Protest Accident during protest in Bagalkot.. CM Siddu fan set himself on fire

Protest: ಬಾಗಲಕೋಟೆಯಲ್ಲಿ ಬೆಂಕಿ ಹಚ್ಚಿಕೊಂಡ ಸಿಎಂ ಸಿದ್ದರಾಮಯ್ಯ‌ ಅಭಿಮಾನಿ.. ಆಸ್ಪತ್ರೆಗೆ ದಾಖಲು..

Protest: ಬಾಗಲಕೋಟೆಯಲ್ಲಿ ಬೆಂಕಿ ಹಚ್ಚಿಕೊಂಡ ಸಿಎಂ ಸಿದ್ದರಾಮಯ್ಯ‌ ಅಭಿಮಾನಿ.. ಆಸ್ಪತ್ರೆಗೆ ದಾಖಲು..

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬರು ಬೆಂಕಿ‌ಹೆಚ್ಚಿಕೊಳ್ಳಲು ಯತ್ನಿಸಿದ ಘಟನೆ ಬಾಗಲಕೋಟೆ ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನೆ (Protest) ವೇಳೆ ಸಂಭವಿಸಿದೆ.

ರಾಜ್ಯಪಾಲರು ಸಿಎಂ ವಿರುದ್ದ ಪ್ರಾಸಿಕ್ಯೂಷನ್’ಗೆ ಅನುನತಿ ನೀಡಿದ್ದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯನವರ ಅಭಿಮಾನಿಗಳು ಹಮ್ಮಿಕೊಂಡ ಪ್ರತಿಭಟನಾ (Protest) ಮೆರವಣಿಗೆ ವೇಳೆ ಈ ಘಟನೆ ಜರುಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ.. https://t.me/dcgkannada

ನಗರದ ಜಿಲ್ಲಾಡಳಿತದ ಸಮೀಪ‌ ಪ್ರತಿಭಟನಾಕಾರರು ಟಯರ್’ಗೆ ಬೆಂಕಿ ಹಚ್ಚಿ,ಕೇಂದ್ರ ನಾಯಕರ ಭಾವಚಿತ್ರಗಳಿಗೆ ಚಪ್ಪಲಿ ಏಟು ನೀಡಿ, ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ಸಿದ್ಧರಾಮಯ್ಯನವರ ಅಭಿಮಾನಿ ಪೆಟ್ರೋಲ್‌ ಕಸಿದಯ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಮತ್ತೊಬ್ಬ ಪ್ರತಿಭಟನಾಕರನಿಗೂ ಬೆಂಕಿ ತಗುಲಿದೆ. ಕೂಡಲೇ ಸ್ಥಳದಲ್ಲಿದ್ದವರು ತಡೆದು, ಪೊಲೀಸರ ಸಹಾಯದಿಂದ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ‌ಗುಳೇದಗುಡ್ಡ ಸಮೀಪದ ನಾಗರಾಳ ಎಸ್.ಪಿ.ಗ್ರಾಮದ ನಿವಾಸಿ ದ್ಯಾವಪ್ಪ ಮಾಗಿ ಎಂದು ಗುರುಸಲಾಗಿದೆ. ಪಕ್ಕದಪಕ್ಕದಲ್ಲೇ ಇದ್ದ ಹಿರಿಯರಿಗೆ ಸಣ್ಣ ಗಾಯವಾಗಿದೆ ಎಂದು ತಿಳಿದು ಬಂದಿದೆ.

ವ್ಯಕ್ತಿ ಕೈ, ಮೈ, ಕುತ್ತಿಗೆ, ಎದೆ,ವಬೆನ್ನು ಸೇರಿ ಹಲವೆಡೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: V Somanna: ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಸಂಸದ.. ಕಚೇರಿ ಉದ್ಘಾಟಿಸಿದ ಸೋಮಣ್ಣ

ಕೈ ಪಡೆ ಕೆಂಡಾಮಂಡಲ..‌ ರಾಜ್ಯಪಾಲರ ಕಚೇರಿ ಮುತ್ತಿಗೆ ಯತ್ನ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಕೆಗೆ ಅನುಮತಿ ನೀಡಿದ ರಾಜ್ಯಪಾಲರ ನಿರ್ಣಯವನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಚುರುಕಾಗಿ ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ.

