ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ ಮಂಗಗಳಿOದ ನಿತ್ಯವೂ ಸಾರ್ವಜನಿಕರು,ವ್ಯಾಪಾರಿಗಳು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಸೋಮವಾರ ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು ಆಲದ ಮರದ ಸುತ್ತಮುತ್ತಲೂ ವೃದ್ಧರು,ಮಹಿಳೆಯರು ವ್ಯಾಪಾರಕ್ಕೆಂದು ಕಾಯಿಪಲ್ಯೆ,ಮಸಾಲೆ ಪದಾರ್ಥಗಳನ್ನು ಮಾರಾಟಕ್ಕೆ ಬರುವವರ ಮೇಲೆ ಈ ಮಂಗಗಳು ದಾಳಿ ಮಾಡುತ್ತಿವೆ.
ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಐದಾರು ಜನರ ಮೇಲೆ ದಾಳಿ ಮಾಡಿ ಕಚ್ಚಿಗಾಯಗೊಳಿಸಿದ ಘಟನೆಗಳು ನಡೆದಿವೆ.ಸ್ವೀಟ್ ಮಾರ್ಟ್ ಅಂಗಡಿಯವರOತೂ ಈ ಮಂಗಗಳನ್ನು ಓಡಿಸಲು ಬಡಿಗೆಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆಂದು ಬರುವ ಜನರನ್ನು ಕಾಯ್ದುಕೊಂಡು ಮಂಗಗಳನ್ನು ಓಡಿಸುವುದೇ ನಿತ್ಯದ ಕಾಯಕವಾಗಿ ಪರಿಣಮಿಸಿದೆ.
ಸೋಮವಾರದಂದು ಜೈನಾಪೂರದಿಂದ ಸಂತೆಗೆ ಬಂದಿದ್ದ ವೃದ್ಧೆಯೊಬ್ಬರ ಮೇಲೆ ಮಂಗ ದಾಳಿ ಮಾಡಿದೆ.ಚಿಕ್ಕಮಕ್ಕಳು ಕೈಯ್ಯಲ್ಲಿ ತಿನಿಸುಗಳ ಪೊಟ್ಟಣ ಹಿಡಿದು ತೆರಳುವುದನ್ನು ಕಂಡರೆ ಅವರ ಮೇಲೆ ದಾಳಿ ಮಾಡುತ್ತಿವೆ. 3-4 ಮಂಗಗಳು ಇಲ್ಲಿ ಬಿಡಾರ ಹೂಡಿದ್ದರೂ ಅವುಗಳನ್ನು ಬೇರೆಡೆ ಸಾಗಿಸುವ ಕೆಲಸ ಸಂಬAಧಪಟ್ಟ ಇಲಾಖೆಯವರು ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಮಂಗಗಳನ್ನು ಸೆರೆ ಹಿಡಿಯಲು ಪಟ್ಟಣ ಪಂಚಾಯಿತಿಯವರು ವೆಚ್ಚ ಭರಿಸಬೇಕು.ಅರಣ್ಯ ಇಲಾಖೆಯಿಂದ ಕಾರ್ಯಾಚರಣೆಗೆ ನುರಿತ ತಜ್ಞರನ್ನು ಕರೆಯಿಸಿ ಮಂಗಗಳನ್ನು ಸೆರೆ ಹಿಡಿದು ಬಾದಾಮಿ ಕಡೆಯ ಗುಹೆಗಳಲ್ಲಿ ಬಿಡಲಾಗುತ್ತದೆ.ಕಳೆದ ವರ್ಷವೂ ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಗಳ ಹಾವಳಿ ಮೀತಿ ಮೀರಿತ್ತು.ಅದನ್ನು ಪರಿಹರಿಸಲಾಗಿದೆ.ಪಟ್ಟಣ ಪಂಚಾಯಿತಿಯವರು ಅನುದಾನ ಕೊಟ್ಟರೆ ಮಂಗಗಳನ್ನು ಸೆರೆ ಹಿಡಿದು ಬೇರೆಡೆ ಸಾಗಿಸಲಾಗುವುದು. —ಬಸನಗೌಡ ಬಿರಾದಾರ, ಪ್ರಾದೇಶಿಕ ಅರಣ್ಯ ಇಲಾಖೆ,ಮುದ್ದೇಬಿಹಾಳ ವಲಯ
ಮಂಗಗಳನ್ನು ಒಂದು ಊರಲ್ಲಿ ಹಿಡಿಯುವುದು ಮತ್ತೊಂದು ಊರಲ್ಲಿ ಬಿಡುವುದು ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ.ಕೆಲವು ಅಧಿಕಾರಿಗಳು ಇಂತಹ ಮಂಗಗಳನ್ನು ಹಿಡಿಯುವ ತಜ್ಞರೊಂದಿಗೆ ಷಾಮೀಲಾಗಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುವುದು ಮಾಡುತ್ತಾರೆ.ನಮ್ಮಲ್ಲಿ ಮಂಗಗಳು ಇರುವ ಬಗ್ಗೆ ಪತ್ತೆ ಹಚ್ಚಿ ಸಂಬAಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗ ಈ ಮಂಗಗಳನ್ನು ಬೇರೆಡೆ ಸಾಗಿಸಲು ಕ್ರಮ ಜರುಗಿಸಲಾಗುವುದು.
––ಈರಣ್ಣ ಕೊಣ್ಣೂರ, ಮುಖ್ಯಾಧಿಕಾರಿ ಪ.ಪಂ ನಾಲತವಾಡ




