ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೂರನೇ ದಿನದ ಪ್ರಾರಂಭ. ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಘಟಕದಿಂದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕರ ಭವನದ ಎದುರು ಸೋಮವಾರ ದಿಂದ ಪ್ರಾರಂಭವಾಗಿ ಇಂದಿಗೆ ಮೂರನೇ ದಿನ ಪ್ರತಿಭಟನೆ ಮುಂದುವರೆದಿದೆ.
ಮಂಗಳವಾರದಂದು ರಾತ್ರಿ ಸರಿ-ಸುಮಾರು ಎಂಟು ಗಂಟೆಗೆ ಏಕಾಏಕಿ ಧಾರಾಕಾರ ಮಳೆಯಲ್ಲಿ ಪ್ರತಿಭಟನೆ ಮುಂದುವರಿಯುತ್ತಿತ್ತು ಈ ಪ್ರತಿಭಟನೆಯು ಅನಿರ್ದಿಷ್ಟಾವಧಿ ಧರಣಿ ಆಗಿರುವುದರಿಂದ ಹುಬ್ಬಳ್ಳಿ-ಧಾರವಾಡ ಕಮಿಷನರಾದ ಎನ್ ಶಶಿಕುಮಾರ್ ಅವರು ಪ್ರತಿಭಟನಾಕಾರರೊಂದಿಗೆ ಮನವಲಿಸುವ ಪ್ರಯತ್ನ ಮಾಡಿದರು ಆದರೂ ಪ್ರತಿಭಟನಾಕಾರರು ಕಾರ್ಮಿಕರ ಇಲಾಖೆಯ ಸಚಿವರು ಬರೋವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂದು ತಿಳಿಸಿದರು.
ಹಾಗೆ ನಮ್ಮ ಮನವಿಯನ್ನು ಸ್ವೀಕರಿಸಬೇಕು ತದನಂತರ ನಾವು ಪ್ರತಿಭಟನೆಯನ್ನು ಹಿಂಬಡಿಯುತ್ತೇವೆ ಎಂಬವ ಮಾತನ್ನು ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿಭಟನಾಕಾರರ ಬೇಡಿಕೆ ಕಾಳಜಿ ಇಲ್ಲಾ ಪ್ರತಿಭಟನೆ ನಿಲ್ಲಿಸುವದರ ಬಗ್ಗೆ ಕುತಂತ್ರಿ ಯೋಚನೆಗಳು ಹಾಗೂ ಬೇರೆಯವರಿಗೆ ಕರೆ ಮಾಡಿ ಸಂದೇಶಗಳು ತಿಳಿಸುವುದಕ್ಕಿಂತ ಮೊದಲು ಪ್ರತಿಭಟನಾಕಾರರಿಗೆ ಕರೆ ಮಾಡಿ ಅವರ ಬಗ್ಗೆ – ಅವರ ಬೇಡಿಕೆಗಳ ಬಗ್ಗೆ ಯಾರ ಜೊತೆಯೂ ಮಾತುಕತೆ ಆಡದೆ ಇರೋದು ವಿಪರ್ಯಾಸ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರ ಮಾತನಾಡಿ, ಮಕ್ಕಳಿಗೆ ಕೂಡಲೇ ಶೈಕ್ಷಣಿಕ, ಇತರೆ ಧನಸಹಾಯ ಮಂಜೂರು ಮಾಡಬೇಕು. ಅನಾವಶ್ಯಕ ಟೆಂಡರ್ ಕರೆಯುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. 15-20 ವರ್ಷಗಳ ಹಿಂದೆ ಆಗಿರುವ ನೋಂದಣಿ ಆಧರಿಸಿ ಈಗ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಹೆರಿಗೆ ಭತ್ಯೆ, ಹಿರಿಯ ಕಾರ್ಮಿಕರ ಪಿಂಚಣಿ, ಅಂತ್ಯಕ್ರಿಯೆ, ಅಪಘಾತ ಪರಿಹಾರವನ್ನು ಈವರೆಗೂ ಮಂಜೂರು ಮಾಡಿಲ್ಲ ಕೂಡಲೇ ಅದನ್ನು ಬಿಡುಗಡೆ ಮಾಡಬೇಕು. ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯಾದಗಿರಿ , ಗುಲ್ಬರ್ಗ, ರಾಯಚೂರು, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ವಿವಿಧ ಜಿಲ್ಲೆಗಳ ಕಾರ್ಮಿಕರ ಸಂಘಗಳು ಭಾಗವಹಿಸಿದ್ದರು. ಅಶ್ವಥ್ ಮರಿಗೌಡ್ರ, ಶಿವು ರಾಠೋಡ, ಶಿವಕುಮಾರ ಬಂಡಿವಡ್ಡರ, ವಾಸು ಲಮಾಣಿ, ಮುಸ್ತಾಕ್ ನದಾಫ್, ಎಸ್.ಪಿ. ಕರಿಸೋಮನಗೌಡ್ರ, ಶರಣಪ್ಪ ರೊಟ್ಟಿ , ಶಿವಕುಮಾರ ಗೌಡ್ರ, ಬೀರಪ್ಪ ಡೊಳ್ಳ, ರಾಜು ದೊರೆ, ಈರಪ್ಪ ವಲ್ಕಂದಿನ್ನಿ , ವೆಂಕಟೇಶ್, ತಿಮ್ಮಪ್ಪ, ತಾಯಪ್ಪ , ರವಿರಾಜ್, ದೇವಿಂದ್ರ ಕಾಲವಾ, ಶಿವಾನಂದ ಅಸೊಟ್ಟಿ, ಲಕ್ಷ್ಮಣ್, ಶಂಕರ್ ಲಂಬಾಣಿ , ಜೋತಿ ಪತ್ತಾರ, ಶಭಿನಾ ಮೇಲಿನಮನಿ, ಇನ್ನಿತರರಿದ್ದರು.
ವರದಿಗಾರ : ಶಿವು ರಾಠೋಡ