Honoring meritorious students: Let children experience childhood-Nadahalli

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಕ್ಕಳಿಗೆ ಬಾಲ್ಯ ಅನುಭವಿಸಲು ಬಿಡಿ-ನಡಹಳ್ಳಿ

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಕ್ಕಳಿಗೆ ಬಾಲ್ಯ ಅನುಭವಿಸಲು ಬಿಡಿ-ನಡಹಳ್ಳಿ

ಮುದ್ದೇಬಿಹಾಳ : ಮಕ್ಕಳಿಗೆ ಗುಣಮಟ್ಟವಾದದ್ದೆನ್ನೆಲ್ಲಾ ನಾವು ಕೊಡುತ್ತಿದ್ದೇವೆ. ಆದರೆ, ಆಹಾರ ಮಾತ್ರ ಕಲಬೆರಕೆ ಆಗಿದೆ. ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಗುಣಮಟ್ಟದ ಆಹಾರ ಕೊಡುವ ಕೆಲಸ ಆಗಬೇಕಿದೆ ಎಂದು ಮಾಜಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ವಿದ್ಯಾಸ್ಪೂರ್ತಿ ಸ್ಕೂಲ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಎಲ್ಲರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಎಂಬ ಆಸೆಯನ್ನು ಹೊಂದಿದ್ದಾರೆ. ಆದರೆ, ಒಬ್ಬ ಮಗುವು ನಾನು ದೇಶಕ್ಕೆ ಅನ್ನ ಹಾಕುವ ರೈತನಾಗುತ್ತೇನೆ ಎಂದು ಹೇಳುವುದಿಲ್ಲ. ಪಾಲಕರು ತಮ್ಮ ವಿಚಾರಗಳನ್ನು ಬದಲಿಸಿಕೊಳ್ಳಬೇಕು. ಮಕ್ಕಳಿಗೆ ಅವರ ಬಾಲ್ಯ ಅನುಭವಿಸಲು ಬಿಡಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಬಸಮ್ಮ ಸಿದರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಕಾರ್ಯ ನಮ್ಮ ಸಂಸ್ಥೆಯಿಂದ ಮಾಡಲಾಗುತ್ತಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಸಿದರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ತರಬೇತಿ, ಶಿಕ್ಷಣ ಪಡೆದ ಎಂಟು ವಿದ್ಯಾರ್ಥಿಗಳು ನವೋದಯ, 41 ವಿದ್ಯಾರ್ಥಿಗಳು ಆದರ್ಶ, 52 ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಸಕ್ತ ವರ್ಷದಲ್ಲಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್. ಬಿ. ಚಲವಾದಿ, ಶಂಕರ ಡಮನಾಳ, ಎಂ.ಜಿ.ವಿ.ಸಿ ಕಾಲೇಜಿನ ಉಪನ್ಯಾಸಕ ವಿ. ವಿ. ಮಾಶೆಟ್ಟಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಮನಗೌಡ ಸಿದರೆಡ್ಡಿ, ಪತ್ರಕರ್ತ ಶಂಕರ ಹೆಬ್ಬಾಳ, ಗುಲಾಮಮೊಹ್ಮದ ದಫೇದಾರ ಇದ್ದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Latest News

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಬಸ್ ನಿಲ್ದಾಣದಲ್ಲಿ ಆ.1 ರಂದು ಬೆಳಗ್ಗೆ 10 ಕ್ಕೆ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ಮುದ್ದೇಬಿಹಾಳ : ಅಧಿಕಾರಕ್ಕಾಗಿ ನಾನು ಪಕ್ಷನಿಷ್ಠೆ ಬದಲಿಸುವ ಜಾಯಮಾನ ನನ್ನದಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಕಾರವಾರ, ಜು.29 :- ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತಾ ಯೋಜನೆಗಳನ್ನು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಲಿಂಗಸಗೂರ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ಲಿಂಗಸಗೂರನಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಬಸ್ ಸ್ಟೇರಿಂಗ್ ಕಟ್ ಆಗಿದೆ.

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಹುಣಸಗಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಯಾದಗಿರಿ ಮತ್ತು ಹುಣಸಗಿ ಪಟ್ಟಣದ ಮುಖಂಡರು ಸೇರಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಜಿಲ್ಲೆಯ ಎಲ್ಲಾ ಸೇನಾಪಡೆಯ ಅಧಿಕೃತ ಮಾಜಿ ಸೈನಿಕರು 1971ರ ಯುದ್ಧದಲ್ಲಿ ಭಾಗವಹಿಸಿದ, ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರು ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಹುಣಸಗಿ ತಾಲೂಕಿನ ಮುಖಂಡರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು, ಹುಣಸಗಿ ಪಟ್ಟಣದ ಎಲ್ಲಾ ಜನ ಸಾಮಾನ್ಯರು ಅಕ್ಕ ತಂಗಿಯರು,

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಮುದ್ದೇಬಿಹಾಳ: ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅನ್ನ ನೀಡುವ ಕೆಲಸ ಮಾಡಬೇಕೇ ಹೊರತೂ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ವ್ಯರ್ಥ ಹಾಳು ಮಾಡಬಾರದು ಎಂದು ಪಟ್ಟಣದ ಮಹಾಮನೆ ಬಳಗದ ಅಧ್ಯಕ್ಷ ಬಸವರಾಜ ಕೋರಿ ಹೇಳಿದರು. ಅವರು ಶನಿವಾರ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ತೋರಣ ಬಳಗದಿಂದ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ ಬಸವ ಪಂಚಮಿಯ "ಹಾಲು ಕುಡಿಯುವ ಹಬ್ಬ"ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಲಿನ ನಾಗರಕ್ಕೆ