ವೀರೇಶ್ವರ ಬ್ಯಾಂಕಿನಿಂದ ಶೀಘ್ರ ಎಟಿಎಂ ಸೇವೆ- ಎಂ.ಎಸ್.ಪಾಟೀಲ್
ನಾಲತವಾಡ : ಆರಂಭದಲ್ಲಿ 1167 ಶೇರು ಸದಸ್ಯರೊಂದಿಗೆ ಕೇವಲ 8.67 ಲಕ್ಷ ಬಂಡವಾಳದೊದಿಗೆ ಆರಂಭಗೊಡ ಇಲ್ಲಿನ ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕು ಸದ್ಯಕ್ಕೆ 5608 ಶೇರು ಸದಸ್ಯರನ್ನು ಹೊಂದಿದ್ದು ಆರ್ಥಿಕ ವರ್ಷಾಂತ್ಯಕ್ಕೆ 1.09 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಎಸ್.ಪಾಟೀಲ ಹೇಳಿದರು.
ಪಟ್ಟಣದ ರತ್ನಸಂಗಮ ಕಲ್ಯಾಣ ಮಂಟಪದಲ್ಲಿ 29ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕಿನಿಂದ ಐದು ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಆರ್.ಟಿ.ಜಿ.ಎಸ್, ನೆಫ್ಟ್, ಎಸ್.ಎಂ.ಎಸ್.ಸೇವೆ, ಇ ಸ್ಟಾಂಪಿಂಗ್, ಸೇಫ್ ಲಾಕರ್ ವ್ಯವಸ್ಥೆ ಹೊಂದಿ ಉತ್ತಮ ಸೇವೆ ನೀಡುತ್ತಿದ್ದು ಮುಂಬರುವ ದಿನಗಳಲ್ಲಿ ಬ್ಯಾಂಕಿನಿಂದ ಎಟಿಎಂ ಸೇವೆ ಆರಂಭಿಸಲಾಗುವುದು ಎಂದರು.
ನಿವೃತ್ತ ಉಪನ್ಯಾಸಕ ಸಿ.ಎಸ್.ರೇವಡಿ, ವೀರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚರ‍್ಯ ಡಿ. ಆರ್. ಮಳಖೇಡ ಮಾತನಾಡಿ, ಬ್ಯಾಂಕಿನ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಬೇಕಾದರೆ ಸಿಬ್ಬಂದಿಯ ಕಾರ್ಯಕ್ಷಮತೆ, ಸಾಲ ವಸೂಲಾತಿಯಲ್ಲಿ ತೋರುವ ನಿರ್ಧಾರಗಳು ಮಹತ್ವದ ಪಾತ್ರ ವಹಿಸುತ್ತವೆ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದಿಯಾಗಿ ಪ್ರತಿಯೊಬ್ಬರೂ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಬ್ಯಾಂಕ್‌ನ ಸದಸ್ಯ ಬಸವರಾಜ ತಿರುಮುಖೆ ಮಾತನಾಡಿ, ಮುಂಬರುವ ದಿನಗಳಲ್ಲಿ ಬ್ಯಾಂಕಿನಿಂದ ಹೊಸ ಶಾಖೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ನಾಗರಾಜ ಗಂಗನಗೌಡ್ರ ವರದಿ ವಾಚಿಸಿ, ಬ್ಯಾಂಕಿನ ಪ್ರಗತಿಗೆ ಸಿಬ್ಬಂದಿ ಹೊಂದಾಣಿಕೆ, ಆಡಳಿತ ಮಂಡಳಿ ಸಹಕಾರ, ಪ್ರೋತ್ಸಾಹದಿಂದ ಬ್ಯಾಂಕು ಪ್ರಗತಿಯತ್ತ ಸಾಗಿದೆ. ಲಿಂಗಸೂರು ಶಾಖೆಗೆ ಹೊಸ ಕಟ್ಟಡ ನಿರ್ಮಿಸಲು ಜಾಗೆ ಖರೀದಿಸಲಾಗಿದೆ ಎಂದು ತಿಳಿಸಿದರು.
ಸನ್ಮಾನ: ಪಟ್ಟಣದ ಸೇರಿ ಲಿಂಗಸ್ಗೂರ, ಮುದ್ದೇಬಿಹಾಳ, ಹುಣಸಗಿ, ಮುದ್ದೇಬಿಹಾಳ ಶಾಖೆಯಲ್ಲಿ ಉತ್ತಮ ಗ್ರಾಹಕರನ್ನು ಮತ್ತು ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ಸೇವೆ ಸಲ್ಲಿಸುತ್ತೀರುವ ತಜ್ಞ ವೈದ್ಯರಾದ ಡಾ.ರಂಗನಾಥ್ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಲಬುರ್ಗಿಯ ಶರಣಬಸಪ್ಪ ಅಪ್ಪಾ ಮತ್ತು ಅಹ್ಮದಬಾದ್ ವಿಮಾನ ದುರಂತ, ಬ್ಯಾಂಕಿನ ಸದಸ್ಯ ದಿ.ಸಂಗಪ್ಪ ಚಿನಿವಾಲರ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಅಂಗಡಿ, ಸದಸ್ಯರಾದ ಬಸವರಾಜ ತಾಳಿಕೋಟಿ, ಬಸವಂತಪ್ಪ ಗಂಗನಗೌಡ್ರ, ಸಂಗಣ್ಣ ಹಡಲಗೇರಿ, ಎಸ್. ಎಸ್. ಸ್ಥಾವರಮಠ, ಕೆ. ಆರ್. ಎತ್ತಿನಮನಿ, ಗುರುಸಂಗಪ್ಪ ಗಡೇದ, ಬಾಲಪ್ಪ ಹಟ್ಟಿ, ಸುಮಿತ್ರಾ ದೇಶಮುಖ, ಭಾರತಿ ಮೇಟಿ(ಪಾಟೀಲ), ಎಸ್.ಎಸ್.ಮಣ್ಣೂರ, ಈಶ್ವರಪ್ಪ ಚಿನಿವಾಲರ, ಅಶೋಕ ಹಡಲಗೇರಿ, ಶರಣಪ್ಪ ಕರಡಿ ಇದ್ದರು. ನಂದಿತಾ ಶೀಲವಂತರ ಹಾಗೂ ಯಮುನಾ ಅವರ ಪ್ರಾರ್ಥನೆ ಭರತನಾಟ್ಯ ಗಮನ ಸೆಳೆಯಿತು. ಶಿಕ್ಷಕ ಹೀರೂ ನಾಯಕ ರೈತ ಗೀತೆ ಹಾಡಿದರು.