ತಾಳಿಕೋಟಿ : ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ ಮಣ್ಣಿನ ಸಂಸ್ಕೃತಿಯನ್ನು ಅಳವಡಿಸುವಂತಹ ಕಾರ್ಯ ಮಾಡಿದರೆ ಪ್ರತಿ ಮನೆಯಲ್ಲಿಯೂ ರಾಜ ಮಹಾರಾಜರನ್ನು ಕಾಣಲು ಸಾಧ್ಯವಾಗಲಿದೆ.ಬಿದ್ದಾಗ ಕೈ ಹಿಡಿದೆತ್ತಿಕೊಂಡು ಜೋಪಾನ ಮಾಡುವ ಸಂಸ್ಕಾರವನ್ನು ಮಕ್ಕಳಲ್ಲಿ ಪಾಲಕರು ಬಿತ್ತಬೇಕು ಎಂದು ಕಾರ್ಕಳದ ಖ್ಯಾತ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು.
ತಾಳಿಕೋಟಿ ತಾಲ್ಲೂಕಿನ ಮೈಲೇಶ್ವರದಲ್ಲಿ ಶನಿವಾರ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇಂದು ಮಕ್ಕಳು ಸಾಮಾಜಿಕ ಜಾಲತಾಗಳ ಮೊರೆ ಹೋಗುತ್ತಿರುವ ಕಾರಣ ಪಾಲಕರ ಮೇಲಿನ ಗೌರವ ಕಡಿಮೆಯಾಗುತ್ತಿದೆ.ಇವತ್ತಿನ ಕಾಲದಲ್ಲಿ ಮಕ್ಕಳು ಎಡವಿದರೆ ಮೇಲೆತ್ತಬಹುದು, ಮುಂದೆ ನೀವು ಎಡವಿಬಿದ್ದಾಗ ನಿಮ್ಮ ಮಗು ನಿಮ್ಮನ್ನು ಎತ್ತಿಕೊಂಡು ಹೋಗಿ ಬೆಳೆಸಬೇಕು ಅಂತಹ ಶಿಕ್ಷಣ ಮಕ್ಕಳಲ್ಲಿ ನೀಡಿ.ಶಿವಾಜಿ ಮಹಾರಾಜರು ಎಂದಾಗ ಅವರ ತಾಯಿ ಜೀಜಾಬಾಯಿ ನೆನಪಿಗೆ ಬರುತ್ತಾರೆ.ಇಂತಹ ಜೀಜಾಬಾಯಿಯಂತೆ ಪ್ರತಿಯೊಬ್ಬ ತಾಯಿಯಾಗಬೇಕು. ಅಂದಾಗ ನಮ್ಮ ಭಾರತ ದೇಶವನ್ನು ತಾಯಿಯ ಸ್ವರೂಪದಂತೆ ಮಗು ಪ್ರೀತಿಸುತ್ತಾನೆಂದು ಹೇಳಿದರು.
ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಿಸುವ ಹೊಣೆ ಪಾಲಕರ ಮೇಲಿದೆ ಮಕ್ಕಳ ಮೇಲೆ ಒತ್ತಡದ ಓದಿನ ಪ್ರಭಾವ ಬೀರುವ ಕಾರ್ಯ ಮಾಡದೇ ಭಾರತದ ಭವಿಷ್ಯ ರೂಪಿಸುವ ನಾಯಕನನ್ನು ರೂಪಿಸಿ ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾಡಿ ಎಂದರು.
ಜಾಲಹಳ್ಳಿ ಬೃಹ್ಮನಠದ ಜಯಶಾಂತಲಿoಗೇಶ್ವರ ಶ್ರೀಗಳು ಮಾತನಾಡಿ, ತಂದೆ ತಾಯಿಯ ಪಾದಪೂಜೆ ಮಾಡಿಸುವ ಸಂಸ್ಕತಿ ಹುಟ್ಟಿದ್ದು ಭಾರತದಲ್ಲಿ. ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಕೆಲವರು ಹೊಂದಿಕೊoಡಿದ್ದರಿoದ ಪಾದ ಪೂಜೆಗೆ ವಿರೋಧಿಸುವುದರೊಂದಿಗೆ ನಮ್ಮ ಸಂಸ್ಕೃತಿ ನಶಿಸುವುದಕ್ಕೆ ಹತ್ತಿದೆ.ನಮ್ಮ ಸಂಸ್ಕೃತಿಯನ್ನು ಇಂಡೊನೇಶಿಯಾದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹ ಕಾರ್ಯ ಮಾಡಿರುವ ಬ್ರಿಲಿಯಂಟ್ ಸಂಸ್ಥೆಯ ಆಡಳಿತ ಮಂಡಳಿಯವರ ಕೆಲಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ತೆಲಸಂಗ ಪಂಡಿತ ಪುಟ್ಟರಾಜ ಗವಾಯಿ ಕಲಾ ಸಂಘದ ಅಧ್ಯಕ್ಷ ಭರಮಣ್ಣ ಕಾಮನ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಅರಳಿಸಿವ ಕಾರ್ಯ ಶಿಕ್ಷಕರು ಮಾಡಬೇಕು.