ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂ.ಎಸ್.ಕೊಪ್ಪ ಅವರು ಆರಂಭಿಸಿರುವ ಶಾಲೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಮುದ್ದೇಬಿಹಾಳ ತಾಲ್ಲೂಕು ಇಂದು ಶಿಕ್ಷಣಕ್ಕೆ ಒಳ್ಳೆಯ ಹೆಸರು ಮಾಡಿದೆ.ಬಿಎಎಸ್ ಶಾಲೆ, ಅಂಜುಮನ್ ಸಂಸ್ಥೆ,ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ,ನಾಗರಬೆಟ್ಟ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿವೆ. ಗ್ರಾಮೀಣ ಭಾಗದಲ್ಲಿ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಈ ವರ್ಷದ ಪ್ರಥಮ ಬ್ಯಾಚ್‌ನಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ವಿದ್ಯಾರ್ಥಿಗೆ ಅಸ್ಕಿ ಫೌಂಡೇಶನ್‌ದಿoದ 25 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.
ಮುದ್ದೇಬಿಹಾಳ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ ಮಾತನಾಡಿ, ಕಷ್ಟದ ಜೀವನ ಸವೆಸಿ ಧೈರ್ಯದಿಂದ ಮುಂದಡಿಯಿಟ್ಟಿದ್ದಕ್ಕೆ ಪ್ರತಿಭಾವಂತ ಮಕ್ಕಳನ್ನು ಗುರುತಿಸುವಂತಹ ಶಿಕ್ಷಣ ಸಂಸ್ಥೆ ರೂಪಿಸಲು ಸಾಧ್ಯವಾಗಲಿದೆ.ಒಳ್ಳೆಯ ಪ್ರಜೆಯಾಗಿ ಒಳ್ಳೆಯ ಸಂದೇಶವನ್ನು ನೀಡುವ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನಲ್ಲಿ ಅತೀ ಹೆಚ್ಚು ಅಂಕ ಪಡೆದು ಎರಡನೇ ಸ್ಥಾನ ಗಳಿಸಿದವರಿಗೆ 11 ಸಾವಿರ ರೂ.ನೀಡುವುದಾಗಿ ಘೋಷಣೆ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಹಳ್ಳಿಯ ಮಕ್ಕಳ ಶಿಕ್ಷಣದ ಕನಸನ್ನು ನನಸು ಮಾಡುತ್ತಿರುವ ಎಂ.ಎಸ್.ಕೊಪ್ಪ ಅವರ ಕಾರ್ಯದ ಹಿಂದೆ ಅಪಾರ ಪರಿಶ್ರಮವಿದೆ.ಸಂಸ್ಥೆಗೆ ಸದಾ ನಾವು ಬೆನ್ನೆಲುಬಾಗಿ ಇರುತ್ತೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ, ನಾನು ಗೌಂಡಿ ಕೈಯ್ಯಲ್ಲಿ ಗಾರೆ ಕೆಲಸವನ್ನು ಮಾಡಿದ್ದೇನೆ.ಹೊಲದಲ್ಲಿ ಕೃಷಿ ಕೆಲಸವನ್ನು ಮಾಡಿದ್ದೇನೆ.ಮತ್ತೊಬ್ಬರ ಬಳಿ ಆಳಾಗಿಯೂ ಕೆಲಸ ಮಾಡಿದ್ದೇನೆ.ಆದರೆ ನನ್ನ ಕನಸು ಬಡವರ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕಾದರೆ ಕಷ್ಟಪಡಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇನೆ.ಜಮಖಂಡಿ ಓಲೇಮಠದ ದಿ.ಚನ್ನಬಸವ ಸ್ವಾಮೀಜಿಯವರ ಆಶೀರ್ವಾದ ಸಂಸ್ಥೆಯ ಮೇಲಿದೆ ಎಂದರು.
