ವಿದ್ಯುತ್ ಸ್ಪರ್ಶಿಸಿ ಪಿಗ್ಮಿ ಏಜೆಂಟ್ ಸಾವು

ವಿದ್ಯುತ್ ಸ್ಪರ್ಶಿಸಿ ಪಿಗ್ಮಿ ಏಜೆಂಟ್ ಸಾವು

ಮುದ್ದೇಬಿಹಾಳ : ಮನೆ ಕಟ್ಟಡಕ್ಕೆ ನೀರು ಹೊಡೆಯುವ ಸಂದರ್ಭದಲ್ಲಿ ಮೋಟರ್‌ಗೆ ಪೈಪ್ ಜೋಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ತಾಲ್ಲೂಕಿನ ನಾಲತವಾಡ ಪಟ್ಟಣದ ನಿವಾಸಿ, ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಬ್ಯಾಂಕಿನ ಪಿಗ್ಮಿ ಸಂಗ್ರಾಹಕರ ನಾಗೇಶ ಬಿ.ಲೋಕರೆ (42) ಶುಕ್ರವಾರ ಮೃತಪಟ್ಟಿದ್ದಾರೆ. ವಿದ್ಯುತ್ ಸ್ಪರ್ಶಿಸಿ ಪ್ರಜ್ಞಾಹೀನರಾದ ಅವರನ್ನು ಸ್ಥಳದಲ್ಲೇ ಇದ್ದ ಯುವಕರು ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸುವುದರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಅವರಿಗೆ ತಂದೆ. ಪತ್ನಿ,ಪುತ್ರ,ಪುತ್ರಿ ಇದ್ದಾರೆ.

ಮಾಜಿ ಶಾಸಕ ನಡಹಳ್ಳಿ ಭೇಟಿ ಸಾಂತ್ವನ :

ವಿದ್ಯುತ್ ಪ್ರವಹಿಸಿ ಮೃತಪಟ್ಟ ನಾಗೇಶ ಲೋಕರೆ ಕುಟುಂಬದವರನ್ನು ಭೇಟಿಯಾದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ವಿದ್ಯುತ್ ಸಂಬoಧಿ ಕೆಲಸಗಳಿದ್ದಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರಲ್ಲದೇ ಮೃತರ ಕುಟುಂಬಕ್ಕೆ ವಯಕ್ತಿಕವಾಗಿ ಧನಸಹಾಯ ಮಾಡಿದರು.ಬಿಜೆಪಿ ಮುಖಂಡರಾದ ಎಂ.ಎಸ್.ಪಾಟೀಲ,ಎo.ಬಿ.ಅoಗಡಿ , ಕೆಂಚಪ್ಪ ಆರ್ ಬಿರಾದಾರ .ಖಾಜಾಹುಸೇನ ಎತ್ತಿನಮನಿ, ಗಿರೀಶಗೌಡ ಪಾಟೀಲ್,ಶಿವಪುತ್ರಯ್ಯ ಸ್ಥಾವರಮಠ,ಸಂಗಮೇಶ ಮೇಟಿ, ಸಂಗಣ್ಣ ಹಾವರಗಿ. ಅಮರೇಶ ಹಟ್ಟಿ. ಅಂಬಾಜಿ ಪೇಟಕರ ಮೊದಲಾದವರು ಇದ್ದರು.

Latest News

ಮುದ್ದೇಬಿಹಾಳ : ಮಾ.15 ರಂದು ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್

ಮುದ್ದೇಬಿಹಾಳ : ಮಾ.15 ರಂದು ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್

ಮುದ್ದೇಬಿಹಾಳ : ಪಟ್ಟಣದ ವಿದ್ಯಾನಗರದ ಶಿರವಾಳ ಲೇಔಟ್‌ದಲ್ಲಿರುವ ಪ್ರಗತಿ ಜೆಸಿ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ

ಮುದ್ದೇಬಿಹಾಳ : ಮಾ.12 ರಂದು ಪದ್ಮಾವತಿ ಅಮ್ಮನವರ ಮಹಾರಥೋತ್ಸವ

ಮುದ್ದೇಬಿಹಾಳ : ಮಾ.12 ರಂದು ಪದ್ಮಾವತಿ ಅಮ್ಮನವರ ಮಹಾರಥೋತ್ಸವ

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ಅಮ್ಮನವರ ಜಾತ್ರಾ ಮಹೋತ್ಸವ ಮಾ.12,13 ರಂದು

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಮುದ್ದೇಬಿಹಾಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳುವ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ಸೌಹಾರ್ದತೆಯನ್ನು ಬೆಸೆಯುವ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ಮುದ್ದೇಬಿಹಾಳ : ರಂಜಾನ್ ಹಬ್ಬ ಎಲ್ಲ ಹಬ್ಬಗಳ ಜೊತೆಗೆ ಆಚರಣೆಗೆ ಬರುತ್ತದೆ.ನಾವೆಲ್ಲ ಯುದ್ಧವನ್ನು ಖಂಡಿಸಬೇಕು.ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಈ ಯುದ್ಧ ನಡೆಯಬೇಕಾದ ಅವಶ್ಯಕತೆ ಇರಲಿಲ್ಲ.ಯುದ್ಧ ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಮಾಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಉರ್ದು ಶಾಲೆ ಆವರಣದಲ್ಲಿ ಶುಕ್ರವಾರ ದೇವಿಕಾ ಸುಬ್ಬರಾವ್ ಫೌಂಡೇಶನ್‌ದಿAದ ರಂಜಾನ್ ಹಬ್ಬದ ನಿಮಿತ್ಯ ಆಯೋಜನೆ ಮಾಡಿದ್ದ ಇಫ್ತಿಯಾರ್ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಮಾನವೀಯ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ ಮಾ.9 ರಂದು ಸಾಯಂಕಾಲ 5ಗಂಟೆಗೆ ಪಟ್ಟಣದ ಮಹಾಂತೇಶ ನಗರದ ಗಣೇಶ ಗುಡಿ ಹತ್ತಿರದಲ್ಲಿರುವ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ಶಾಲೆಯ ಗೌರವಾಧ್ಯಕ್ಷ ವೇ.ಸಂಗಯ್ಯ ಹಾಲಗಂಗಾಧರಮಠ ವಹಿಸುವರು.ವೈದ್ಯರಾದ ಡಾ.ಚಂದ್ರಶೇಖರ ಶಿವಯೋಗಿಮಠ ಅಧ್ಯಕ್ಷತೆ ವಹಿಸುವರು.ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಹುಲ್ಲೂರ ಎಸ್.ಎನ್.ಡಿ ನ್ಯಾಶನಲ್