25 ಸಾವಿರ ರೂ.ಮಾನವೀಯ ನೆರವು: ಕಾರ್ಮಿಕರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಸಾಂತ್ವನ

25 ಸಾವಿರ ರೂ.ಮಾನವೀಯ ನೆರವು: ಕಾರ್ಮಿಕರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಹೊರವಲಯದ ಅಮರಗೋಳ ಕ್ರಾಸ್‌ನಲ್ಲಿ ಗೂಡ್ಸ್ ವಾಹನ ಪಲ್ಟಿಯಾಗಿ ಸಾವನ್ನಪ್ಪಿದ್ದ ಮಹಿಳೆ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಅಸ್ಕಿ ಫೌಂಡೇಶನ್ ಅಧ್ಯಕ್ಷ , ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸಾಂತ್ವನ ಹೇಳಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದ ಸಮೀಪದಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಮೃತ ಹವಾಲ್ದಾರ್ ಕುಟುಂಬಕ್ಕೆ 25ಸಾವಿರ ರೂ.ಆರ್ಥಿಕ ಮಾನವೀಯ ನೆರವು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯದ ಕೂಲಿ ನಂಬಿ ಬೇರೆ ತಾಲ್ಲೂಕಿಗೆ ಉದ್ಯೋಗಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿರುವುದು ದುರದೃಷ್ಟಕರ ಸಂಗತಿ.ಘಟನೆಯನ್ನು ಶಾಸಕರ ಗಮನಕ್ಕೆ ತರಲಾಗಿದ್ದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಒದಗಿಸುವ ಕುರಿತು ವಿನಂತಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ , ಮುಖಂಡ ಬಸಲಿಂಗಪ್ಪ ರಕ್ಕಸಗಿ, ವೆಂಕಟೇಶ ಭಜಂತ್ರಿ, ಎಂ.ಎಚ್.ಹಾಲ್ಯಾಳ, ಎಂ.ಎಸ್.ಕತ್ತಿ ಮೊದಲಾದವರು ಇದ್ದರು.

Latest News

ಹೆಸ್ಕಾಂ ಅಧಿಕಾರಿ ಸಾವು ಪ್ರಕರಣ:ನಾಲ್ವರ ಮೇಲೆ ದೂರು ದಾಖಲು

ಹೆಸ್ಕಾಂ ಅಧಿಕಾರಿ ಸಾವು ಪ್ರಕರಣ:ನಾಲ್ವರ ಮೇಲೆ ದೂರು ದಾಖಲು

ಮುದ್ದೇಬಿಹಾಳ : ಸರ್ಕಾರಿ ಜಾಗೆಯನ್ನು ಕಬಳಿಸಲು ಮುಂದಾಗಿದ್ದ ವ್ಯಕ್ತಿಗಳೇ ಹೆಸ್ಕಾಂ ಅಧಿಕಾರಿ ಶಿವಪ್ಪ ಆರೇಶಂಕರ

ವಕ್ಫ್ ಕಾಯ್ದೆ ವಿರುದ್ಧ ಮೌನ ಪ್ರತಿಭಟನೆ

ವಕ್ಫ್ ಕಾಯ್ದೆ ವಿರುದ್ಧ ಮೌನ ಪ್ರತಿಭಟನೆ

ಮುದ್ದೇಬಿಹಾಳ : ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ

ಜಾತಿ ಗಣತಿಗೆ ಘೋಷಣೆ : ಕೇಂದ್ರದ ನಿರ್ಧಾರಕ್ಕೆ ನಡಹಳ್ಳಿ ಹರ್ಷ

ಜಾತಿ ಗಣತಿಗೆ ಘೋಷಣೆ : ಕೇಂದ್ರದ ನಿರ್ಧಾರಕ್ಕೆ ನಡಹಳ್ಳಿ ಹರ್ಷ

ಮುದ್ದೇಬಿಹಾಳ : ದೇಶದ ಜಾತಿ, ಜನಗಣತಿ ಆಗಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವುದಕ್ಕೆ

ಸಾವಿನ ಸುತ್ತ ಅನುಮಾನದ ಹುತ್ತ: ಹೆಸ್ಕಾಂ ಸೆಕ್ಷನ್ ಅಧಿಕಾರಿ ಆರೇಶಂಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸಾವಿನ ಸುತ್ತ ಅನುಮಾನದ ಹುತ್ತ: ಹೆಸ್ಕಾಂ ಸೆಕ್ಷನ್ ಅಧಿಕಾರಿ ಆರೇಶಂಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮುದ್ದೇಬಿಹಾಳ : ಹೆಸ್ಕಾಂನ ಗ್ರಾಮೀಣ ವಲಯದ ಸೆಕ್ಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ತಾಲ್ಲೂಕಿನ ಕುಂಟೋಜಿ

ಅಗಸಬಾಳದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ

ಅಗಸಬಾಳದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ

ಮುದ್ದೇಬಿಹಾಳ : ತಾಲ್ಲೂಕಿನ ಅಗಸಬಾಳದಲ್ಲಿ ಅಂಬೇಡ್ಕರ್ ಜಯಂತಿಯಂದು ಗ್ರಾಮದಲ್ಲಿರುವ ಕಂಬವೊಂದಕ್ಕೆ ಅಳವಡಿಸಿದ್ದ ಅಶೋಕ ಚಕ್ರವಿದ್ದ ನೀಲಿ ಧ್ವಜವನ್ನು ಕಿಡಿಗೇಡಿಗಳು ಕಿತ್ತೆಸೆದ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ತಪ್ಪಿತಸ್ಥರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಬೇಕು ಎಂದು ದೌರ್ಜನ್ಯ ತಡೆ ಸಮೀತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಒತ್ತಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ಸಿಪಿಐ ಮೊಹ್ಮದ ಫಸೀವುದ್ದೀನ ಮಾತನಾಡಿ, ಅಗಸಬಾಳ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು ಜಯಂತಿ ಆಚರಣೆಯ ಸಮಯದಲ್ಲಿ ಕಟ್ಟಿದ್ದ ಧ್ವಜ ಗ್ರಾಮದ ಗಿಡವೊಂದರ

14 ವರ್ಷದ ಹುಡಗನ ಆಟಕ್ಕೆ ಮನಸೋತ ಕ್ರಿಕೆಟ್ ಜಗತ್ತು

14 ವರ್ಷದ ಹುಡಗನ ಆಟಕ್ಕೆ ಮನಸೋತ ಕ್ರಿಕೆಟ್ ಜಗತ್ತು

ಜೈಪುರ್: ರಾಜಸ್ಥಾನ ರಾಯಲ್ಸ್‌ನ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟಕ್ಕೆ ಕ್ರಿಕೆಟ್‌ ಜಗತ್ತು ಮನಸೋತಿದೆ. ಕೇವಲ 14 ವರ್ಷದ ವೈಭವ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿ ಎಲ್ಲರ ಗಮನ ಸೆಳೆದರು. ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟನ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್‌ ಸೋತು ಮೊದಲು