ಮುದ್ದೇಬಿಹಾಳ : ಜೆಇಇ ಸೆಷನ್-1 ರ ಪರೀಕ್ಷೆಯಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅಭಿಷೇಕ ಎಸ್.ಟಕ್ಕಳಕಿ ಶೇ.99.28, ಅದಿತಿ ಸವಣೂರ ಶೇ.99.23 ಹಾಗೂ ಪ್ರೀತಮ ಲಮಾಣಿ ಶೇ.99.12 ರಷ್ಟು ಪರ್ಸೆಂಟೈಲ್ ಅಂಕ ಪಡೆದು ಜಿಲ್ಲೆಗೆ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜೆಇಇ ಪರೀಕ್ಷೆ ಫಲಿತಾಂಶದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾದ ಸಾಧನೆಯನ್ನು ವಿದ್ಯಾರ್ಥಿಗಳು ತೋರಿದ್ದಾರೆ ಎಂದು ತಿಳಿಸಿದ್ದಾರೆ.
ಶೇ.90ಕ್ಕೂ ಅಧಿಕ ಪರ್ಸೆಂಟೈಲ್ ಅಂಕವನ್ನು 60 ವಿದ್ಯಾರ್ಥಿಗಳು ಗಳಿಸಿದ್ದಾರೆ. ಗಾಯತ್ರಿ ಶಿಂಧೆ ಶೇ.98.77, ಮಾನಸಾ ಹಿರೇಮಠ ಶೇ.98.32,ಅಜೀತ ಬೆಳ್ಳುಬ್ಬಿ ಶೇ.98.04,ಭಾಗ್ಯಶ್ರೀ ಬಸರಕೋಡ ಶೇ.97.94,ಮಾನಸಾ ಹುಲ್ಯಾಳ ಶೇ.97.06, ಶರತ್ ಗಬಸಾವಳಗಿ ಶೇ.97.46, ವರ್ಷಾ ಯರಗಟ್ಟಿ ಶೇ.97.46,ಸುಮಿತ ಪತ್ತಾರ ಶೇ.97.23,ಪ್ರತೀಕ್ಷಾ ಕುಂಬಾರ ಶೇ.97.16, ಸ್ಪೂರ್ತಿ ಚೌಡಕಿ ಶೇ.96.83,ಭಾಗ್ಯಾ ಹೊಸಮನಿ ಶೇ.96.81,ಮೊಹ್ಮದ್‌ಇಬ್ರಾಹಿಂ ವಾಲೀಕಾರ ಶೇ.96.7,ಚಿನ್ಮಯಿ ನೇಗಿನಹಾಳ ಶೇ.96.66,ಸುದರ್ಶನ ಕುಲಕರ್ಣಿ ಶೇ.96.17,ಸಿದ್ಧಾರ್ಥ ಕಡಿ ಶೇ.96.14,ರಾಜೇಶ್ವರಿ ಕೋಲಕಾರ ಶೇ.96.14,ಸಂಪತ ಕಟ್ಟಿಮಠ ಶೇ.95.92,ಗಾಯತ್ರಿ ಪಾಟೀಲ ಶೇ.95.74,ವಿಕಾಸ ಕ್ಷತ್ರಿ ಶೇ.95.6, ಅಪರ್ಣಾ ಲಚ್ಯಾಣ ಶೇ.95.56,ಅಮಸಿದ್ದ ಪೂಜಾರಿ ಶೇ.95.09,ಮಲ್ಲಿಕಾರ್ಜುನ ಗುಬ್ಬೇವಾಡ ಶೇ.95.08, ಪವನ ಹಿರೇಮಠ ಶೇ.95.06, ಅಕ್ಷತಾ ಪೂಜೇರ ಶೇ.95.01 ಪರ್ಸೆಂಟೈಲ್ ಅಂಕ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು,ಬೋಧಕ,ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.







