ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂ.ಎಸ್.ಕೊಪ್ಪ ಅವರು ಆರಂಭಿಸಿರುವ ಶಾಲೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಮುದ್ದೇಬಿಹಾಳ ತಾಲ್ಲೂಕು ಇಂದು ಶಿಕ್ಷಣಕ್ಕೆ ಒಳ್ಳೆಯ ಹೆಸರು ಮಾಡಿದೆ.ಬಿಎಎಸ್ ಶಾಲೆ, ಅಂಜುಮನ್ ಸಂಸ್ಥೆ,ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ,ನಾಗರಬೆಟ್ಟ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿವೆ. ಗ್ರಾಮೀಣ ಭಾಗದಲ್ಲಿ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಈ ವರ್ಷದ ಪ್ರಥಮ ಬ್ಯಾಚ್ನಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ವಿದ್ಯಾರ್ಥಿಗೆ ಅಸ್ಕಿ ಫೌಂಡೇಶನ್ದಿoದ 25 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.
ಮುದ್ದೇಬಿಹಾಳ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ ಮಾತನಾಡಿ, ಕಷ್ಟದ ಜೀವನ ಸವೆಸಿ ಧೈರ್ಯದಿಂದ ಮುಂದಡಿಯಿಟ್ಟಿದ್ದಕ್ಕೆ ಪ್ರತಿಭಾವಂತ ಮಕ್ಕಳನ್ನು ಗುರುತಿಸುವಂತಹ ಶಿಕ್ಷಣ ಸಂಸ್ಥೆ ರೂಪಿಸಲು ಸಾಧ್ಯವಾಗಲಿದೆ.ಒಳ್ಳೆಯ ಪ್ರಜೆಯಾಗಿ ಒಳ್ಳೆಯ ಸಂದೇಶವನ್ನು ನೀಡುವ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನಲ್ಲಿ ಅತೀ ಹೆಚ್ಚು ಅಂಕ ಪಡೆದು ಎರಡನೇ ಸ್ಥಾನ ಗಳಿಸಿದವರಿಗೆ 11 ಸಾವಿರ ರೂ.ನೀಡುವುದಾಗಿ ಘೋಷಣೆ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಹಳ್ಳಿಯ ಮಕ್ಕಳ ಶಿಕ್ಷಣದ ಕನಸನ್ನು ನನಸು ಮಾಡುತ್ತಿರುವ ಎಂ.ಎಸ್.ಕೊಪ್ಪ ಅವರ ಕಾರ್ಯದ ಹಿಂದೆ ಅಪಾರ ಪರಿಶ್ರಮವಿದೆ.ಸಂಸ್ಥೆಗೆ ಸದಾ ನಾವು ಬೆನ್ನೆಲುಬಾಗಿ ಇರುತ್ತೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ, ನಾನು ಗೌಂಡಿ ಕೈಯ್ಯಲ್ಲಿ ಗಾರೆ ಕೆಲಸವನ್ನು ಮಾಡಿದ್ದೇನೆ.ಹೊಲದಲ್ಲಿ ಕೃಷಿ ಕೆಲಸವನ್ನು ಮಾಡಿದ್ದೇನೆ.ಮತ್ತೊಬ್ಬರ ಬಳಿ ಆಳಾಗಿಯೂ ಕೆಲಸ ಮಾಡಿದ್ದೇನೆ.ಆದರೆ ನನ್ನ ಕನಸು ಬಡವರ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕಾದರೆ ಕಷ್ಟಪಡಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇನೆ.ಜಮಖಂಡಿ ಓಲೇಮಠದ ದಿ.ಚನ್ನಬಸವ ಸ್ವಾಮೀಜಿಯವರ ಆಶೀರ್ವಾದ ಸಂಸ್ಥೆಯ ಮೇಲಿದೆ ಎಂದರು.
