ಇಳಕಲ್: ಫ್ರಾನ್ಸ್ ದೇಶದ
ಫ್ಯಾರೀಸ್‌ನ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳಿರುವ ಭಾರತದ ಕ್ರೀಡಾಪಟ್ಟುಗಳು ಹೆಚ್ಚಿನ ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸುವಂತೆ ವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಂಪ್ಪನವರ್ ಹಾರೈಸಿದ್ದಾರೆ.
ಶತಕೋಟಿ ಭಾರತೀಯರು ನೀವು ಪದಕ ಗೆಲ್ಲುವ ಐತಿಹಾಸಿಕ ಕ್ಷಣವನ್ನು ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಐಸಿಸಿ ಟಿ-೨೦ ವಿಶ್ವಕಪ್‌ನಲ್ಲಿ ಭಾರತ ಹೇಗೆ ವಿಶ್ವ ಚಾಂಪಿಯನ್ ಆಗಿ ಹೊಮ್ಮಿತೊ ಅದೇ ರೀತಿ ಪ್ರತಿಯೊಬ್ಬ ಕ್ರೀಡಾಪಟುಗಳು ಪದಕಗಳನ್ನು ಗೆದ್ದು ಬನ್ನಿ ಎಂದು ಆಶಿಸಿದ್ದಾರೆ.
ಭಾರತೀಯರು ನಿಮ್ಮನ್ನು ಪದಕದೊಂದಿಗೆ ಸ್ವಾಗತಿಸಲು ಎದುರು ನೋಡುತ್ತಿದ್ದಾರೆ. ದೇಶದ ಧ್ವಜವನ್ನು ಮನಸಿನಲ್ಲಿಟ್ಟುಕೊಂಡು ಗುರಿ ಸಾಧಿಸಬೇಕು. ಹಿಂದಿನವರ ಪರಿಶ್ರಮ ನಿಮಗೆ ಮಾದರಿಯಾಗಲಿ. ಯಶಸ್ಸು ಯಾರೊಬ್ಬರ ಸ್ವತ್ತಲ್ಲ. ಕಠಿಣ ಪರಿಶ್ರಮಪಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆಂದು ಅವರು ಹೇಳಿದ್ದಾರೆ.
ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಈ ಬಾರಿಯೂ ಚಿನ್ನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತರಲಿ. ಅಲ್ಲದೆ, ಬ್ಯಾಡ್ಮಿಂಟನ್, ಹಾಕಿ, ರೆಸ್ಲಿಂಗ್, ಶೂಟಿಂಗ್, ಬಾಕ್ಸಿಂಗ್ ನಲ್ಲಿ ಪದಕಗಳನ್ನು ನಿರೀಕ್ಷಿಸಲಾಗಿದೆ. ಪ್ಯಾರಿಸ್‌ನಲ್ಲಿ ಹೆಚ್ಚು ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಜಯಿಸಲಿ ಅನ್ನೋದೆ ನನ್ನ ಕನಸಾಗಿದೆ ಎಂದು ಕಾಶಪ್ಪನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.