Tragedy: A strange incident in Thotaganti village.. A missing woman was found in a well

Tragedy: ತೋಟಗಂಟಿ ಗ್ರಾಮದಲ್ಲೊಂದು ವಿಚಿತ್ರ ಘಟನೆ.. ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ!

Tragedy: ತೋಟಗಂಟಿ ಗ್ರಾಮದಲ್ಲೊಂದು ವಿಚಿತ್ರ ಘಟನೆ.. ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ!

Ad
Ad

ಗದಗ: ಜಿಲ್ಲೆಯ ರೋಣ ತಾಲೂಕಿನ ತೋಟಗಂಟಿ ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆ ಅದೇ ಗ್ರಾಮದ ಹೊಲದಲ್ಲಿನ ನೀರಿಲ್ಲದ ಹಳೆ ಬಾವಿಯಲ್ಲಿ ಮೂರು ದಿನಗಳ ನಂತರ ಪತ್ತೆಯಾಗಿದ್ದಾರೆ. (Tragedy)

Ad
Ad

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ಸದ್ಯ, ಮಹಿಳೆಯನ್ನು ರಕ್ಷಿಸಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತೋಟಗಂಟಿ ಗ್ರಾಮದಿಂದ ಕೋಚಲಾಪುರಕ್ಕೆ ಹೋಗುವ ಮಾರ್ಗದಲ್ಲಿರುವ ಮನೆಯಲ್ಲಿ ವಾಸವಿದ್ದ ಪಾರ್ವತಿ– ವೀರಯ್ಯ ಕಲ್ಮಠ ದಂಪತಿಗೆ ಆರು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆಗಸ್ಟ್‌ 20ರಂದು ಪಾರ್ವತಿ ನಾಪತ್ತೆಯಾಗಿದ್ದರು. ಗಂಡ ಹಾಗೂ ಕುಟುಂಬಸ್ಥರು ಎಲ್ಲೆಡೆ ಹುಡುಕಿ, ಎಲ್ಲಿಯೂ ಸಿಗದೆ ಇದ್ದಾಗ ನರೇಗಲ್‌ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.

ಆಗಸ್ಟ್ 22ರಂದು ಗ್ರಾಮದಿಂದ ಅಂದಾಜು 1 ಕಿ.ಮೀ. ದೂರದ ಬಾವಿಯಲ್ಲಿ ಮಹಿಳೆಯೊಬ್ಬರು ಅರಚುತ್ತಿರುವುದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರಿಗೆ ಕೇಳಿಸಿದೆ. ಆಗ ಅವರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ, ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.

ಆ.20ರಂದು ಬೆಳಿಗ್ಗೆ 5ರ ಸುಮಾರಿಗೆ ಮನೆ ಮುಂದೆ ನಿಂತಿದ್ದಾಗ ವಯಸ್ಕ ಮಹಿಳೆಯೊಬ್ಬರು ನನ್ನ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದಳು. ಕೈಬಳೆ, ಕಾಲುಂಗರ ನೀಡುವಂತೆ ಒತ್ತಾಯಿಸಿದಳು. ಬಳಿಕ ನನ್ನನ್ನು ಎಳೆದುಕೊಂಡು ಬಂದು ಬಾವಿಗೆ ತಳ್ಳಿದಳು. ಬಾವಿಗೆ ಬಿದ್ದ ಮಾರನೇ ದಿನ ನನಗೆ ಪ್ರಜ್ಞೆ ಬಂದಿದೆ. ಆಗ ಕಿರುಚಿದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಆ. 22ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ ಎಂದು ತೊಂದರೆಗೆ ಒಳಗಾದ ಮಹಿಳೆ ಮಾಹಿತಿ ನೀಡಿದ್ದಾರೆ.

