ಕೊರಟಗೆರೆ: ಗಂಡನನ್ನು ಬಿಟ್ಟು ಗುಂಡನ ಹಿಂದೆ ಹೋದವಳ ಕಥೆಯಲ್ಲಿ ಈಗ ಕೊರಟಗೆರೆ ಪೊಲೀಸರ ತನಿಖೆಯಲ್ಲಿ ಬೀಗ್ ಟ್ವಿಸ್ಟ್ ಸಿಕ್ಕಿದೆ.
3ಜನ ಆರೋಪಿಗಳ ಮೇಲೆ ಪ್ರಥಮವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಮತ್ತೇ ತನಿಖೆ ಚುರುಕು ಮಾಡಿದಾಗ ಬರೋಬ್ಬರಿ 6ಜನ ಆರೋಪಿಗಳು ಪೊಲೀಸರ ಅತಿಥಿಗಳಾಗಿ ಜೈಲೂಟ ಮಾಡಲು ಸಿದ್ದರಾಗಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ-ಸಿದ್ದರಬೆಟ್ಟದ ಮಾರ್ಗದ ಕೆಪಿಟಿಸಿಎಲ್ ಘಟಕದ ಬಳಿ ಜು.28ರ ಭಾನುವಾರ ರಾತ್ರಿ 8ಗಂಟೆಯ ವೇಳೆಯಲ್ಲಿ ಪ್ರಕಾಶನ ಹತ್ಯೆಯಾಗಿತ್ತು.
ಘಟನೆಗೆ ಸಂಬಂಧ ತನಿಖೆ ಚುರುಕುಗೊಳಿಸಿದ ಕೊರಟಗೆರೆ ಪೊಲೀಸರಿಗೆ ಹೆಂಡತಿಯ ಪಾತ್ರದ ಜೊತೆ ಹಳೇ ಪ್ರೇಮಿಯ ಕೈವಾಡ ಸೇರಿ 6ಜನ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರ ತಂಡ ಯಶಸ್ವಿ ಆಗಿದ್ದಾರೆ.
ಅಂಚೆಕಚೇರಿಯ ಸಿಬ್ಬಂದಿ ಮೃತ ಪ್ರಕಾಶದ ಕೊಲೆಯ ಪ್ರಕರಣದಲ್ಲಿ ಬೆಂಗಳೂರಿನ ಗೋವಿಂದರಾಜು(36 ವರ್ಷ), ಮಲ್ಲೇಕಾವಿನ ಹರ್ಷುತಾ (28 ವರ್ಷ), ಸೋಮಶೇಖರ್ (37 ವರ್ಷ), ಮಹೇಶ್(32), ಕಂಬದಹಳ್ಳಿಯ ದರ್ಶನ್(24), ಬಾಗೂರು ರಂಗಸ್ವಾಮಿ ಎಂಬ 6ಜನ ಆರೋಪಿಗಳು ಈಗ ಕೊರಟಗೆರೆ ಪೊಲೀಸರ ಅತಿಥಿಗಳಾಗಿದ್ದು, ತನಿಖೆ ಇನ್ನಷ್ಟು ಚುರುಕುಗೊಂಡಿದೆ.
ಅನಾಥವಾದ 2ವರ್ಷದ ಗಂಡು ಮಗು: ಗುಲ್ಬರ್ಗಾ ಜಿಲ್ಲೆಯ ಚಿಂಚುಲ್ಲಿ ಗ್ರಾಮದ ಮೃತ ಪ್ರಕಾಶನಿಗೆ ಇದೇ ಇನ್ಸ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಮಲ್ಲೇಕಾವಿನ ಆರೋಪಿ ಹರ್ಷಿತಾ ಜೊತೆ ಮದುವೆಯಾಗಿ 3ವರ್ಷವಾಗಿ 2ವರ್ಷದ ಗಂಡು ಮಗುವಿದೆ.
ಕಳೆದ 3 ತಿಂಗಳ ಹಿಂದೆಯಷ್ಟೇ ಹರ್ಷಿತಾ ಗೋವಿಂರಾಜು ಅಲಿಯಾಸ್ ಗುಂಡನ ಜೊತೆ ಮನೆ-ಗಂಡ ಮತ್ತು ಮಗು ಬಿಟ್ಟು ಓಡಿಹೋಗಿದ್ದಳು. ಗಂಡನ ದೂರಿನ ಬಳಿಕ ಪೊಲೀಸರ ಮೂಲಕ ರಾಜಿಸಂಧಾನ ಆಗಿತ್ತು.
ಗುಂಡನ ಸಹವಾಸದಿಂದ ಗಂಡನ ಪ್ರಾಣವನ್ನೇ ತೆಗೆಯುವ ನಿರ್ದಾರಕ್ಕೆ ಬಂದ ಹರ್ಷಿತ ಜೈಲುಪಾಲಾಗಿ 2ವರ್ಷದ ಗಂಡುಮಗು ಅನಾಥವಾಗಿದೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಪಿಎಸೈಗಳಾದ ಚೇತನಗೌಡ, ಯೊಗೀಶ್, ಎಎಸೈ ಮಂಜುನಾಥ ೬ಜನ ಆರೋಪಿಗಳನ್ನು ಕೊಲೆಯಾದ 24ಗಂಟೆಯೊಳಗೆ ಅರೆಸ್ಟ್ ಮಾಡಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 6ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.