ಮುದ್ದೇಬಿಹಾಳ : ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಆ.25 ರಂದು ಮುದ್ದೇಬಿಹಾಳಕ್ಕೆ ಆಗಮಿಸಲಿದ್ದಾರೆ.
ಅಂದು ಬೆಳಗ್ಗೆ 8ಕ್ಕೆ ಕಲಬುರಗಿ ರಸ್ತೆ ಮೂಲಕ ಹೊರಟು ಜೇವರ್ಗಿ, ಸಿಂದಗಿ, ದೇವರಹಿಪ್ಪರಗಿ ಮಾರ್ಗವಾಗಿ ಮುದ್ದೇಬಿಹಾಳ ತಾಲ್ಲೂಕು ಬಿದರಕುಂದಿ ಮನಿಯಾರ ಶಾಲೆಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿರುವ ಮನಿಯಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮದ್ಯಾಹ್ನ 1.30ಕ್ಕೆ ನಿರ್ಗಮಿಸಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.