ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಮೂಲಕ ಸರ್ಕಾರಿ ಕೋಟಾದಡಿ
ಪ್ರವೇಶ ಸಿಗದೆ, ಅಡಳಿತ ಮಂಡಳಿಯ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಗಳಿಗೆ ಮೊದಲ ವರ್ಷದಲ್ಲಿ 25 ಲಕ್ಷ ರೂ.ಕಾಲೇಜು ಶುಲ್ಕ ನೀಡಲು ರಾಜ್ಯ ಸರ್ಕಾರ
ನಿರ್ಧರಿಸಿದೆ.
ಅಲ್ಲದೆ, ಹೀಗೆ ಪ್ರವೇಶ ಪಡೆದ ವಿದ್ಯಾರ್ಥಿ ಎಂಬಿಬಿಎಸ್ ಮೊದಲ ವರ್ಷದಲ್ಲಿ ಶೇ 60ಕ್ಕೂ ಹೆಚ್ಚು ಅಂಕ ಪಡೆದರೆ ಮತ್ತೆ 25 ಲಕ್ಷ ರೂ.ಪ್ರೋತ್ಸಾಹಧನ ಸಿಗಲಿದೆ.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಅಲ್ಲದೆ, ಹೀಗೆ ಪ್ರವೇಶ ಪಡೆದ ವಿದ್ಯಾರ್ಥಿ ಎಂಬಿಬಿಎಸ್ ಮೊದಲ ವರ್ಷದಲ್ಲಿ ಶೇ 60ಕ್ಕೂ ಹೆಚ್ಚು ಅಂಕ ಪಡೆದರೆ ಮತ್ತೆ 25 ಲಕ್ಷ ರೂ.ಪ್ರೋತ್ಸಾಹಧನ ಸಿಗಲಿದೆ.