ಕಾಣೆಯಾದ ನಂತರ ಹೊಲ, ಮನಿ, ಊರೂರು ಹುಡುಕಿದ್ದೆವು. ಎಲ್ಲಿಯೂ ಸಿಗದ ಕಾರಣ ದೂರು ಕೊಟ್ಟಿದ್ದೆವು. ಬಾವಿಯಲ್ಲಿ ಬಿದ್ದು ರಕ್ಷಣೆಗೆ ಕೂಗುತ್ತಿರುವ ವಿಷಯ ಗೊತ್ತಾದ ನಂತರ ಆಕೆಯನ್ನು ರಕ್ಷಿಸಿ, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದು ಮಹಿಳೆ
ಯ ಪತಿ ವೀರಯ್ಯ ಮಾಹಿತಿ ನೀಡಿದರು.

ಇದನ್ನೂ ಓದಿ: Fighting for curry: ಮಟನ್ ಕರಿಗಾಗಿ ಮಾರಾಮಾರಿ..! 10 ಮಂದಿಗೆ ಗಾಯ..! (ವಿಡಿಯೋ ನೋಡಿ)

ಈ ಕುರಿತು ನಮ್ಮಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಎಂ.ಎಲ್.ಸಿ ಆಗಿದೆ. ಮಹಿಳೆಯನ್ನು ಬಾವಿಯಿಂದ ಹೊರಗೆ ತೆಗೆದಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗದಗಕ್ಕೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ನರೇಗಲ್‌ ಪೊಲೀಸ್‌ ಠಾಣೆ ಎಸ್‌ಐ ಐಶ್ವರ್ಯ ನಾಗರಾಳ ತಿಳಿಸಿದ್ದಾರೆ.

Latest News

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಮುದ್ದೇಬಿಹಾಳ : ಹೋಳಿ ಹಾಗೂ ರಂಜಾನ್ ಹಬ್ಬಗಳು ಶಾಂತಿ,ಸಹೋದರತೆ ಪ್ರೀತಿ ಹಾಗೂ ಸಹೋದರತೆಯ ಸಂಕೇತಗಳಾಗಿದ್ದು

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಿಸಿ ದುರಸ್ತಿ ಕೇಂದ್ರದ ಉದ್ಘಾಟನಾ¸ ಸಮಾರಂಭದಲ್ಲಿ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಮಕಗೊಂಡಿರುವ ಮೂವರು

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಶರಣಮ್ಮ ಬಸನಗೌಡ ಪಾಟೀಲ (72) ಅವರು ಬುಧವಾರ ಫೆ.12ರ ಬೆಳಗಿನ ಜಾವ ಸುಮಾರು 12:30ಕ್ಕೆ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ನಾಲ್ವರು ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಫೆ.12ರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಇಟಗಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಬೀಳಗಿ: ನಮ್ಮೆಲ್ಲರ ಸಂಘಟಿತ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಯಥಾವತ್ತಾಗಿ ಜಾರಿಗೆ ಬಂದಿದಲ್ಲದೆ, ನಮ್ಮ ಕುಟುಂಬ ವರ್ಗದಲ್ಲಿ ಅನಾರೋಗ್ಯಕೀಡಾದ ಸಂದರ್ಭದಲ್ಲಿ ಉಚಿತ ಚಿಕಿತ್ದೆಗಾಗಿ ಆರೋಗ್ಯ ಸಂಜವೀನಿ ಅನುಷ್ಟಾನಗೊಳಿಸಲು ಯಶಸ್ಬಿಯಾಗಿದ್ದು, 2006 ರಿಂದ ನೇಮಕಗೊಂಡ ಸರಕಾರಿ ನೌಕರರ ಹಿತ ದೃಷ್ಡಿಯಿಂದ ಸರಕಾರ ಜಾರಿಗೊಳಿಸಿದ ಎನ್ ಪಿ ಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಯಾಗಲು ಹೋರಾಟ ಮಾಡಿ ಯಶಸ್ವಿಯಾಗಲು ಪ್ರತಿಯೊಬ್ಬರು ಸಂಘಟೀತರಾಗೋಣ ಎಂದು ಕ.ರಾ.ಸ. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಮ್.