ಕಾಳಗಿಯ ದೇವಿ ಆರಾಧಕ ಮಹಾದೇವಪ್ಪ ವಿಶ್ವಕರ್ಮ, ವಿಶ್ವಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರೇಶ ಗುರುಮಠ, ಶಾಲೆಯ ಮುಖ್ಯಗುರುಮಾತೆ ರೇಖಾ ಎಂ.ಎಸ್,ಈರಣ್ಣ ಬಡಿಗೇರ ಸಾನಿಧ್ಯ ವಹಿಸುವರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎ.ಲೋನಾರಮಠ,ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ,ಪ್ರಮುಖರಾದ ಯಮನಪ್ಪ ಪೂಜಾರಿ,ಮಹದೇವಪ್ಪ ಹಳ್ಳದ,ರಾಮನಗೌಡ ಬಿರಾದಾರ,ಚಂದ್ರಶೇಖರ ಕುಂಬಾರ,ನಿoಗಪ್ಪ ಓಲೇಕಾರ,ಸುಭಾಷ ಕಟ್ಟೀಮನಿ,ಹಣಮಂತ್ರಾಯ ಮಾದಿನಾಳ,ಮಲ್ಲಯ್ಯ ಹಿರೇಮಠ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಅತೀ ಹೆಚ್ಚಿನ ಅಂಕ ಪಡೆದುಕೊಳ್ಳುವ ತೃತೀಯ,ನಾಲ್ಕನೇ,ಐದನೇ ಬಹುಮಾನಗಳನ್ನು ವೇದಿಕೆಯಲ್ಲಿದ್ದ ಕರಿಯಪ್ಪ ಆಸಂಗಿ, ನಾನಪ್ಪ ಲಮಾಣಿ, ಬಸವರಾಜ ಸಂಕನಾಳ ನೀಡುವುದಾಗಿ ವಾಗ್ದಾನ ಮಾಡಿದರು. ಎಚ್.ಆರ್.ಬಾಗಲಕೋಟ ಸ್ವಾಗತಿಸಿದರು.ನಂದಿನಿ ಪವಾರ ವರದಿ ವಾಚಿಸಿದರು. ಅಶೋಕ ಗುಂಡಿನಮನಿ ನಿರೂಪಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
Latest News
ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೇ.100ರಷ್ಟು ಹಾಜರಾತಿ
ಮುದ್ದೇಬಿಹಾಳ : ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಶನಿವಾರದಿಂದ ಆರಂಭಗೊAಡಿದ್ದು ತಾಲ್ಲೂಕಿನ ಏಳು ಪರೀಕ್ಷಾ
ಮುದ್ದೇಬಿಹಾಳ : ಮಾ.1 ರಂದು ಗುತ್ತಿಗೆದಾರರ ಪೂರ್ವಭಾವಿ ಸಭೆ
ಮುದ್ದೇಬಿಹಾಳ : ಬೆಂಗಳೂರಿನಲ್ಲಿ ಮಾ.6 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಗುತ್ತಿಗೆದಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾ.1
ಗೂಡ್ಸ್ ವಾಹನ-ಬೈಕ್ ಮುಖಾಮುಖಿ ಡಿಕ್ಕಿ; ಪರೀಕ್ಷೆ ಬರೆದು ಮರಳುತ್ತಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಬೈಕ್ ಮೇಲೆ
ಕೂಲಿ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮುದ್ದೇಬಿಹಾಳ : ಕೂಲಿಕಾರ್ಮಿಕನೊಬ್ಬ ಸಾಲದ ಬಾಧೆ ತಾಳದೇ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ
‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’
ಮುದ್ದೇಬಿಹಾಳ : ಸೈನ್ಯಕ್ಕೆ ಸೇರುವವರು ಬಡವರ ಮಕ್ಕಳು ಎಂದು ಕೆಲವು ರಾಜಕಾರಣಿಗಳು ಕೆಲವೆಡೆ ಹೇಳಿಕೆ ಕೊಟ್ಟಿದ್ದರು.ಆದರೆ ನಿಜವಾಗಿಯೂ ಈ ದೇಶವನ್ನು ಕಾಯುವವರು ರೈತರ ಮಕ್ಕಳೇ ಹೊರತು ಸಿರಿವಂತರ ಮಕ್ಕಳಲ್ಲ.ದೇಶದಲ್ಲಿ ಬದಲಾವಣೆ ಆಗಿರುವುದು ಬಡವರ ಮಕ್ಕಳಿಂದ ಆಗಿದೆಯೇ ಹೊರತು ಸಿರಿವಂತರು,ದೊಡ್ಡವರ ಮಕ್ಕಳಿಂದಲ್ಲ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಸೈನಿಕ ಮೈದಾನದಲ್ಲಿ ಗುರುವಾರ ಸಂಜೆ ನೌಕಾಸೇನೆಯ ನಿವೃತ್ತ ಯೋಧ ಸತೀಶ ನಾಯಕ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ
ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ
ಮುದ್ದೇಬಿಹಾಳ : ಪ್ರಜೆಗಳ ಹಿತರಕ್ಷಣೆಗಾಗಿ ಪ್ರಾಣ ಕೊಡಲು ಲೆಕ್ಕಿಸದ ಧೀರ ಹೋರಾಟಗಾರ ಛತ್ರಪತಿ ಶಿವಾಜಿ ಅವರಾಗಿದ್ದು ಅವರ ಶೌರ್ಯ,ಸಾಹಸದ ಕಥೆಗಳನ್ನು ಮಕ್ಕಳಿಗೆ ತಾಯಂದಿರು ಹೇಳಬೇಕು ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು. ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ತಾಲೂಕಾಡಳಿತದಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯಿಯ ಭಕ್ತಿಯ ಮಾತನ್ನು ಪಾಲಿಸುತ್ತಿದ್ದ ಶಿವಾಜಿ ಅವರಿಗೂ ಶ್ರೀದೇವಿಯ ಒಲುಮೆಯಾಗಿತ್ತು. ದೇಶದ ಇತಿಹಾಸ ಕಾಪಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದ







