ಅಂಗನವಾಡಿ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಡಿಪಿಓ ಕುಂಬಾರ ವಿರುದ್ಧ ಆಕ್ರೋಶ

ಅಂಗನವಾಡಿ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಡಿಪಿಓ ಕುಂಬಾರ ವಿರುದ್ಧ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಿಂದ ಆರಂಭಗೊಂಡ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ರಾಘವೇಂದ್ರ ಮಠ, ಹಳೇ ಸರಕಾರಿ ದವಾಖಾನೆ, ದ್ಯಾಮವ್ವನ ಕಟ್ಟೆ, ಮುಖ್ಯರಸ್ತೆ, ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷೆ ನೀಲಮ್ಮ ಪಾಟೀಲ್(ಬೋರಾವತ್) ಮಾತನಾಡಿ, ಕಾರ್ಯಕರ್ತೆಯರನ್ನು ಕಚೇರಿಯೊಳಕ್ಕೆ ಒಬ್ಬರನ್ನೆ ವಿಚಾರಣೆ ನೆಪದಲ್ಲಿ ಕರೆಯುತ್ತಾರೆ. ರಾತ್ರಿ 9 ಗಂಟೆಗೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಡುತ್ತಾರೆ. ಯಾರು ನೋಡಲು ಸುಂದರವಾಗಿ ಇದ್ದಾರೆಯೋ ಅಂತಹ ಕಾರ್ಯಕರ್ತೆಯರ ಕೇಂದ್ರಕ್ಕೆ ಭೇಟಿ ಕೊಟ್ಟು ತಮ್ಮ ವೇಷಭೂಷಣದ ಬಗ್ಗೆ ಸಲುಗೆಯಿಂದ ಮಾತನಾಡುತ್ತಾರೆ. ಕಾರ್ಯಕರ್ತೆಯರನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾರೆ ಎಂದು ಆರೋಪಿಸಿದರು.

ಹಿಂದಿನ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿದ್ದಾಗ ಇದೇ ಅಧಿಕಾರಿ ಪ್ರಭಾರಿ ಹುದ್ದೆಯಲ್ಲಿದ್ದರು. ಆಗ ಇಲಾಖೆಯಲ್ಲಿ ಕೆಲವು ಆರೋಪಗಳ ಕುರಿತು ಪತ್ರ ಬರೆದಾಗ ಅವರನ್ನು 24 ತಾಸಿನಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರು. ಆದರೆ ಹಾಲಿ ಶಾಸಕರು ನಮ್ಮವರೇ ಇದ್ದರೂ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮೀನಮೇಷ ಎಣಿಸಲಾಗುತ್ತಿದೆ.ಕಾರ್ಯಕರ್ತೆಯರನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಇಲಾಖೆಯ ಕಚೇರಿಯಲ್ಲಿ ಮನವಿ ಕೊಡಲು ಹೋದರೆ ಅದನ್ನು ತೆಗೆದುಕೊಳ್ಳಲು ನಿರಾಕರಣೆ ಮಾಡಲಾಗುತ್ತಿದೆ ಎಂದು ದೂರಿದರು. ಕೂಡಲೇ ಸಿಡಿಪಿಒ ಕುಂಬಾರ ಅವರನ್ನು ಇಲ್ಲಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವ ಪತ್ರ ಸಲ್ಲಿಸಿದರು ಸಂಘದ ಪದಾಧಿಕಾರಿಗಳಾದ ಶೋಭಾ ಕಾಖಂಡಕಿ, ಶೋಭಾ ಘಾಟಗೆ, ನೀಲಮ್ಮ ತೊಂಡಿಹಾಳ, ಅಯ್ಯಮ್ಮ ಮೂಕಿಹಾಳ, ಶಶಿಕಲಾ ನಾಗರಾಳ, ರಾಜಶ್ರೀ ಮಮದಾಪೂರ, ಅಯ್ಯಮ್ಮ ವಣಕಿಹಾಳ, ಶಕುಂತಲಾ ದೊಡಮನಿ,ಎಂ.ಎಸ್.ಸ್ಥಾವರಮಠ,ನಿಂಬೆಕ್ಕ ಕಾಳಾಪುರ,ಮಂಜುಳಾ ಜಾಧವ,ಚಂದ್ರಕಲಾ ಹಯಾಳ,ಸಾಹೆಬ್ಬಿ ಕೆಸರಟ್ಟಿ,ಕಮಲಾ ದೇಶಪಾಂಡೆ ಮೊದಲಾದವರು ಇದ್ದರು.

