ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 , 2025 ರಿಂದ ಅ.6,2025ರವರೆಗೆ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ತಪಾಸಣೆ ನಡೆಸಿದಾಗ ಸಾರ್ವಜನಿಕರ ಕೆಲಸಗಳನ್ನು ವಿಳಂಬವಾಗಿ ಮಾಡುತ್ತಿದ್ದ 14 ಜನ ಸಿಬ್ಬಂದಿಯನ್ನು ಬೇರೆಡೆ ಎತ್ತಂಗಡಿ ಮಾಡಿ ಧಾರವಾಡದ ಅಪರ ಆಯುಕ್ತರು ಆದೇಶಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಯಾಕೆ ಎತ್ತಂಗಡಿ : ವಿಜಯಪುರ ಡಿಡಿಪಿಐ ಕಚೇರಿಗೆ ಧಾರವಾಡದ ಆಯುಕ್ತರು ಭೇಟಿ ನೀಡಿದ್ದ ವೇಳೆ ಪತ್ರಾಂಕಿತ ಸಹಾಯಕರು ಮತ್ತು ಅಧೀಕ್ಷಕರು ತಮ್ಮ ಅಧೀನ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಜು ತಪಾಸಣೆ ಮಾಡಿರುವುದಿಲ್ಲ.ಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ತಿಳಿವಳಿಕೆ ನೀಡಿಲ್ಲ.ಇದರಿಂದ ಕಚೇರಿ ಆಡಳಿತ ನಿರ್ವಹಣೆಯಲ್ಲಿ ಪತ್ರಾಂಕಿತ ಸಹಾಯಕರು ಮತ್ತು ಅಧಿಕ್ಷಕರು ವಿಫಲರಾಗಿದ್ದು ಕಂಡು ಬರುತ್ತಿದ್ದು ಇವರ ಕರ್ತವ್ಯ ನಿರ್ಲಕ್ಷತೆ ಎದ್ದು ಕಾಣುತ್ತಿದೆ.ಕಚೇರಿ ಸಿಬ್ಬಂದಿ ಶಿಕ್ಷಕರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿನಾಕಾರಣ ವಿಳಂಬ ಮಾಡುತ್ತಿರುವ ಹಾಗೂ ಕಡತಗಳನ್ನು ನಿಯಮಾನುಸಾರ ಇತ್ಯರ್ಥಪಡಿಸದೇ ಇರುವ ಅಂಶಗಳು ಕಂಡು ಬಂದಿದ್ದು ಇದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುವುದಲ್ಲದೇ ಇಲಾಖೆಯ ಮೇಲಧಿಕಾರಿಗಳು ಮುಜುಗರಕ್ಕೀಡಾಗುವಂತೆ ನಡೆದುಕೊಳ್ಳುತ್ತಿರುವ ಸಿಬ್ಬಂದಿಯನ್ನು ಕಚೇರಿ ಸುಗಮ ಆಡಳಿತದ ಹಿತದೃಷ್ಟಿಯಿಂದ ಬೋಧಕೇತರ ವೃಂದದ ನೌಕರರನ್ನು ಬೇರೆ ಸ್ಥಳಗಳಿಗೆ ನಿಯೋಜಿಸುವಂತೆ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ವರ್ಗಾವಣೆಯಾದ ನೌಕರರು ಇವರು : ವಿಜಯಪುರ ಡಿಡಿಪಿಐ ಕಚೇರಿಯ ಸಿಬ್ಬಂದಿಯಾದ ಲೆಕ್ಕಾಧೀಕ್ಷಕ ದಶರಥ ಸಲಗರಕರ ಸಿಟಿಇ ಜಮಖಂಡಿಗೆ,ಅಧೀಕ್ಷಕರಾದ ಆರ್.ಬಿ.ಅಗರಖೇಡ ಹಾಗೂ ಪಿ.ಎಸ್.ಕಂಠಿ ಅವರನ್ನು ವಿಜಯಪುರ ಡಯಟ್‌ಗೆ, ಅಧೀಕ್ಷಕ ಅಶೋಕ ಹೂಗಾರ ಅವರನ್ನು ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ,ಪ್ರಥಮ ದರ್ಜೆ ಸಹಾಯಕಿ ಎ.ಎ.ಬಗಲಿ ಅವರನ್ನು ಮುದ್ದೇಬಿಹಾಳ ತಾಲ್ಲೂಕು ರಕ್ಕಸಗಿ ಕೆಪಿಎಸ್ ಶಾಲೆಗೆ,ಎಫ್.ಡಿ.ಎ ಗೀತಾ ಹಾದಿಮನಿ ಅವರನ್ನು ಬಸವನ ಬಾಗೇವಾಡಿ ಬಿಇಒ ಕಚೇರಿಗೆ,ಎಫ್.ಡಿ.ಎ ದೀಪಾ ಹಿರೇಮಠ ಹಾಗೂ ಎನ್.ಎಂ.ಚಟ್ಟರಕಿ ಅವರನ್ನು ವಿಜಯಪುರ ಗ್ರಾಮೀಣ ವಲಯದ ಬಿಇಒ ಕಚೇರಿಗೆ, ಎಫ್.ಡಿ.ಎ ಬಸವರಾಜ ಹೊಲ್ದೂರ ಅವರನ್ನು ಮುದ್ದೇಬಿಹಾಳ ತಾಲ್ಲೂಕು ಇಂಗಳಗಿ ಸರಕಾರಿ ಪ್ರೌಢಶಾಲೆಗೆ,ಎಫ್.ಡಿ.ಎ ಪಿ.ಪಿ.ದಶವಂತ ಅವರನ್ನು ವಿಜಯಪುರ ಜಿಲ್ಲೆ ಅರ್ಜುಣಗಿ ಕೆಪಿಎಸ್ ಶಾಲೆಗೆ,ಎಸ್.ಡಿ.ಎ ರಾಜೇಂದ್ರ ನಿವರಗಿ ಅವರನ್ನು ವಿಜಯಪುರ ಜಿಲ್ಲೆ ಜುಮನಾಳ ಸರ್ಕಾರಿ ಪ್ರೌಢಶಾಲೆಗೆ,ಎಸ್.ಡಿ.ಎ ಎ.ಆರ್.ಪಾಟೀಲ ಅವರನ್ನು ಚಡಚಣ ಬಿಇಒ ಕಚೇರಿಗೆ,ಸಿಸಿಟಿ ಎನ್.ಎ.ಬೀಳಗಿ ಅವರನ್ನು ಮುದ್ದೇಬಿಹಾಳ ಬಿಇಒ ಕಚೇರಿಗೆ ಹಾಗೂ ಎಫ್.ಡಿ.ಎ ಎಸ್.ಎ.ಕಲ್ಮನಿ ಅವರನ್ನು ವಿಜಯಪುರ ಜಿಲ್ಲೆ ಅರಕೇರಿ ಸರ್ಕಾರಿ ಪ್ರೌಢಶಾಲೆಗೆ ನಿಯೋಜನೆ ಮಾಡಿ ಜ.19ರಂದು ವಿಜಯಪುರದ ಡಿಡಿಪಿಐ ವೀರಯ್ಯ ಸಾಲಿಮಠ ಆದೇಶಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಡಿಡಿಪಿಐ ಕಚೇರಿಯಲ್ಲಿ ಕೆಲಸಗಳು ವಿಳಂಬಗತಿಯಲ್ಲಿ ಆಗುತ್ತಿರುವ ಹಾಗೂ ಕೆಲವು ಕಡತಗಳು ನಾಪತ್ತೆಯಾದ ಪ್ರಕರಣಗಳಿಗೆ ಸಂಬoಧಿಸಿದoತೆ ಇಲಾಖೆಯ ಮೇಲಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸದೇ ಕೇವಲ ಅನ್ಯ ಸ್ಥಳಗಳಿಗೆ ನಿಯೋಜಿಸಿದ್ದೇಕೆ ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

