Suicide case Man committed suicide by pouring diesel on him self

Suicide case: ಮೈಮೇಲೆ ಡೀಸೆಲ್‌ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

Suicide case: ಮೈಮೇಲೆ ಡೀಸೆಲ್‌ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

ಚಿಂಚೋಳಿ: ತನ್ನ ‌ಮೈಮೇಲೆ ತಾನೇ ಡೀಸೆಲ್‌ ಅನ್ನು ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ (Suicide case) ಶರಣಾಗಿರುವ ‌ಹೃದಯವಿದ್ರಾವಕ ದುರ್ಘಟನೆ ಬೆಳಕಿಗೆ ಬಂದಿದೆ.

Join Our Telegram: https://t.me/dcgkannada

ಹೌದು, ಆ.16ರ ಶುಕ್ರವಾರ ಸಂಜೆ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಚೋಳಿ- ಮನ್ನಾಎಕ್ಕೆಳ್ಳಿ ರಾಜ್ಯ ಹೆದ್ದಾರಿಯ ಫತ್ತೆಪುರ ಗ್ರಾಮದ ಕ್ರಾಸ್ ನಲ್ಲಿ ಸಂಭವಿಸಿದೆ ಎಂದು ಪಿ.ಎಸ್.ಐ.‌ಗಂಗಮ್ಮ ‌ಮಾಹಿತಿ ನೀಡಿದ್ದಾರೆ.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ರೇಕುಳಗಿ ಗ್ರಾಮದ ಮಹೇಶ್ ಮಾರುತಿ ನಾಗನಕೇರಾ(27) ಆತ್ಮಹತ್ಯೆಗೆ (Suicide case) ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Cubbon park: ವೃದ್ಧನಿಂದ ಹೀನ ಕೃತ್ಯ.. ಕಬ್ಬನ್ ಪಾರ್ಕ್‌ ನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ.. (ವೈರಲ್ ವಿಡಿಯೋ ನೋಡಿ)

ಮಹೇಶ್ ಮಾರುತಿ ಹೆಂಡತಿಯ ತವರು ‌ಮನೆಯಲ್ಲಿ ಹೆಂಡತಿ ‌ಮಕ್ಕಳೊಂದಿಗೆ‌ ವಾಸವಾಗಿರುತ್ತಿದ್ದು. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಹಿಂದೊಮ್ಮೆ ಆತ ಆತ್ಮಹತ್ಯೆ (Suicide case) ಮಾಡಿಕೊಳ್ಳಲು ಯತ್ನಿಸಿದ್ದ. ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಚಿಂಚೋಳಿ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಚಿಂಚೋಳಿ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಈ ಘಟನೆ ನಡೆದಿದೆ.

ಮೃತಪಟ್ಟ ಮಹೇಶ್, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Mudhol: ಕಳ್ಳಭಟ್ಟಿ ಕೇಂದ್ರಗಳ ಮೇಲೆ ಅಧಿಕಾರಿಗಳ‌ ದಾಳಿ‌

ಮುಧೋಳ : ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ‌ ಕಳ್ಳಭಟ್ಟಿ‌ ಕೇಂದ್ರದ ಮೇಲೆ‌ ದಾಳಿ‌ ನಡೆಸಿರುವ ಅರಣ್ಯ ಇಲಾಖೆ‌ ಅಧಿಕಾರಿಗಳು ಕಳ್ಳಭಟ್ಟಿ‌ ಕೇಂದ್ರಗಳನ್ನು ನಾಶಪಡಿಸಿದ್ದಾರೆ.

ಮಾಧ್ಯಮದಲ್ಲಿ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ದಿನವಿಡೀ‌ ಅರಣ್ಯ ಪ್ರದೇಶದಲ್ಲಿ‌ನ ಮೂರು ಜಾಗಗಳನ್ನು ಜಾಲಾಡಿ ಕಳ್ಳಭಟ್ಟಿ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ.

