಲಕ ಶಿವಾನಂದ ವಾಲೀಕಾರ,ಸಿಬ್ಬಂದಿ ತಮ್ಮಣ್ಣ ಗೌಡರ ,ಸಿದ್ದಣ್ಣ ಪೊಲೇಶಿ, ಅಗ್ನಿಶಾಮಕರು , ಬಸವರಾಜ್ ಭಜಂತ್ರಿ , ಸಂತೋಷ್ ಲಮಾಣಿ , ಶರಣು ಬಾಗೇವಾಡಿ , ಲಕ್ಷ್ಮಣ ಕರ್ನಾಲಗಿ,ಕಾರ್ತಿಕ ಅಜಮನಿ, ವಿರೂಪಾಕ್ಷಿ ಪೂಜಾರಿ, ಶಕೀಲ್ ಅವಟಿ, ರಂಗನಗೌಡ ಬಿರಾದಾರ,ರಾಜು ರಾಥೋಡ ಭಾಗಿಯಾಗಿದ್ದರು.