Latest News

Free $ten Pokies No-deposit Register Incentive Australian 24 Casino mobile login continent 2026

Content24 Casino mobile login: Free pokies against. real money pokiesCome across

Winning at Chicken Road Slot Machines

The Chicken Road slot machine is a 5-reel, 25-payline game that

Chicken Road 2 Slot Machine Experience

The Chicken Road 2 slot machine is a sequel to the

ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡಿ: SMES ಅಧ್ಯಕ್ಷ ಎಂ.ಆರ್. ನಾಯಕರ

ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡಿ: SMES ಅಧ್ಯಕ್ಷ ಎಂ.ಆರ್. ನಾಯಕರ

ಬಬಲೇಶ್ವರ: ದೇಶವನ್ನು ಸುವ್ಯವಸ್ಥಿತವಾಗಿ ಮುಂದೆ ಕೊಂಡ್ಯೊಯುವ ಉದ್ದೇಶದಿಂದ ಸ್ವತಂತ್ರ್ಯದ ನಂತರ ಸಂವಿಧಾನ ರಚಿಸಲಾಯಿತು ಎಂದು

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 , 2025 ರಿಂದ ಅ.6,2025ರವರೆಗೆ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ತಪಾಸಣೆ ನಡೆಸಿದಾಗ ಸಾರ್ವಜನಿಕರ ಕೆಲಸಗಳನ್ನು ವಿಳಂಬವಾಗಿ ಮಾಡುತ್ತಿದ್ದ 14 ಜನ ಸಿಬ್ಬಂದಿಯನ್ನು ಬೇರೆಡೆ ಎತ್ತಂಗಡಿ ಮಾಡಿ ಧಾರವಾಡದ ಅಪರ ಆಯುಕ್ತರು ಆದೇಶಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಯಾಕೆ ಎತ್ತಂಗಡಿ : ವಿಜಯಪುರ ಡಿಡಿಪಿಐ ಕಚೇರಿಗೆ ಧಾರವಾಡದ ಆಯುಕ್ತರು ಭೇಟಿ ನೀಡಿದ್ದ ವೇಳೆ ಪತ್ರಾಂಕಿತ

ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ

ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ

ಮುದ್ದೇಬಿಹಾಳ : ಗುರು ಹಿರಿಯರಿಗೆ ಕೊಡುವ ಗೌರವವೇ ನಿಜವಾದ ದೇವರ ಪೂಜೆ ಎಂದು ಗುಡಿಹಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಗಮೇಶ ನವಲಿ ಹೇಳಿದರು. ತಾಲ್ಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇವರು ನಮ್ಮೊಳಗೆ ಇದ್ದಾನೆ. ನಮ್ಮ ತಂದೆ ತಾಯಿ ಗುರುಹಿರಿಯರ ರೂಪದಲ್ಲಿ ಇದ್ದಾನೆ. ಅವರನ್ನು ಗೌರವಿಸುವುದನ್ನು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ ಎಂದು ಹೇಳಿದರು. ಶಾಲೆಯ ಎಸ್‌ಡಿಎಂಸಿ