ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ ತಾಲ್ಲೂಕಿನ ಬೆಳಗಲ್ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಹುನಗುಂದದ ಶ್ರೀ ಎಸ್.ಆರ್.ಕೆ. ಸೌಹಾರ್ದ ಪತ್ತಿನ ಸಹಕಾರಿ ಸಂಘ ಇದರ 15ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹುನಗುಂದ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಉದ್ಯೋಗ ಸೃಷ್ಟಿಯಾಗುತ್ತವೆ.ಅದರಲ್ಲಿಯೂ ಈ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಈ ಭಾಗದ ಶಾಸಕರಾದ ನಾಡಗೌಡರ ಸಮಕಾಲೀನ ರಾಜಕಾರಣ ಮಾಡಿದವರು ನಮ್ಮ ತಂದೆ ಎಸ್.ಆರ್.ಕಾಶಪ್ಪನವರ ಅವರು.ಅಖಂಡ ವಿಜಯಪುರ ಜಿಲ್ಲೆಯಲ್ಲಿ ಬಲದಿನ್ನಿ ನಾಡಗೌಡ್ರು,ಹುನಗುಂದ ಕಾಶಪ್ಪನವರ ಕುಟುಂಬಗಳಲ್ಲಿ ಅವಳಿ ಜಿಲ್ಲೆಯ ಎರಡು ಹುಲಿಗಳು ಎಂಬ ಭಾವನೆ ಜನರಲ್ಲಿದೆ.ಹಾವರಗಿ,ಬಲದಿನ್ನಿ ಬೇರೆಯಲ್ಲ ಅದೇ ಭಾವನೆಯಲ್ಲಿ ನಾವು ಇಂದಿಗೂ ಇದ್ದೇವೆ.ಸರಳ ಸಜ್ಜನಿಕೆ ರಾಜಕಾರಣಿ ನಾಡಗೌಡ್ರು. ಎಲ್ಲರ ಸಹಕಾರದಿಂದ ಇಲ್ಲಿ 15ನೇ ಶಾಖೆಯನ್ನು ಆರಂಭಿಸಿದ್ದೇವೆ.ಆರoಭಿಕ ಠೇವಣಿ 4 ಕೋಟಿ ಇದ್ದದ್ದು 25 ಕೋಟಿ ರೂ.ಗೆ ಬದಲಾವಣೆ ಆಗಿದೆ.ನಾಲ್ಕು ಜಿಲ್ಲೆಗಳಲ್ಲಿ ಶಾಖೆಗಳನ್ನು ವಿಸ್ತರಿಸಲಾಗುತ್ತಿದೆ.ಬರಲಿರುವ ದಿನಗಳಲ್ಲಿ ಅಮಿನಗಡದಲ್ಲಿ ಶಾಖೆ ಆರಂಭಿಸಲಿದ್ದೇವೆ ಎಂದು ಹೇಳಿದರು .

ರೈತರಿಗೆ,ಕಾರ್ಮಿಕರಿಗೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ಶಾಖೆಗಳನ್ನು ಆರಂಭಿಸಿದ್ದೇವೆ.ಹುನಗುoದದಲ್ಲಿ ಶಾಖೆಯ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡ ಅರಂಭಿಸಲು ಮೂರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.ರಾಷ್ಟ್ರೀಯ ಬ್ಯಾಂಕುಗಳಿಗಿoತ ಉತ್ತಮ ಕೆಲಸ ಮಾಡಲಿವೆ ಎಂದು ಹೇಳಿದರು.

ಶಾಖೆ ಉದ್ಘಾಟಿಸಿದ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿದ್ದವರನ್ನು ಮೇಲೆತ್ತಬೇಕು ಎಂಬ ಉದ್ದೇಶದಿಂದ ಆರಂಭಗೊoಡಿರುವ ಎಸ್.ಆರ್.ಕೆ ಸೌಹಾರ್ದ ಸೊಸೈಟಿ ರಾಷ್ಟಿçÃಕೃತ ಬ್ಯಾಂಕುಗಳಿಗಿoತ ಉತ್ತಮ ಸೇವೆ ದೊರೆಯಲಿ ಎಂದು ಹೇಳಿದರು.

