ಮೀನುಗಾರಿಕೆ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶ-ಶಾಸಕ ನಾಡಗೌಡ

ಮೀನುಗಾರಿಕೆ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ಭಾಗದ ನಾರಾಯಣಪೂರ ಹಾಗೂ ಆಲಮಟ್ಟಿ ಜಲಾಶಯದ ಮಧ್ಯೆದಲ್ಲಿ ಬರುವ ಕೃಷ್ಣಾ ನದಿ ತೀರದಲ್ಲಿ ವ್ಯಾಪಕವಾಗಿ ಮೀನುಗಾರಿಕೆಗೆ ಅವಕಾಶ ಇದ್ದು ಯುವಕರು ಈ ಕ್ಷೇತ್ರದಲ್ಲಿ ತರಬೇತಿ ಪಡೆದುಕೊಂಡರೆ ನಿರುದ್ಯೋಗ,ಬಡತನ ನಿವಾರಣೆ ಮಾಡಲು ಸಾಧ್ಯವಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಸನ್ 2025-26ಸಾಲಿನ ಜಿಪಂ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ ಮೀನುಗಾರಿಕಾ ಇಲಾಖೆಯ ನೂತನ ಕಚೇರಿಯ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೀನುಮರಿಗಳ ಉತ್ಪಾದಕ ಜಾಗೆಯನ್ನು ನಾರಾಯಣಪೂರ ಗಡಿ ಭಾಗದ ಸಿದ್ದಾಪುರದಲ್ಲಿ ಗುರುತಿಸಿ 75 ಎಕರ ಜಮಿನು ಸ್ವಾಧೀನಗೊಳಿಸಲಾಗಿದೆ.ಆ ಸಮಯದಲ್ಲಿ ಸಿಂಧನೂರ ಶಾಸಕರಾಗಿದ್ದ ವೆಂಕಟರಾವ ನಾಡಗೌಡರ ಮೂಲಕ ಸೀಡ್ ಫಾರ್ಮ್ಗೆ ಒಂಭತ್ತು ಕೋಟಿ ರೂ.ಮಂಜೂರು ಮಾಡಿಸಿದ್ದೇವು.ಅದರ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವು.ಆದರೆ ಸಮರ್ಪಕ ಕೆಲಸ ಆಗಲಿಲ್ಲ ಎಂದು ಹೇಳಿದರು.

ನಮ್ಮ ಭಾಗದಲ್ಲಿ ಆಂಧ್ರ ಮತ್ತು ತಮಿಳುನಾಡು ಜನ ಮೀನುಗಾರಿಕೆ ಮಾಡುತ್ತಾರೆ.ಅವರನ್ನು ಗುತ್ತಿಗೆದಾರರು ತಂದು ಕೆಲಸಕ್ಕೆ ಹಚ್ಚಿ ಬುಟ್ಟಿ ಕೊಡಿಸುವುದು,ಬಲೆ ಕೊಡಿಸಿ ಕೆಜಿ ಮೀನಿಗೆ 50-60ರೂ. ಕೊಡುತ್ತಿದ್ದರು.ಆದರೆ ಮಾರುಕಟ್ಟೆಯಲ್ಲಿ 250-300 ರೂ ಮಾರಾಟ ಮಾಡುತ್ತಿದ್ದರು.ಮಧ್ಯವರ್ತಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದರು.ನಮ್ಮ ಭಾಗದ ಯಾವುದೇ ಸೊಸೈಟಿಯಲ್ಲಿ ಮೀನುಹಿಡಿಯಲು ಆಸಕ್ತಿ ಕಡಿಮೆ. ಹಿಂದುಳಿದ ಜನಾಂಗ ಇದ್ದಾರೆ.ಎಷ್ಟೊ ಜನಕ್ಕೆ ಭೂಮಿಯಿಲ್ಲ.ಈ ಜಲಾಶಯಗಳು ದೇವರು ಕೊಟ್ಟ ವರದಾನ.ಮೀನುಗಾರಿಕೆ ತರಬೇತಿ ಪಡೆದರೆ ಆರ್ಥಿಕವಾಗಿ ಆದಾಯ ಬರುತ್ತದೆ ಎಂದು ಹೇಳಿದರು.
ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಮೀನುಗಾರಿಕಾ ಉತ್ಪಾದನಾ ಕೇಂದ್ರ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ.ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರದ ಆರಂಭಕ್ಕೆ ಒತ್ತು ನೀಡಲಾಗಿದೆ.ಮೀನುಮರಿಗಳನ್ನು ಉತ್ಪಾದಿಸುವ ಹೊಸಪೇಟೆ, ಶಿವಮೊಗ್ಗ ನಮ್ಮ ರೈತರು ಹೋಗಬೇಕಿತ್ತು.ಆದರೆ ಸಿದ್ದಾಪುರದ ಮೀನುಗಾರಿಕಾ ಉತ್ಪಾದನಾ ಕೇಂದ್ರದಿAದ ಶೇ. 80 ರಷ್ಟು ಮರಿಗಳು ಉಳಿಯುತ್ತವೆ ಎಂದು ಹೇಳಿದರು.

ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಭಾಂಗಿ ಮಾತನಾಡಿ, ಜಿಪಂನಿAದ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೊಸ ಜಾಗೆಯನ್ನು ಶಾಸಕ ಸಿ.ಎಸ್.ನಾಡಗೌಡರು ಕಾಳಜಿಯಿಂದ ನೀಡಿದ್ದಾರೆ.ಕೆ.ಆರ್.ಐ.ಡಿ.ಎಲ್ ಮುಂದುವರೆದ ಕಾಮಗಾರಿ ಎಂದು 50 ಲಕ್ಷ ರೂ.ಗಳನ್ನು ಇಲಾಖೆ ನೀಡಿದೆ ಎಂದು ಹೇಳಿದರಲ್ಲದೇ ವಿಶೇಷ ಘಟಕದ ಯೋಜನೆಯಡಿ ಒಂದು ವಾಹನ ಮೀನುಗಾರರಿಗೆ ಮಂಜೂರಿಯಾಗಿದೆ.ಮೀನುಗಾರರಿಗೆ ಲೈಫ್ ಜಾಕೆಟ್, ಬಲಿ ನೀಡಲಾಗುತ್ತದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಕಾಂಗ್ರೆಸ್ ಹಿರಿಯ ಮುಖಂಡ ಎಂ.ಬಿ.ನಾವದಗಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕೆಪಿಸಿಸಿ ಸದಸ್ಯ ರಮೇಶ ಓಸ್ವಾಲ,ವೀರಶೈವ ಲಿಂಗಾಯತ ಸಮಾಜದ ಮುಖಂಡ ಪ್ರಭುರಾಜ ಕಲ್ಬುರ್ಗಿ , ಉದ್ಯಮಿ ಶರಣು ಸಜ್ಜನ,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಸತೀಶ ಓಸ್ವಾಲ್, ರಾಜು ಕರಡ್ಡಿ,ಸಂಗನಗೌಡ ಬಿರಾದಾರ, ಡಾ.ವಿಜಯಕುಮಾರ ಗೂಳಿ,ಸದು ಮಠ,ನಾಗರಾಜ ಬಿರಾದಾರ, ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶಗೌಡ ಪಾಟೀಲ ಇಂಗಳಗೇರಿ,ಲಕ್ಷö್ಮಣ ಲಮಾಣಿ ಸೇರಿದಂತೆ ಹಲವರು ಇದ್ದರು.ವಿಶೇಷ ಘಟಕ ಯೋಜನೆಯಡಿ ಗೆದ್ದಲಮರಿಯ ಶಾಂತಾಬಾಯಿ ಲಮಾಣಿ ಅವರಿಗೆ ಮೀನುಗಾರಿಕೆಗಾಗಿ ಗೂಡ್ಸ್ ಕ್ಯಾಬ್‌ನ್ನು ವಿತರಿಸಲಾಯಿತು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,