ಮುದ್ದೇಬಿಹಾಳ ; ಪಟ್ಟಣದ ವಿದ್ಯಾನಗರದಲ್ಲಿರುವ ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಬುಧುವಾರ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು
ತಳಿರು ತೋರಣಗಳಿಂದ ಕಬ್ಬು ,ಮಡಕೆ ಕುಡಿಕೆ ಗಳಿಂದ ವಿಶೇಷವಾಗಿ ರಂಗೋಲಿ ಮಧ್ಯದಲ್ಲಿ ಅಲಂಕರಿಸಲಾಗಿತ್ತು ಶಾಲಾ ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕಿಯರು ಸಾಂಪ್ರದಾಯಿಕ ಉಡುಪು ಧರಿಸಿ ಹಬ್ಬದ ಸಡಗರಕ್ಕೆ ಮೆರಗು ತಂದರು,
ವಿದ್ಯಾರ್ಥಿಗಳು ಜನಪದ ಹಾಗೂ ಮಕರ ಸಂಕ್ರಾಂತಿ ಹಬ್ಬದ ವಿಶೇಷತೆ ಬಿಂಬಿಸುವ ಹಾಡುಗಳಿಗೆ ಹೆಜ್ಜೆಹಾಕಿದರು
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಬಸಮ್ಮ ಸಿದರಡ್ಡಿ ಕಾರ್ಯದರ್ಶಿ ಮಹಾಂತೇಶ ಸಿದರಡ್ಡಿ ಮಾತನಾಡಿ ನಮ್ಮ ಭಾರತೀಯ ಪರಂಪರೆ ವಿಶೇಷತೆ ಹಬ್ಬಗಳಲ್ಲಿ ಅಡಗಿದೆ ಭಾರತೀಯ ಹಬ್ಬಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ ಅದನ್ನು ನಾವು ನಮ್ಮ ಮಕ್ಕಳಿಗೆ ಇಂದಿನ ಯುವ ಸಮೂಹಕ್ಕೆ ತಿಳಿಸಿಕೂಡಬೇಕು ಪಾಶ್ಚಾತ್ಯ ಸಂಸ್ಕೃತಿಗಳ ಅಬ್ಬರ ಅಂದಾಕರುಣೆಯಲ್ಲಿ ನಮ್ಮ ಹಬ್ಬಗಳು ಕಣ್ಮರೆಯಾಗುತ್ತಿವೆ ಎಂದರು
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ರಾಮನಗೌಡ ಸಿದರಡ್ಡಿ ಸೇರಿದಂತೆ ಶಿಕ್ಷಕರು ಶಿಕ್ಷಕಿಯರು ಸಿಬ್ಬಂದಿಗಳು ಭಾಗವಹಿಸಿದ್ದರು