ಸಿಡಿಪಿಒ ವಿರುದ್ದ ಆರೋಪಗಳ ಪರಿಶೀಲನೆ:
ಸಿಡಿಪಿಒ ವಿರುದ್ಧದ ಆರೋಪಗಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಅವರಿಗೆ ಮಾತನಾಡಿಸಿದಾಗ, ಕಾರ್ಯಕರ್ತೆಯರು ಕೊಟ್ಟಿರುವ ಮನವಿ ಪತ್ರದಲ್ಲಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಮುದ್ದೇಬಿಹಾಳಕ್ಕೆ ಮಂಗಳವಾರ ಎಸ್.ಎಸ್.ಎಲ್.ಸಿ ಪರೀಕ್ಷೆ ವಿಚಾರವಾಗಿ ಭೇಟಿ ನೀಡಿದ್ದೆ ಹೊರತು ಕಾರ್ಯಕರ್ತೆಯರನ್ನಾಗಲೀ, ಸಿಡಿಪಿಒ ಅವರನ್ನಾಗಲೀ ಭೇಟಿ ಆಗಿಲ್ಲ ಎಂದು ಉಪ ನಿರ್ದೇಶಕ ಚವ್ಹಾಣ ಸ್ಪಷ್ಟಪಡಿಸಿದರು.

Latest News

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು

ಮುದ್ದೇಬಿಹಾಳ : TAPCMS  ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ :            ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ : ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ

ಮುದ್ದೇಬಿಹಾಳ : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ

ಸಚಿವ ಖರ್ಗೆಗೆ ಬೆದರಿಕೆಗೆ ಖಂಡನೆ :                       ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದವರಿಂದ ದೇಶಪ್ರೇಮದ ಪಾಠ-ಸದ್ದಾಂ ಕುಂಟೋಜಿ ವ್ಯಂಗ್ಯ

ಸಚಿವ ಖರ್ಗೆಗೆ ಬೆದರಿಕೆಗೆ ಖಂಡನೆ : ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದವರಿಂದ ದೇಶಪ್ರೇಮದ ಪಾಠ-ಸದ್ದಾಂ ಕುಂಟೋಜಿ ವ್ಯಂಗ್ಯ

ಮುದ್ದೇಬಿಹಾಳ : ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಖರ್ಗೆಯವರು ತಮ್ಮ ಪತ್ರದಲ್ಲಿ ಎಲ್ಲಿಯೂ ಆರ್.ಎಸ್.ಎಸ್ ನಿಷೇಧಿಸಬೇಕು ಎಂದು ಹೇಳಿರಲಿಲ್ಲ.ಆದರೆ ಆ ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದರು.ಇದರ ಬಳಿಕ ಕೆಲವರು ಸಚಿವ ಖರ್ಗೆ ಅವರಿಗೆ ಕರೆ

ತಾ.ಪಂ ಕಾನೂನು ಸಲಹೆಗಾರರಾಗಿ ಎನ್.ಬಿ.ಮುದ್ನಾಳ ನೇಮಕ

ತಾ.ಪಂ ಕಾನೂನು ಸಲಹೆಗಾರರಾಗಿ ಎನ್.ಬಿ.ಮುದ್ನಾಳ ನೇಮಕ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡ ಶಿಫಾರಸ್ಸಿನ ಮೇರೆಗೆ ಇಲ್ಲಿನ ಹಿರಿಯ ವಕೀಲರಾದ ಎನ್.ಬಿ.ಮುದ್ನಾಳ ಅವರನ್ನು ಮುದ್ದೇಬಿಹಾಳ ತಾಲ್ಲೂಕು ಪಂಚಾಯತನ ಕಾನೂನು ಸಲಹೆಗಾರರಾಗಿ ನೇಮಿಸಿರುವುದಾಗಿ ತಾಪಂ ಇಒ ಜಿ.ಪಂ ಸಿಇಒಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.