ಕಾಳಗಿಯ ದೇವಿ ಆರಾಧಕ ಮಹಾದೇವಪ್ಪ ವಿಶ್ವಕರ್ಮ, ವಿಶ್ವಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರೇಶ ಗುರುಮಠ, ಶಾಲೆಯ ಮುಖ್ಯಗುರುಮಾತೆ ರೇಖಾ ಎಂ.ಎಸ್,ಈರಣ್ಣ ಬಡಿಗೇರ ಸಾನಿಧ್ಯ ವಹಿಸುವರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎ.ಲೋನಾರಮಠ,ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ,ಪ್ರಮುಖರಾದ ಯಮನಪ್ಪ ಪೂಜಾರಿ,ಮಹದೇವಪ್ಪ ಹಳ್ಳದ,ರಾಮನಗೌಡ ಬಿರಾದಾರ,ಚಂದ್ರಶೇಖರ ಕುಂಬಾರ,ನಿoಗಪ್ಪ ಓಲೇಕಾರ,ಸುಭಾಷ ಕಟ್ಟೀಮನಿ,ಹಣಮಂತ್ರಾಯ ಮಾದಿನಾಳ,ಮಲ್ಲಯ್ಯ ಹಿರೇಮಠ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಅತೀ ಹೆಚ್ಚಿನ ಅಂಕ ಪಡೆದುಕೊಳ್ಳುವ ತೃತೀಯ,ನಾಲ್ಕನೇ,ಐದನೇ ಬಹುಮಾನಗಳನ್ನು ವೇದಿಕೆಯಲ್ಲಿದ್ದ ಕರಿಯಪ್ಪ ಆಸಂಗಿ, ನಾನಪ್ಪ ಲಮಾಣಿ, ಬಸವರಾಜ ಸಂಕನಾಳ ನೀಡುವುದಾಗಿ ವಾಗ್ದಾನ ಮಾಡಿದರು. ಎಚ್.ಆರ್.ಬಾಗಲಕೋಟ ಸ್ವಾಗತಿಸಿದರು.ನಂದಿನಿ ಪವಾರ ವರದಿ ವಾಚಿಸಿದರು. ಅಶೋಕ ಗುಂಡಿನಮನಿ ನಿರೂಪಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
Latest News
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ
ಮುದ್ದೇಬಿಹಾಳ : ನೀರಿನ ಹೊಂಡದಲ್ಲಿ ಜಾರಿ ಬಿದ್ದು ಬಾಲಕ ಸಾವು
ಮುದ್ದೇಬಿಹಾಳ : ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕನೊಬ್ಬ ಕಾಲು ಜಾರಿ ಹೊಂಡದಲ್ಲಿ ಬಿದ್ದು
ಶಿವಯೋಗಿಮಠ ಕುಟುಂಬದಿoದ ಆಯೋಜನೆ: ಮಾ.2 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ
ಮುದ್ದೇಬಿಹಾಳ : ಶ್ರೀ ಫಕಿರೇಶ್ವರ ವಿವಿದೋದ್ಧೇಶ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಮತ್ತು ಸೇಂಟ್
ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ
ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರಿನಲ್ಲಿ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾ.1 ರಂದು
ಸಿಂಚನಾ ಸಜ್ಜನ ಸೈನಿಕ ಶಾಲೆಗೆ ಆಯ್ಕೆ
ಮುದ್ದೇಬಿಹಾಳ : ತಾಲ್ಲೂಕಿನ ಹಳ್ಳೂರ ಕ್ರಾಸ್ ನಲ್ಲಿರುವ ಹೊಸನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಂಚನಾ ಶಿವಪುತ್ರಪ್ಪ ಸಜ್ಜನ ಸನ್ 2026-27ನೇ ಸಾಲಿನ ಬೆಳಗಾವಿ ಜಿಲ್ಲೆ ಕಿತ್ತೂರ ರಾಣಿ ಚೆನ್ನಮ್ಮ ಸೈನಿಕ ವಸತಿ ಶಾಲೆಗೆ ಆಯ್ಕೆಯಾಗಿದ್ದಾಳೆ. ಸಿಂಚನಾ , ಬಿದರಕುಂದಿ ಗ್ರಾಮದ ಶಿಕ್ಷಕ ದಂಪತಿಯಾದ ಶಿವಪುತ್ರಪ್ಪ ಸಜ್ಜನ ಹಾಗೂ ಸುಮಲತಾ ಗಡಿಯಪ್ಪನವರ ಅವರ ಪುತ್ರಿ.ವಿದ್ಯಾರ್ಥಿನಿ ಸಿಂಚನಾ ಸಾಧನೆಗೆ ಬಿದರಕುಂದಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಫಾಸ್ಟ್ ,ಜಂಕ್ ಫುಡ್ ಆರೋಗ್ಯಕ್ಕೆ ಮಾರಕ-ವಿ.ಜಿ.ರಾಮಚಂದ್ರಯ್ಯ
ಮುದ್ದೇಬಿಹಾಳ : ಫಾಸ್ಟ್ ಫುಡ್,ಜಂಕ್ ಫುಡ್ನಿಂದ ದೇಹದ ಮೇಲಿನ ದುಷ್ಪರಿಣಾಮ ಬೀರುತ್ತದೆ.ಅಂತಹ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು ಎಂದು ವಿಬಿಸಿ ಹೈಸ್ಕೂಲ್ನ ಮುಖ್ಯಗುರು ವಿ.ಜಿ.ರಾಮಚಂದ್ರಯ್ಯ ಹೇಳಿದರು. ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ದೈನಂದಿನ ಬದುಕಿನಲ್ಲಿ ಸೇವಿಸುವ ಆಹಾರದಲ್ಲೂ ವಿಜ್ಞಾನ ಅಡಗಿದೆ.ಪ್ರತಿ ವಸ್ತುಗಳಲ್ಲೂ ವೈಜ್ಞಾನಿಕ ಅಂಶಗಳನ್ನು ಒಳಗೊಂಡಿದ್ದು ಯಾವ ಪದಾರ್ಥ ನಮ್ಮ ದೇಹಕ್ಕೆ ಅತ್ಯಂತ ಸೂಕ್ತ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.







