ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು ಜನಿಸಿದ ಗ್ರಾಮ ಅಭಿವೃದ್ಧಿಯಾಗಬೇಕು ಎಂಬ ಕಳಕಳಿಯಿಂದ ರೂ.25 ಲಕ್ಷ ಸ್ವಂತ ಹಣದಲ್ಲಿ ಸಿಸಿ ರಸ್ತೆ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಪ್ರಭು ಭೈರಿಯವರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮುಖಂಡ ಅಶೋಕ ಭೋವಿ ಹೇಳಿದರು. ತಾಲೂಕಿನ ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತೆ ಮಾರಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಆವರಣದಲ್ಲಿ ವಿಶ್ವನಾಥ್ ಭೈರಿ ಮತ್ತು ಜಗನ್ನಾಥ ಭೈರಿ ಅವರ ಸ್ವರರ್ಣಾರ್ಥವಾಗಿ ಪ್ರಭು ಜಯಪ್ಪ ಭೈರಿ ಅವರು ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಮತ್ತು ಸಿಸಿ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ರವಿವಾರ ಮಾತನಾಡಿದರು. ಮುಖಂಡ ಹಣಮಂತ ವಡ್ಡರ ಮಾತನಾಡಿ ಪ್ರಭು ಭೈರಿಯವರು ಈಗಾಗಲೇ ಗ್ರಾಮದ ಕೆಲವು ಕಡೆ ಸಿಸಿ ರಸ್ತೆಗಳನ್ನು ಹಾಗೂ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಅವರಿಗೆ ನಾವೆಲ್ಲರೂ ಸಹಕರಿಸುವ ಅಗತ್ಯ ಇದೆ ಎಂದರು. ಗಣ್ಯರಾದ ರಾಘು ದೇಸಾಯಿ ಹಾಗೂ ಶಾಂತು ಹೊಸಗೌಡರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜ ಅಹ್ಮದ್ ಸಿರಸಗಿ, ಗಣ್ಯರಾದ ಕೆ.ಡಿ.ದೇಸಾಯಿ, ರಾಮರಾವ್ ದೇಶಮುಖ, ರಾಜು ಜಂಬಗಿ, ವಿನೋದ್ ವಡಗೇರಿ, ಮುತ್ತು ಬೆಂಡೆಗೊಂಬಳ, ಸುನಿಲ್ ಜಂಗಣಿ, ದೇವೇಂದ್ರ ಬಡಿಗೇರ, ವಿಶ್ವ ಮೋಪಗಾರ, ಉಮೇಶ ಹೆಗ್ಗಣದೊಡ್ಡಿ ಫಾರೂಕ್ ವಲ್ಲಿಬಾಯಿ, ಸಂಗಪ್ಪ ಗೌಂಡಿ, ಭೀಮಣ್ಣ ವಡ್ಡರ, ಮಹೆಬೂಬ ಬಾಶಾ ಮನಗೂಳಿ, ಪರುಶರಾಮ ವಡ್ಡರ,ಗ್ರಾಮ ಪಂಚಾಯತ್ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Latest News

ಅಣ್ಣ-ತಂಗಿ ಲವ್ವಿಡವ್ವಿ.. ಸಾ*ವಿನಲ್ಲಿ ಅಂತ್ಯ

ಕಾಮದ ಮುಂದೆ ಈ ಕಾಲದಲ್ಲಿ ಸಂಬಂಧಕ್ಕೆ ಬೆಲೆನೆ ಇಲ್ಲವಾಗಿದೆ.. ಇಲ್ಲೊಂದು ಪ್ರೇಮದ ಕತೆಯೂ ಇದೆ

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ:                                                                               ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ: ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ತಾಳಿಕೋಟಿ : ಮಾಧ್ಯಮಗಳು ಸಮಾಜದಲ್ಲಿ ನಡೆದಿರುವ ಸತ್ಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಇಲ್ಲಿನ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ದೇವರು ನುಡಿದರು. ಪಟ್ಟಣದ ತಾಳಿಕೋಟೆ ಖಾಸ್ಗತೇಶ್ವರ ಮಠದಲ್ಲಿ ಭಾನುವಾರ ಸಂಜೆ ಹೆಬ್ಬಾಳ ಪಬ್ಲಿಸಿಟಿ ಹಾಗೂ ಜನರಕೂಗು ಸುದ್ದಿ ವಾಹಿನಿ ಬಳಗದ 2026 ನೇ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ಮಠಗಳು ನಡೆಸುವ ಶೈಕ್ಷಣಿಕ,ಧಾರ್ಮಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಧ್ಯಮ ಮಾಡಬೇಕಿದೆ.ಮಾಧ್ಯಮ ಕ್ಷೇತ್ರದಲ್ಲಿರುವವರಲ್ಲಿ ಅಸೂಯೆ

ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟಸಭೆ : ಅಶ್ವತ ಟಿ ಮರೀಗೌಡ್ರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಈ ಸಭೆಯನ್ನು ಹರಿಹರ ತಾಲ್ಲೂಕಿನ ಹೊಸಪೇಟೆ ಬೀದಿ ಶ್ರೀ ಮುರುಘಾರಾಜೇಂದ್ರ ಕಲ್ಯಾಣ ಮಂಟಪ ಎದುರು ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘ ಕಛೇರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಅಶ್ವತ ಟಿ ಮರೀಗೌಡ್ರು, ಶಿವಕುಮಾರ್ ಗೌಡ, ರಮೇಶ್, ಲೋಕೇಶ್ ನಾಯಕ, ಹಾಲೇಶ್, ಭೀಮಣ್ಣ, ಶಶಿನಾಯ್ಕ್ , ಶಿವಣ್ಣ, ಪರಶುರಾಮ, ನಾಗರಾಜು,