Murder Case Image of murder symbol

Murder: ಆಸ್ತಿ ವಿವಾದದ ಜಗಳ ವೃದ್ಧನ ಕೊಲೆಯಲ್ಲಿ ಅಂತ್ಯ..!

Murder: ಆಸ್ತಿ ವಿವಾದದ ಜಗಳ ವೃದ್ಧನ ಕೊಲೆಯಲ್ಲಿ ಅಂತ್ಯ..!

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೋಟಿ ಗ್ರಾಮದ ರೈತರ ಜಮೀನಿನಲ್ಲಿ ಅಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನನ್ನು ಬುಧವಾರ ಕೊಲೆ (Murder) ಮಾಡಲಾಗಿದೆ.

ಹೊಸಕೋಟೆ ಗ್ರಾಮದ ಪ್ರತಿಷ್ಠಿತ ಕುಟುಂಬದ ಹಿರಿಯ ಬಸನಗೌಡ ಪಾಟೀಲ(75)ಕೊಲೆ ಆಗಿರುವ ವೃದ್ಧ. ಕಬ್ಬಿನ ಗಣಕಿ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ವಾಲಿಕಾರ, ಲಕ್ಷ್ಮಣ ವಾಲಿಕಾರ ಹಾಗೂ ಬಾಳಪ್ಪ ವಾಲಿಕಾರ ಎನ್ನುವ ಬಸನಗೌಡ ಪಾಟೀಲ ಮೂವರು ಸಹೋದರರನ್ನು ಕೆರೂರ ಪೊಲೀಸರು ಬಂಧಿಸಿದ್ದಾರೆ.

ಏನಿದು ಆಸ್ತಿ ವಿವಾದ?

ಮೃತ ಬಸನಗೌಡ ಪಾಟೀಲ ಅವರ ಹಿರಿಯರಿಂದ ಬಂಧಿತ ಆರೋಪಿಗಳ ಹಿರಿಯರು 1977ರಲ್ಲಿ 14 ಎಕರೆ ಜಮೀನು ಖರೀದಿ ಮಾಡಿದ್ದರಂತೆ. ಮಾಲೀಕತ್ವ ಮಾತ್ರ ಖರೀದಿ ಮಾಡಿದವರ ಹೆಸರಿಗೆ ವರ್ಗಾವಣೆ ಆಗಿರಲಿಲ್ಲ. ಆರ್‌ಟಿಸಿಯಲ್ಲಿ ಕೊಲೆಯಾಗಿರುವ ಬಸನಗೌಡ ಅವರ ಸಹೋದರಿ ಹೆಸರು ಇದೆ. ಅವರು ವಿದೇಶದಲ್ಲಿ ಇದ್ದು, ಬಹಳ ದಿನಗಳಿಂದ ಇಲ್ಲಿಗೆ ಬಂದಿಲ್ಲ ಎನ್ನಲಾಗುತ್ತಿದೆ.

ಆದರೆ, ಜಮೀನಿನಲ್ಲಿ ಕೊಲೆ ಆರೋಪಿಗಳು ಸಾಗುವಳಿ ಮಾಡುತ್ತ ಬಂದಿದ್ದರು. ಹತ್ತಿರದಲ್ಲಿ ಬಸನಗೌಡ ಪಾಟೀಲ ಅವರಿಗೆ ಸೇರಿದ ಜಮೀನು ಇದೆ. ತಮ್ಮ ಹಿರಿಯರು ಖರೀದಿ ಮಾಡಿರುವ ಜಮೀನು ಮಾಲೀಕತ್ವ ತಮ್ಮ ಹೆಸರಿಗೆ ಮಾಡಿಸುವಂತೆ ಆಗಾಗ ಅವರನ್ನು ಕೇಳುತ್ತಿದ್ದರು. ಸಹೋದರಿ ವಿದೇಶದಿಂದ ಬಂದ ಮೇಲೆ ಮಾಡಿಸಿಕೊಡುವುದಾಗಿ ಹೇಳುತ್ತಲೇ ಬಂದಿದ್ದರು. ಅದು ಈವರೆಗೂ ಆಗಿರಲಿಲ್ಲ.

ಸೋಮವಾರ ಮೂವರು ಸಹೋದರರು ಹೊಲದಲ್ಲಿ ಇದ್ದಾಗ ಅವರ ಪಕ್ಕದ ಜಮೀನಿಗೆ ಬಸನಗೌಡ ಪಾಟೀಲ ಬಂದಿದ್ದಾರೆ. ಅವರನ್ನು ನೋಡಿ, ಜಮೀನು ತಮ್ಮ ಹೆಸರಿಗೆ ಯಾವಾಗ ಮಾಡಿಸಿಕೊಡುತ್ತೀರಿ. ಬರೀ ಹೇಳುವುದೇ ಆಯಿತು ಎಂದಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಅದು ಕೊನೆಗೆ ವಿಕೋಪಕ್ಕೆ ತಿರುಗಿ ಮೂವರು ಸಹೋದರರು ಸೇರಿ ವೃದ್ಧನಿಗೆ ಕಬ್ಬಿನ ಗಣಕಿ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಂಧಿತ ಆರೋಪಿಗಳು ಕಾಡರಕೊಪ್ಪ ಗ್ರಾಮದವರಾಗಿವು ಬಸನಗೌಡ ಅವರು ಹೊಸಕೋಟೆ ಗ್ರಾಮದವರು.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?

