ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಸಂಚರಿಸಲು ಆರಂಭಿಸಿರುವ ನಗರ ಸಾರಿಗೆ ಸಂಚಾರಕ್ಕೆ ಸಾರ್ವಜನಿಕರು,ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚನೆ ಮೇರೆಗೆ ಎರಡು ನೂತನ ಬಸ್‌ಗಳನ್ನು ಮುದ್ದೇಬಿಹಾಳ ಘಟಕಕ್ಕೆ ಒದಗಿಸಲಾಗಿದೆ.
ಪಟ್ಟಣದ ಸಾರಿಗೆ ಘಟಕದ ಆವರಣದಲ್ಲಿ ಎರಡು ಹೊಸ ಬಸ್‌ಗಳ ಸೇವೆಗೆ ಚಾಲನೆ ನೀಡಿದ ಶಾಸಕ ಸಿ.ಎಸ್.ನಾಡಗೌಡರು, ನಗರ ಸಾರಿಗೆಯಿಂದ ಜನತೆಗೆ ಅನುಕೂಲವಾಗಿರುವ ಕುರಿತು ಮಾಹಿತಿ ಬಂದಿದೆ.ನಾಗರಿಕರ ಉತ್ತಮ ಸ್ಪಂದನೆ ಹಿನ್ನೆಲೆಯಲ್ಲಿ ಒಳ್ಳೆಯ ಸೇವೆ ನೀಡಲು ಹೊಸ ಬಸ್ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಿನಂತಿಸಿದ್ದೇವು.ಹೊಸ ಬಸ್‌ಗಳನ್ನು ನೀಡಿದ್ದಾರೆ.ಸಾರ್ವಜನಿಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಹೇಳಿದರು.
ಮುದ್ದೇಬಿಹಾಳದ ಹಡಲಗೇರಿ ರಸ್ತೆಯಲ್ಲಿರುವ ಸರಕಾರಿ ಜಾಗೆಯಲ್ಲಿ ಹೆಚ್ಚುವರಿ ಡಿಪೋ ನಿರ್ಮಿಸಲು ಅಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಸರ್ಕಾರದಿಂದ ಮಂಜೂರಾತಿ ಪಡೆದುಕೊಳ್ಳಲಾಗುವುದು.ಬಸ್ ನಿಲ್ದಾಣದ ಕಾಂಕ್ರಿಟ್,ಶೌಚಗೃಹದ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದೆ ಎಂದರು.
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಹಿರೇಕುರುಬರ, ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಡಿ.ಹಿರೇಗೌಡರ,ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ,ಸAಗಣ್ಣ ಮೇಲಿನಮನಿ, ಮಹ್ಮದರಫೀಕ ಶಿರೋಳ,ಹನಮಂತ ಕುರಿ,ಶೋಭಾ ಶೆಳ್ಳಗಿ,ಸಿಪಿಐ ಮೊಹ್ಮದ ಫಸಿವುದ್ದೀನ ಸೇರಿದಂತೆ ಗ್ಯಾರಂಟಿ ಸಮೀತಿ ಸದಸ್ಯರು,ಸಾರಿಗೆ ಘಟಕದ ಅಧಿಕಾರಿಗಳು,ಸಿಬ್ಬಂದಿ ಇದ್ದರು.





