ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಕಾಲೇಜಿನಿಂದ ಮಾಸ್ಟರ್ ಮೈಂಡ್ ಆವಾರ್ಡ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ ತಿಳಿಸಿದ್ದಾರೆ. ಪರೀಕ್ಷೆಯನ್ನು 10ನೇ ತರಗತಿ ಸ್ಟೇಟ್ ಬೋರ್ಡ್,ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪರೀಕ್ಷೆ ತಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 50 ಸಾವಿರ,ದ್ವಿತೀಯ ಸ್ಥಾನ 40 ಸಾವಿರ, ಮೂರನೇ ಸ್ಥಾನ 30 ಸಾವಿರ, ನಾಲ್ಕನೇ ಸ್ಥಾನ 15 ಸಾವಿರ ,ಐದನೇ ಸ್ಥಾನ 10 ಸಾವಿರ, ಆರನೇ ಸ್ಥಾನ 5 ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ಮೊದಲ 10 ವಿದ್ಯಾರ್ಥಿಗಳಿಗೆ 2500 ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಆಸಕ್ತ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಮೊ.9380095756ಗೆ ಕಳಿಸಬಹುದಾಗಿದೆ.
ಪರೀಕ್ಷೆ ನಡೆಯುವ ಸ್ಥಳ,ಸಮಯ : ಶ್ರೀ ಜ್ಞಾನ ಸಂಜೀವಿನಿ ಪ್ರೆöÊಮರಿ & ಹೈಸ್ಕೂಲ್ ಮಸ್ಕಿ ಬೈಪಾಸ್ ರಸ್ತೆ, ಚರ್ಚ್ ಎದುರಿಗೆ, ಲಿಂಗಸುಗೂರ ಇಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ.7483147040,8310035858 ಸಂಪರ್ಕಿಸಬಹುದಾಗಿದೆ.





