ಮುದ್ದೇಬಿಹಾಳ : ಭಾರತೀಯ ನೌಕಾಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಗುರುವಾರ ತವರಿಗೆ ಮರಳಿದ ಮುದ್ದೇಬಿಹಾಳ ತಾಲ್ಲೂಕಿನ ಜಟ್ಟಗಿ ತಾಂಡಾದ ಸತೀಶ ನಾಯಕ ಅವರನ್ನು ಮುದ್ದೇಬಿಹಾಳ ಪಟ್ಟಣದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಪುಷ್ಪವೃಷ್ಠಿಗೈದು ಸ್ವಾಗತಿಸಲಾಯಿತು.
ಪಟ್ಟಣದ ಬಜಾರ ಹನುಮಾನ ದೇವಸ್ಥಾನದಿಂದ ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಆದಿಯಾಗಿ ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮೀತಿ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು,ನಾಯಕ ಕುಟುಂಬದವರು,ದೇಶಭಕ್ತರು ಪಾಲ್ಗೊಂಡಿದ್ದರು.
ಬಸವೇಶ್ವರ ವೃತ್ತದಲ್ಲಿ ಮೆರವಣಿಗೆ ಆಗಮಿಸಿದಾಗ ಎರಡು ಬದಿಯಲ್ಲಿ ಜೆಸಿಬಿಯಲ್ಲಿ ನಿಂತುಕೊAಡ ಅವರ ಅಭಿಮಾನಿಗಳು ಚೆಂಡು ಹೂವಿನ ಪುಷ್ಪವೃಷ್ಠಿಗೈದರು.ಅಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.ಜಟ್ಟಗಿ ತಾಂಡಾದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.