ಕಾಶಪ್ಪನವರ ಅವರ ತಾಯಿಯವರು ನಮ್ಮ ಜೊತೆಗೆ ಜಿಪಂ ಸದಸ್ಯರಾಗಿದ್ದವರು.ಕಾಶಪ್ಪನವರ ರಾಜಕೀಯವಾಗಿ ಹಿಂಬಾಲಕರನ್ನು ಅಲಕ್ಷ್ಯ ಮಾಡಲಿಲ್ಲ. ಮುನಿಸು ಬಂದವರ ಮನಿಗೆ ಹೋಗಿ ಮಾತನಾಡುತ್ತಿದ್ದರು. ರಾಜಕಾರಣ ಮಾಡುವಾಗ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂಬುದನ್ನು ಕಾಶಪ್ಪನವರ ನೋಡಿ ತಿಳಿಯಬೇಕು.ಸೌಹಾರ್ದ ಶಾಖೆಗಳಲ್ಲಿ ಬಂಡವಾಳ ತೊಡಗಿಸಿದವರಿಗೂ ಆದಾಯ ಹೆಚ್ಚಾಗುತ್ತದೆ.ಇಡೀ ದೇಶದಲ್ಲಿ ಸೌಹಾರ್ದ ಬ್ಯಾಂಕುಗಳು ಆರ್ಥಿಕ ಕ್ರಾಂತಿ ಮಾಡುತ್ತಿವೆ ಎಂದರು.

ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು.ಸಂಘದ ನಿರ್ದೇಶಕರಾದ ಅಮರೇಶ ನಾಗೂರ, ಮಲ್ಲಿಕಾರ್ಜುನ ಲೆಕ್ಕಿಹಾಳ,ಎನ್.ಎಮ್.ಕಲಗೋಡಿ,ಪ್ರಭು ಇದ್ದಲಗಿ , ನಿಂಗಪ್ಪ ಬಿದರಕುಂದಿ, ಮಹಾಂತೇಶ ಕಡಿವಾಲ,ಮುದ್ದೇಬಿಹಾಳ ಸಲಹಾ ಸಮಿತಿ ಸದಸ್ಯರಾದ ಶಿವಶಂಕರಗೌಡ ಹಿರೇಗೌಡರ,ಮಹಾಂತೇಶ ಗಂಗನಗೌಡರ, ಅಮರೇಶ ಗೂಳಿ,ಶ್ರೀಶೈಲ ಮರೋಳ, ಸಂಗಮೇಶ ಕಡಿ, ರಾಜುಗೌಡ ಕೊಂಗಿ,ಅಲ್ಲಾಭಕ್ಷ ದೇಸಾಯಿ, ಹಣಮಂತ ಹಂಡರಗಲ್ಲ,ಶಿವು ಶಿವಪೂರ, ಅಶೋಕ ಚಟ್ಟೇರ,ವೀರೇಶ ಹಡಲಗೇರಿ, ಶ್ರೀನಿವಾಸ ಗೌಂಡಿ, ಕೆ.ಆರ್.ಚೋಪದಾರ,ಬಸವರಾಜ ಸಜ್ಜನ,ವಾಸುದೇವ ಶಾಸ್ತಿçÃ,ಶಂಕರಗೌಡ ತಾವರಖೇಡ ಮೊದಲಾದವರು ಇದ್ದರು.ವ್ಯವಸ್ಥಾಪಕ ಮಂಜುನಾಥ ಬಿ ನಿರೂಪಿಸಿದರು.

Latest News

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ : ಪ್ರಸಕ್ತ ವರ್ಷ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿದ್ದು ಶಾಸಕ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ:                       ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ: ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ ತಾಲ್ಲೂಕು ಇನ್ನೂವರೆಗೂ ಘೋಷಣೆಯಾಗಿಲ್ಲ.ಎರಡು ದಿನಗಳ ಕಾಲ ಮಣ್ಣಿನ ತೇವಾಂಶ,ಬೆಳೆಯ ಗುಣಮಟ್ಟ,ವಾತಾವರಣದಲ್ಲಿ ತೇವಾಂಶ ಎಷ್ಟಿದೆ ಎಂದು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕು.ಈಗ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ದಾಸೋಹ ನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ದಿನವೂ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ ಅಭಿಮಾನಿಗಳು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಲೇ ಅದರಲ್ಲಿ ಮುದ್ದೇಬಿಹಾಳ ತಾಲ್ಲೂಕು ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ,ಸಿಎಂ,ಕoದಾಯ ಮಂತ್ರಿ ಹಾಗೂ ಶಾಸಕ ಸಿ.ಎಸ್.ನಾಡಗೌಡರಿಗೆ ಜಯಘೋಷಗಳನ್ನು ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