ಡಿಎಫ್ಒ ಸಿ.ಜೆ.ಮಿರ್ಜಿ, ಜಮಖಂಡಿ‌ ಎಸಿಎಫ್ ಹಾಗೂ ಮುಧೋಳ‌ ವಲಯ ಅರಣ್ಯಾಧಿಕಾರಿ‌ ಎಚ್.ಬಿ. ಡೋಣಿ ಅವರ ಮಾರ್ಗದರ್ಶನದಲ್ಲಿ‌ ನಡೆದ ಕಳ್ಳಭಟ್ಟಿ‌ ಕೇಂದ್ರಗಳ‌‌ ಮೇಲಿನ ದಾಳಿ ಕಾರ್ಯಾಚರಣೆಯಲ್ಲಿ‌ ಉಪವಲಯ ಅರಣ್ಯಾಧಿಕಾರಿ‌ ರಮೇಶ ಮೆಟಗುಡ್ಡ, ಗಸ್ತು ಅರಣ್ಯಪಾಲಕ‌ರಾದ ಚಂದ್ರಶೇಖರ ಉಪ್ಪಾರ, ಶಿವರಾಜ ಸಜ್ಜನ,‌ ಆನಂದ ಸಾಗರ, ಗುರಪ್ಪ ಬಾಗೇವಾಡಿ, ವಾಚರ್ ಗಳಾದ ಹನಮಂತ ತಳವಾರ, ಈರಪ್ಪ‌‌ ಕೋಲೂರ ಹಾಗೂ ತಿಪ್ಪಣ್ಣ ವಾಬನ್ನವರ ಪಾಲ್ಗೊಂಡಿದ್ದರು

Latest News

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:                   ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ: ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ಮುದ್ದೇಬಿಹಾಳ : ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ ಮಾದರಿ ಶಿಕ್ಷಣದಿಂದ ಸಂಸ್ಕಾರ,ಸAಸ್ಕೃತಿಯ ಅರಿವು ದೊರೆಯುತ್ತದೆ ಎಂದು

ಮುದ್ದೇಬಿಹಾಳ : ಸಾವಿತ್ರಿ ವಣಕ್ಯಾಳಗೆ ‘ಸಾಧಕಿ’ ಪ್ರಶಸ್ತಿ ಪ್ರದಾನ

ಮುದ್ದೇಬಿಹಾಳ : ಸಾವಿತ್ರಿ ವಣಕ್ಯಾಳಗೆ ‘ಸಾಧಕಿ’ ಪ್ರಶಸ್ತಿ ಪ್ರದಾನ

ಮುದ್ದೇಬಿಹಾಳ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ

ಮುದ್ದೇಬಿಹಾಳ : ಮಾ.9 ರಂದು ಮುದ್ದೇಬಿಹಾಳ, ನಾಲತವಾಡದಲ್ಲಿ ಸೌಹಾರ್ದಕೂಟ

ಮುದ್ದೇಬಿಹಾಳ : ಮಾ.9 ರಂದು ಮುದ್ದೇಬಿಹಾಳ, ನಾಲತವಾಡದಲ್ಲಿ ಸೌಹಾರ್ದಕೂಟ

ಮುದ್ದೇಬಿಹಾಳ : ಯಾವುದೇ ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ ಅಸ್ಕಿ ಫೌಂಡೇಶನ್ ಕಳೆದ 15 ವರ್ಷಗಳಿಂದ ಜನಸೇವೆಯಲ್ಲಿ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ಮುದ್ದೇಬಿಹಾಳ : ರಂಜಾನ್ ಹಬ್ಬ ಎಲ್ಲ ಹಬ್ಬಗಳ ಜೊತೆಗೆ ಆಚರಣೆಗೆ ಬರುತ್ತದೆ.ನಾವೆಲ್ಲ ಯುದ್ಧವನ್ನು ಖಂಡಿಸಬೇಕು.ವಿಶೇಷವಾಗಿ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ತಾಲ್ಲೂಕು ಯರಗಲ್ ಗ್ರಾಮದಲ್ಲಿ ಸನ್ 2025-26ನೆ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯರಗಲ್ ಗ್ರಾಮದಿಂದ ದೇವೂರ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಿಂದಿನ ಸರ್ಕಾರದವರು ಆರ್ಥಿಕ ಶಿಸ್ತು ಕಾಪಾಡದೇ ಮನಬಂದOತೆ ಬಾಕಿ ಉಳಿಸಿ ಹೋಗಿದ್ದರಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಅದನ್ನು ಪಾವತಿಸುವ ಕೆಲಸ ಆಗಿದೆ.ಶಾಸಕರಿಗೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಯಶಸ್ಸು ಸಾಧ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ಪಟ್ಟಣದ ವಿದ್ಯಾಚೇತನ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆಯನ್ನು ಗುರುತಿಸಿ ಪೂರಕವಾದ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕು. ಶಿಕ್ಷಕರು ಮಗುವಿನ ಮೌಲ್ಯಮಾಪನ ಕಾರ್ಯ ನಿರಂತರ ಮಾಡಬೇಕು ಎಂದರು. ಕುAಟೋಜಿ