ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಮುದ್ದೇಬಿಹಾಳ : ಪ್ರಜೆಗಳ ಹಿತರಕ್ಷಣೆಗಾಗಿ ಪ್ರಾಣ ಕೊಡಲು ಲೆಕ್ಕಿಸದ ಧೀರ ಹೋರಾಟಗಾರ ಛತ್ರಪತಿ ಶಿವಾಜಿ ಅವರಾಗಿದ್ದು ಅವರ ಶೌರ್ಯ,ಸಾಹಸದ ಕಥೆಗಳನ್ನು ಮಕ್ಕಳಿಗೆ ತಾಯಂದಿರು ಹೇಳಬೇಕು ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ತಾಲೂಕಾಡಳಿತದಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಯ ಭಕ್ತಿಯ ಮಾತನ್ನು ಪಾಲಿಸುತ್ತಿದ್ದ ಶಿವಾಜಿ ಅವರಿಗೂ ಶ್ರೀದೇವಿಯ ಒಲುಮೆಯಾಗಿತ್ತು. ದೇಶದ ಇತಿಹಾಸ ಕಾಪಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದ ಅವರ ಇತಿಹಾಸವನ್ನು ಓದಿದರೆ ಅವರ ವ್ಯಕ್ತಿತ್ವ ಸಾಹಸಗಳ ಕುರಿತು ಓದಿದರೆ ಮೈ ರೋಮಾಂಚನಗೊಳ್ಳುತ್ತದೆ.ತಾಯOದಿರು ಇಂತಹ ದಾರ್ಶನಿಕರ ಇತಿಹಾಸವನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಧೈರ್ಯಶಾಲಿಗಳನ್ನಾಗಿ ರೂಪಿಸಬೇಕು ಎಂದರು.

ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್ಲ ಮಾತನಾಡಿ, ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಣಾಪ್ರತಾಪಸಿಂಹರOತಹ ಶೂರ ಧೀರರು ತಮ್ಮ ತಮ್ಮ ವೈಯಕ್ತಿಕ ಆದಾಯಕ್ಕಾಗಿ ಹೋರಾಟ ಮಾಡಿಲ್ಲ.ದೇಶದ ಹಿತರಕ್ಷಣೆಗಾಗಿ ಹೋರಾಡಿದರು ಎಂದರು.

ಉಪನ್ಯಾಸಕರಾಗಿ ಆಗಮಿಸಿದ ರಾಜನಾರಾಯಣ ನಲವಡೆ, ಸಮಾಜ ಸೇವಕ ಉದಯ ರಾಯಚೂರ ಮಾತನಾಡಿ, ಕೆಲವು ಅಂಕಣಕಾರರು ತಮ್ಮ ಹೆಸರನ್ನು ಬಹಿರಂಗಪಡಿಸಿಕೊಳ್ಳಲು ಶಿವಾಜಿ ಮಹಾರಾಜರ ಇತಿಹಾಸ ತಿರುಚಿಬರೆಯುವ ಕೆಟ್ಟ ಚಾಳಿ ರೂಢಿಸಿಕೊಂಡಿದ್ದಾರೆ.ಸತ್ಯಾಸತ್ಯತೆಯ ಇತಿಹಾಸ ಹೊರ ಹಾಕಿದರೆ ಎಲ್ಲ ಸಮುದಾಯಕ್ಕೆ ಒಳಿತಾಗುತ್ತದೆ.ಶಿವಾಜಿಯವರಲ್ಲಿದ್ದ ದೇಶ ಪ್ರೇಮ, ಮಾತೃಪ್ರೇಮ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಕಂಡು ಬಂದರೆ ಅಂದಿನ ಕಾಲದಲ್ಲಿ ತಕ್ಕ ಶಿಕ್ಷೆ ನೀಡುವ ಪದ್ಧತಿಗಳು ಆದರ್ಶವಾಗಿದ್ದವು ಎಂದರು.

ಮೆರಣಿಗೆಯು ಶಿವಾಜಿ ಮಹಾರಾಜರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಮರಾಠಾ ಸಮಾಜ ಬಾಂಧವರ ನೇತೃತ್ವದಲ್ಲಿ ಆಯೋಜಿಸಲಾದ ದ್ವಜಾರೋಹಣ ಕಾರ್ಯಕ್ರಮವನ್ನು ತಹಶೀಲ್ದಾರ ಕೀರ್ತಿ ಚಾಲಕ ನೇರವೇರಿಸಿದರು.

ಜಯಂತಿ ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಗೌರವಾಧ್ಯಕ್ಷ ರಾಜೇಂದ್ರ ಭೋಸಲೆ, ಉಪಾಧ್ಯಕ್ಷ ಅಣ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ಖಜಾಂಚಿ ರಮೇಶ ಥೋರಾತ, ರವಿ ಭೋಸಲೆ, ಪ್ರ.ಕಾರ್ಯದರ್ಶಿ ಕೃಷ್ಣಾಜಿ ಪವಾರ. ಹಣಮಂತ ನಲವಡೆ, ಭರತ ಭೋಸಲೆ, ಮಾರುತಿ ನಲವಡೆ, ರಾಘವೇಂದ್ರ ನಲವಡೆ, ಸಚೀನ ಸಾಳುಂಕೆ, ಕಿರಣ ಪವಾರ, ಅನೀಲ ಜಾಧವ, ಅನೀಲ ಪವಾರ, ಸಂತೋಷ ಚವ್ಹಾಣ, ವಿನಾಯಕ ಘಾಟಗೆ, ವಿನೋದ ಜಾಧವ, ಲೋಹಿತ್ ಘಾಟಗೆ, ಗಣೇಶ ಘಾಟಗೆ, ಕೃಷ್ಣಾ ಭೋಸಲೆ, ಗಜಾನನ ನಲವಡೆ, ಬಸವರಾಜ ಸೂರ್ಯವಂಶಿ, ಸಂತೋಷ ಸಾಳುಂಕೆ, ಈಶ್ವರಪ್ಪ ಪವಾರ, ವಿರೇಶ ಹಾದಿಮನಿ,ಶಿವಾಜಿ ಬಿಜಾಪುರ, ಬಿಜೆಪಿ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ, ಪ್ರಭು ಕಡಿ, ಭೀಮಾಜಿ ಘಾಟಗೆ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮಾಣಿಕಚಂದ ದಂಡಾವತಿ, ಸುರೇಶಗೌಡ ಪಾಟೀಲ, ವಿಜಯಕುಮಾರ ಬಡಿಗೇರ, ನಾಗೇಶ ಲಾತೂರಕರ, ಗೌರಿಶಂಕರ ಹಿರೇಮಠ,ಪುರಸಭೆ ಮಾಜಿ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ತಾಲೂಕಾ ದೈಹಿಕ ಪರಿವೀಕ್ಷಕ ಎ.ಜೆ.ದಖನಿ ಇದ್ದರು.ಟಿ.ಡಿ.ಲಮಾಣಿ ಸ್ವಾಗತಿಸಿ, ನಿರೂಪಿಸಿದರು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,