ತಂದೆ ತಾಯಿ ಪಾದಪೂಜೆಯಲ್ಲಿ ವಿಶೇಷತೆ ಇದೆ. ನಮ್ಮ ದೇಶದ ಅಗಮ್ಯವಾದ ಸಂಸ್ಕೃತಿಯನ್ನು ಅನುಸರಿಸುವಂತಹದ್ದಾಗಿದೆ. ತಂದೆ ತಾಯಿಯ ಕಾಲಲ್ಲಿನ ಮಣ್ಣು ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದಾಗಿದೆ.ಅಂತಹ ಸ್ವರ್ಗದ ದಾರಿ ಬ್ರಿಲಿಯಂಟ್ ಶಾಲೆಯವರು ತೋರಿಸಿಕೊಟ್ಟಿದ್ದಾರೆ. ಮಕ್ಕಳಿಗೆ ಮನೆಯಲ್ಲಿ ಪ್ರಾರಂಭದಿAದ ಸಂಸ್ಕಾರ ಕಲಿಸುವ ಕಾರ್ಯ ಪಾಲಕರು ಮಾಡಬೇಕು.ಆ ಸಂಸ್ಕಾರ ಕಲಿಸದಿದ್ದರೆ ವೃದ್ದಾಶ್ರಮದ ದಾರಿಗೆ ನೀವು ಹೋಗುತ್ತೀರಿ. ಪಾಲಕರು ಇದನ್ನು ಅರಿತುಕೊಳ್ಳಬೇಕು. ಇಂತಹ ಸಂಸ್ಕಾರ ಕಲಿಸಿದ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಕಾರ್ಯ ಮೆಚ್ಚಿವಂತಹದ್ದಾಗಿದೆ ಎಂದರು.
ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಂಚನಾ ಶಿವನಗೌಡ ಪಾಟೀಲ ವಿದ್ಯಾರ್ಥಿನಿಗೆ ದಿ.ಎನ್.ಎಂ.ಬಿರಾದಾರ ಅವರ ಸ್ಮರಣಾರ್ಥ ಅವರ ಮಗನಾದ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶಶಿಧರ ಬಿರಾದಾರ ಅವರು 10 ಸಾವಿರ ರೂ. ಬಹುಮಾನ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.
ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅದ್ಯಕ್ಷರಾದ ಭರಮಣ್ಣ ರಾಮಣ್ಣನವರ, ಲಕ್ಷ್ಮೀ ಕಾಮಣ್ಣ ದಂಪತಿಗಳಿಗೆ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಸಾಧನೆಗೈದ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಸಿಂಚನಾ ಶಿವನಗೌಡ ಪಾಟೀಲ. ಗಗನ್ ಮೂಲಿಮನಿ. ಲಕ್ಷ್ಮೀ ಚೌದ್ರಿ. ಸೃಷ್ಟಿ ಮೇಲಿನಮನಿ ಅವರಿಗೆ ಸಂಸ್ಥೆ ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಮಾತನಾಡಿ , ಉತ್ತಮ ಸಮಾಜಕ್ಕೆ ಬೇಕಾಗಿರುವ ಮೌಲ್ಯಗಳು ಮತ್ತು ಮಕ್ಕಳಿಗೆ ಯಾವ ರೀತಿ ಸಂಸ್ಕಾರ ನೀಡಬೇಕು ಎಂಬುದರ ಕುರಿತು ವಿವರಿಸಿದ ಅವರು, ಮಕ್ಕಳಿಗೆ ಓದಿನ ಜೊತೆಗೆ ನೀಡುವ ಸಂಸ್ಕಾರ ಸಮಾಜಕ್ಕೆ ಕೊಡುಗೆಯಾಗಬೇಕು. ಆ ರೀತಿ ಮಕ್ಕಳನ್ನು ಬೇಳೆಸಬೇಕು ಎಂದ ಅವರು ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ಒದಗಿಸುವಂತಹ ಕಾರ್ಯ ಪಾಲಕರು ಮಾಡಬೇಕೆಂದು ಹೇಳಿದರು.
ಮಾರುತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಕಾರ್ಯದರ್ಶಿ ಎಂ.ಬಿ.ಮಡಿವಾಳರ, ನಿರ್ದೇಶಕರಾದ ಎಸ್.ಎಚ್.ಪಾಟೀಲ,ಎಲ್.ಎಂ.ಬಿರಾದಾರ, ಎನ್.ಎಸ್.ಗಡಗಿ, ಶಶಿಧರ ಬಿರಾದಾರ,ಮುಖ್ಯಗುರು ವಿನಾಯಕ ಪಟಗಾರ, ಎಸ್.ಸಿ.ಕರಡಿ ಹಾಗೂ ಚನ್ನು ಮೂಲಿಮನಿ ನಿರೂಪಿಸಿದರು.ಸಿದ್ದನಗೌಡ ಪಾಟೀಲ ಸ್ವಾಗತಿಸಿದರು.