ಈ ವೇಳೆ ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಆರಂಭಗೊಂಡಿದ್ದು ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಾರೆ. ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿರುವುದರಿಂದ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

ಮೈಸೂರು, ತುಮಕೂರು, ಬೆಳಗಾವಿ, ದಾವಣಗೆರೆ ಮುಂತಾದೆಡೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಸಿಎಂ ಪರ ಘೋಷಣೆ ಕೂಗಿ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಮಂಡ್ಯದಲ್ಲಿ ಅಹಿಂದ ಬಳಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದಾರೆ. ನರಸೀಪುರದಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿದೆ.

ಕಮಲ-ದಳ ಪಕ್ಷಗಳು ಜಂಟಿಯಾಗಿ ಇಂದು ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಿಎಂ ರಾಜೀನಾಮೆಗೆ ಒತ್ತಾಯಿಸಲಿದೆ.

ರಿಟ್ ಅರ್ಜಿ; ರಾಜ್ಯಪಾಲರು ತನ್ನ ವಿರುದ್ಧ ತನಿಖೆ ನಡೆಸುವಂತೆ ನೀಡಿರುವ ಆದೇಶವನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಸೋಮವಾರ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು, ಈ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

ಅಭಿಷೇಕ್ ಮನು ಸಿಂಫ್ಟಿ ಮತ್ತು ಕಪಿಲ್ ಸಿಬಲ್ ಸಿಎಂ ಸಿದ್ದರಾಮಯ್ಯ ಪ್ರಕರಣದ ವಕೀಲಿಕೆಯ ಹೊಣೆ ಹೊತ್ತಿದ್ದು ಅವರೊಂದಿಗೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಭೇಟಿ ನೀಗದಿಯಾಗಿದೆ.

Latest News

​🌅 ಶುಭೋದಯದ ಪದ್ಯ

​🌅 ಶುಭೋದಯದ ಪದ್ಯ

​ಹೊಸ ಆಸೆಯ ಹೊತ್ತು ಸೂರ್ಯ ಮೂಡಿದ,ಹೊಸ ಕನಸಿನ ಬುತ್ತಿ ಹಕ್ಕಿ ಹಾಡಿದ.ಮಬ್ಬು ಮರೆತು, ಬೆಳಕು

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ಒಂದು ದೊಡ್ಡ ನಗರದ ಹೊರವಲಯದಲ್ಲಿ ಒಬ್ಬ ಅನುಭವಿ ಕುಂಬಾರ ವಾಸಿಸುತ್ತಿದ್ದನು. ಆತನ ಹೆಸರು ರಾಘವ.

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಅಯ್ಯಪ್ಪಗೌಡ ರೆಡ್ಡಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುತ್ತಿಗೆದಾರ ಶ್ರೀಕಾಂತಗೌಡ ಪಾಟೀಲ, ಮುಖಂಡ ರುದ್ರಗೌಡ ಅಂಗಡಗೇರಿ ಸನ್ಮಾನಿಸಿದರು. ಅಯ್ಯಪ್ಪಗೌಡ ರೆಡ್ಡಿ ಅವರು ಈ ಮುಂಚೆ ಶಿರಸಿ ಸಿದ್ದಾಪುರ,ಮುದ್ದೇಬಿಹಾಳ,ಆಲಮಟ್ಟಿ,ತಾಳಿಕೋಟಿ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದು ಅವರಿಗೆ ಸರ್ಕಾರ ಈ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ;                                 ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ; ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ಮುದ್ದೇಬಿಹಾಳ : ಕಾನಿಪ ಸಂಘದ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ನಡೆಸಲಾಗಿದ್ದು ವಡವಡಗಿ-ಬನ್ನೆಟ್ಟಿ ಪೆನಲ್ ಮಧ್ಯೆ ಏರ್ಪಟ್ಟ ಸ್ಪರ್ಧೆಯಲ್ಲಿ ವಡವಡಗಿ ಪೆನಲ್ ಪದಾಧಿಕಾರಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ವಡವಡಗಿ ಹಾಗೂ ಮಕ್ಬೂಲ್ ಬನ್ನೆಟ್ಟಿ ನಾಮಪತ್ರ ಸಲ್ಲಿಸಿದ್ದು ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಅವರು 19 ಮತ ಪಡೆದು ಆಯ್ಕೆಯಾಗಿ ಪ್ರತಿಸ್ಪರ್ಧಿ ಮಕ್ಬುಲ್ ಬನ್ನೆಟ್ಟಿ ಅವರನ್ನು 10 ಮತಗಳ ಅಂತರದಿoದ ಪರಾಭವಗೊಳಿಸಿದರು. ಉಪಾಧ್ಯಕ್ಷ