Onion price: ಉಳ್ಳಾಗಡ್ಡಿ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹ

Onion price: ಉಳ್ಳಾಗಡ್ಡಿ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹ

ಬೀಳಗಿ: ಸತತವಾಗಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಬೀಜ, ರಸಗೊಬ್ಬರ, ಕೀಟನಾಶಕ ಔಷದ, ಕಳೆ ತೆಗೆಯಲು ಕೃಷಿ ಕಾರ್ಮಿಕರಿಗೆ ಎಕರೆಗೆ ಈರುಳ್ಳಿ ಬೀಜ (onion price) ಬಿತ್ತನೆಗೆ ಕನಿಷ್ಟ ನಾಲವತ್ತು ಸಾವಿರ ರೂಪಾಯಿಗಳು ಖುರ್ಚು ಮಾಡಿದ್ದು, ಆ ಬೆಳೆಗಳು ನೀರು ಪಾಲಾಗಿದ್ದು, ಕೈ ಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತನು ಕಷ್ಟದಲ್ಲಿ ಸಿಲುಕಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರ ನ್ಯಾಯಯುತ ಪರಿಹಾರವನ್ನು ಶೀಘ್ರದಲ್ಲಿ ನೀಡಬೇಕೆಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಚ ವಿರುಪಾಕ್ಷಯ್ಯ ಪ.ಹಿರೇಮಠ ಆಗ್ರಹಪಡಿಸಿದರು.

ಅವರು ಬೀಳಗಿ ಪಟ್ಟಣದಲ್ಲಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕದ ಸಹಯೋಗದಲ್ಲಿ ಈರುಳ್ಳಿ ಬೆಳೆಗಾರರಿಗೆ ನ್ಯಾಯಯುತ ಲಾಭದಾಯಕ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ತಾಲೂಕು ಆಡಳಿತ ಸೌಧದ ಮುಂದೆ ರೈತರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಅಳಿದುಳಿದ ಈರುಳ್ಳಿ ಬೆಳೆಯನ್ನು ಮಾರಾಟ ಮಾಡಲು ಮಾರ್ಕೆಟಿಗೆ ಹೋದರೆ ಅದರ ದರ ಸಂಪೂರ್ಣ ಕುಸಿದಿದ್ದು ಬೆಳೆಯನ್ನು ಬೆಳೆಯಲು ಹಾಕಿದ ಖರ್ಚು ಬಾರದೇ ಇರುವದರಿಂದ ರೈತರು ಹಣಕಾಸು ಸಂಸ್ಥೆಗಳಿಂದ ಹಾಗೂ ಲೇವಾದೇವಿಗಾರರಿಂದ ಪಡೆದ ಸಾಲ ತೀರಿಸುವದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದು, ಸರಕಾರ ನ್ಯಾಯಯುತ ಲಾಭದಾಯಕ ಬೆಂಬಲ ಬೆಲೆ ನೀಡಬೇಕು ಒತ್ತಾಯಿಸಿದರು.

ಉ.ಪ್ರಾ. ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ ಬೆಳೆ ವಿಮೆ ಕಟ್ಟಿದ ರೈತರಿಗೆ ವಿಮಾ ಕಂಪನಿ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯವರು ಸರಿಯಾಗಿ ಪರಿಶೀಲನೆ ನಡೆಸದೇ ಇರುವದರಿಂದ ರೈತರು ವಿಮಾ ಕಂಪನಿ ನೀಡುವ ಕ್ಲೇಮ್ ದಿಂದ ವಂಚಿತರಾಗುತ್ತಿದ್ದು ಸರಕಾರ ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ, ಜಿಲ್ಲಾ ಕೋಶ್ಯಾಧ್ಯಕ್ಷ ಮುದುಕಪ್ಪ ವಡವಾಣಿ, ಜಿಲ್ಲಾ ಮಹಿಳಾ ಪ್ರಮುಖರಾದ ರೇಣುಕಾ ಹುಲ್ಲಿಕೇರಿ, ರೈತ ಮುಖಂಡರಾದ ಶಿವನಗೌಡ ಪಾಟೀಲ, ಡೊಂಗ್ರಿಸಾಬ ನದಾಪ, ಚಂದ್ರಶೇಖರ ಕಾಖಂಡಕಿ ಬಸವಂತ ಸಂಕಾನಟ್ಟಿ, ಸುರೇಶ ಹೂಗಾರ,ಮಂಜು ಬಾವಿ, ಹಣಮಂತ ದೊರೆಗೊಳ, ಶಾಂತಯ್ಯ ಪಂಚಗಟ್ಟಿಮಠ, ಲಕ್ಷ್ಮಣ್ಣ ಸವನಾಳ, ಯಲ್ಲಾಲಿಂಗ ಕುರಿ, ಸಿದ್ದಪ್ಪ ಕೂಗಟಿ ಇದ್ದರು.

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