ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ,ಉಪಾಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳ ಗ್ರಾಮ ಪಂಚಾಯತಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳಾದ ಡಾ.ಕೆ.ಆನಂದ್ ಆದೇಶ ಹೊರಡಿಸಿದ್ದಾರೆ.
ಸನ್ 2026-2031ರ ಅವಧಿಗಾಗಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಸದರಿ ಪಂಚಾಯಿತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8(iii) ಅನ್ವಯ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಲಾಗಿದೆ.
ಮುದ್ದೇಬಿಹಾಳ ತಾಲ್ಲೂಕು ವ್ಯಾಪ್ತಿಯ ಗ್ರಾಪಂಗಳು,ಆಡಳಿತಾಧಿಕಾರಿಗಳ ವಿವರ:
ಮಡಿಕೇಶ್ವರ ಗ್ರಾಪಂನ ಅವಧಿ ಫೆ.4ರಂದು ಕೊನೆಗೊಂಡಿದ್ದು ಇಲ್ಲಿಗೆ ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ ವಂದಾಲ,ಢವಳಗಿ ಹಾಗೂ ರೂಢಗಿ ಗ್ರಾಪಂನ ಅವಧಿ ಫೆ.3ರಂದು ಕೊನೆಗೊಂಡಿದ್ದು ಇಲ್ಲಿಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಎಸ್.ಹಿರೇಗೌಡರ, ಬಸರಕೋಡ ಗ್ರಾಪಂನ ಅವಧಿ ಫೆ.5ರಂದು ಕೊನೆಗೊಂಡಿದ್ದು ಇಲ್ಲಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಅವರನ್ನು ನಿಯೋಜಿಸಲಾಗಿದೆ.
ಬಿದರಕುಂದಿ ಗ್ರಾಪಂನ ಅವಧಿ ಫೆ.7ರಂದು, ಕುಂಟೋಜಿ ಗ್ರಾಪಂನ ಅವಧಿ ಫೆ.3ರಂದು ಕೊನೆಗೊಂಡಿದ್ದು ಇಲ್ಲಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎo.ಬೆಳಗಲ್ಲ, ಅಡವಿ ಸೋಮನಾಳ ಗ್ರಾಪಂ ಅವದಿ ಫೆ.4 ರಂದು ಕೊನೆಗೊಂಡಿದ್ದು ಇಲ್ಲಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಮಠ, ಕವಡಿಮಟ್ಟಿ ಗ್ರಾಪಂನ ಅವಧಿ ಫೆ.2ರಂದು ಕೊನೆಗೊಂಡಿದ್ದು ಇಲ್ಲಿಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ.ರೆಡ್ಡಿ, ಹಡಲಗೇರಿ ಗ್ರಾಪಂನ ಅವಧಿ ಫೆ.4ರಂದು ಕೊನೆಗೊಂಡಿದ್ದು ಇಲ್ಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತೀರ್ಣಾಧಿಕಾರಿ ಶಿವಲೀಲಾ ಕೊಣ್ಣೂರ ಅವರನ್ನು ನಿಯೋಜಿಸಲಾಗಿದೆ.
ಹುಲ್ಲೂರ ಗ್ರಾಪಂನ ಅವಧಿ ಫೆ.5ರಂದು ಕೊನೆಗೊಂಡಿದ್ದು ಇಲ್ಲಿಗೆ ಪಂಚಾಯತ್ ಇಂಜನಿಯರಿoಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವರಾಜ ನಾಯಕ, ಕಾಳಗಿ ಗ್ರಾಪಂನ ಅವಧಿ ಫೆ.7ರಂದು ಕೊನೆಗೊಂಡಿದ್ದು ಇಲ್ಲಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ, ಯರಝರಿ ಗ್ರಾಪಂನ ಅವಧಿ ಫೆ.3ರಂದು ಕೊನೆಗೊಂಡಿದ್ದು ಇಲ್ಲಿಗೆ ಸಹಾಯಕ ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಅವರನ್ನು ನಿಯೋಜಿಸಲಾಗಿದೆ.
ಹಿರೇಮುರಾಳ ಗ್ರಾಪಂನ ಅವಧಿ ಫೆ.5ರಂದು ಕೊನೆಗೊಂಡಿದ್ದು ಇಲ್ಲಿಗೆ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಗಿರೀಶ ಹಲಕುಡೆ, ನಾಗಬೇನಾಳ ಗ್ರಾಪಂನ ಅವಧಿ ಫೆ.4ರಂದು ಕೊನೆಗೊಂಡಿದ್ದು ಇಲ್ಲಿಗೆ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಸುರೇಶ ಭಜಂತ್ರಿ, ಕೋಳೂರು ಗ್ರಾಪಂನ ಅವಧಿ ಫೆ.5ರಂದು ಕೊನೆಗೊಂಡಿದ್ದು ಇಲ್ಲಿಗೆ ಅಬಕಾರಿ ಉಪ ನಿರೀಕ್ಷಕ ಮಲ್ಲಿಕಾರ್ಜುನ ಹಗಳಗಾರ, ತಂಗಡಗಿ ಗ್ರಾಪಂನ ಅವಧಿ ಫೆ.4ರಂದು ಕೊನೆಗೊಂಡಿದ್ದು ಇಲ್ಲಿಗೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಹಾದಿಮನಿ, ಆಲೂರ ಗ್ರಾಪಂನ ಅವಧಿ ಫೆ.3ರಂದು ಕೊನೆಗೊಂಡಿದ್ದು ಇಲ್ಲಿಗೆ ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರನ್ನು ನಿಯೋಜಿಸಲಾಗಿದೆ.
ಬಿಜ್ಜೂರ ಗ್ರಾಪಂನ ಅವಧಿ ಫೆ.4ರಂದು ಕೊನೆಗೊಂಡಿದ್ದು ಇಲ್ಲಿಗೆ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಶಿವಾನಂದ ಮೇಟಿ, ರಕ್ಕಸಗಿ ಗ್ರಾಪಂನ ಅವಧಿ ಫೆ.4ರಂದು ಕೊನೆಗೊಂಡಿದ್ದು ಇಲ್ಲಿಗೆ ತಾಳಿಕೋಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರಾಜು ಎಸ್.ರಾಠೋಡ, ನಾಗರಬೆಟ್ಟ ಗ್ರಾಪಂನ ಅವಧಿ ಫೆ.5ರಂದು ಕೊನೆಗೊಂಡಿದ್ದು ಇಲ್ಲಿಗೆ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಅವರನ್ನು ನಿಯೋಜಿಸಿ ಡಿಸಿ ಆದೇಶಿಸಿದ್ದಾರೆ.