ಹೊಸಕೋಟೆ ವ್ಯಾಪ್ತಿಯ ಜಮೀನಿನಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 1977ರಲ್ಲಿ ನಡೆದಿದ್ದ ಜಮೀನು ಖರೀದಿ ಬಳಿಕ ಮಾಲೀಕತ್ವ ಈ ವರೆಗೂ ಬದಲಾಗಿರಲಿಲ್ಲ. ಅದನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಆಗಾಗ ಹೇಳಿದ್ದು, ಬುಧವಾರ ಇದೇ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದಾರೆ.

Latest News

ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡಿ: SMES ಅಧ್ಯಕ್ಷ ಎಂ.ಆರ್. ನಾಯಕರ

ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡಿ: SMES ಅಧ್ಯಕ್ಷ ಎಂ.ಆರ್. ನಾಯಕರ

ಬಬಲೇಶ್ವರ: ದೇಶವನ್ನು ಸುವ್ಯವಸ್ಥಿತವಾಗಿ ಮುಂದೆ ಕೊಂಡ್ಯೊಯುವ ಉದ್ದೇಶದಿಂದ ಸ್ವತಂತ್ರ್ಯದ ನಂತರ ಸಂವಿಧಾನ ರಚಿಸಲಾಯಿತು ಎಂದು

ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ: ಹೆಚ್ಚಿದ ಆತಂಕ

ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ: ಹೆಚ್ಚಿದ ಆತಂಕ

ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಮದರಿ ಗ್ರಾಮವ್ಯಾಪ್ತಿಯ ಕಬ್ಬಿನ ಗದ್ದೆಯ ಹತ್ತಿರ

500-1000 ರೂ.ಗೆ ಓಟು ಮಾರಿಕೊಳ್ಳಬೇಡಿ- ತಹಶೀಲ್ದಾರ್ ಚಾಲಕ್

500-1000 ರೂ.ಗೆ ಓಟು ಮಾರಿಕೊಳ್ಳಬೇಡಿ- ತಹಶೀಲ್ದಾರ್ ಚಾಲಕ್

ಮುದ್ದೇಬಿಹಾಳ : 500-1000 ರೂ.ಗಳಿಗೆ ನಿಮ್ಮ ಓಟು ಮಾರಿಕೊಂಡರೆ ಐದು ವರ್ಷಗಳ ಕಾಲ ಅವರು

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ:                                      ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ: ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಶಹಾಪೂರ : ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ

ಗ್ರಾಮಗಳ ಅಭಿವೃದ್ಧಿಗೆ ತೆರಿಗೆ ಪಾವತಿ ಅಗತ್ಯ ; ಪಿಡಿಓ ನಿರ್ಮಲಾ ತೋಟದ

ಗ್ರಾಮಗಳ ಅಭಿವೃದ್ಧಿಗೆ ತೆರಿಗೆ ಪಾವತಿ ಅಗತ್ಯ ; ಪಿಡಿಓ ನಿರ್ಮಲಾ ತೋಟದ

ನಾಲತವಾಡ : ಹೋಬಳಿ ವ್ಯಾಪ್ತಿಯ ಅಡವಿ ಸೋಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವನಭಾವಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಸನ್ 2026-27 ಸಾಲಿನ ನರೇಗಾ ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ ಜರುಗಿತು. .ಅಡವಿ ಸೋಮನಾಳ ಪಿಡಿಓ ನಿರ್ಮಲಾ ತೋಟದ ಮಾತನಾಡಿ, ರೈತರಿಗೆ,ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಬರುವ ಕಾಮಗಾರಿಗಳಾದ ಕೃಷಿ ಹೊಂಡ,ಬದು ನಿರ್ಮಾಣ, ಚೆಕ್ ಡ್ಯಾಮ್ ದನದ ಕೊಟ್ಟಿಗೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ : ಮೊಹ್ಮದ್‌ಜೀಶಾನ್ ರಿಸಾಲ್ದಾರ್‌ಗೆ ಚಿನ್ನದ ಪದಕ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ : ಮೊಹ್ಮದ್‌ಜೀಶಾನ್ ರಿಸಾಲ್ದಾರ್‌ಗೆ ಚಿನ್ನದ ಪದಕ

ಮುದ್ದೇಬಿಹಾಳ : ಗೋವಾ ರಾಜ್ಯದಲ್ಲಿ ನಡೆಯುತ್ತಿರುವ ಯೂಥ್ ಗೇಮ್ಸ್ ಇಂಡಿಯಾದಿoದ ರಾಷ್ಟ್ರಮಟ್ಟದ 10 ವರ್ಷದೊಳಗಿನ ಬಾಲಕರಿಗಾಗಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ತಾಲ್ಲೂಕಿನ ಕುಂಟೋಜಿ ರಸ್ತೆಯಲ್ಲಿರುವ ಬಸವ ಇಂಟರ್‌ನ್ಯಾಶನಲ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಮೊಹ್ಮದ್‌ಜಿಶಾನ್ ರಿಸಾಲ್ದಾರ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಮೊಹ್ಮದ್‌ಜಿಶಾನ್ 15 ಸೆಕೆಂಡ್ ನಲ್ಲಿ ನಿಗದಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿಕೊಂಡು ಅಂತರಾಷ್ಟ್ರೀಯ