26ರೊಳಗೆ ಬಾಕಿ ನೀಡಬೇಕು : ಕಾರ್ಖಾನೆಗಳಿಗೆ ರೈತರ ಗಡವು

26ರೊಳಗೆ ಬಾಕಿ ನೀಡಬೇಕು : ಕಾರ್ಖಾನೆಗಳಿಗೆ ರೈತರ ಗಡವು

ಮುಧೋಳ : ಅ.26ರೊಳಗೆ ಎಲ್ಲ ಕಾರ್ಖಾನೆಗಳು 2022ರ ಹೆಚ್ಚುವರಿ 62ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತಮುಖಂಡರು ಬುಧವಾರ ನಡೆದ ಸಭೆಯಲ್ಲಿ ಕಾರ್ಖಾನೆಗಳಿಗೆ ಗಡವು ನೀಡಿದರು.
ನಗರದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನಗೆ ನೀಡಬೇಕಿದ್ದ 62 ರೂ.ವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪಾವತಿಸಿದ್ದಾರೆ. ಇನ್ನುಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಪಾವತಿಸಬೇಕು ಎಂದು ಸಭೆಯ ಮೂಲಕ‌ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸಂದೇಶ ರವಾಣಿಸಿದರು.
ಒಂದು ವೇಳೆ ಬಾಕಿ ಹಣ ನೀಡದೆ ಇದ್ದರೆ 26ರಂದು ಮುಂದಿನ ಹೋರಾಟದ ರೂಪರೇಷೆಗಳ ಮತ್ತೊಂದು ಸುತ್ತಿನ ಸಭೆ ಸೇರೋಣ ಎಂದು ನಿರ್ಧರಿಸಿದರು.
ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ. ಹನಮಂತ ನಬಾಬ. ಸುರೇಶ ಚಿಂಚಲಿ. ನಾಗೇಶ ಗೊಲಶೇಟ್ಟಿ. ಸುಭಾಸ ಶಿರಬೂರ. ಮಹೇಶಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Latest News

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಮುದ್ದೇಬಿಹಾಳ : ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮುದ್ದೇಬಿಹಾಳ ಪಟ್ಟಣದಲ್ಲಿ ಮೇ.30 ರಿಂದ ಆರಂಭಗೊಳ್ಳಲಿರುವ ಗ್ರಾಮದೇವತೆ ಜಾತ್ರೆಯನ್ನು

ಸಿಡಿಲು ಬಡಿದು ರೈತ ಸಾವು

ಸಿಡಿಲು ಬಡಿದು ರೈತ ಸಾವು

ಮುದ್ದೇಬಿಹಾಳ : ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಮಂಗಳವಾರ

ಸೇನೆಯಿಂದ ತುರ್ತು ಕರೆ: ಹುಲ್ಲೂರು ತಾಂಡಾದ ಎಂಟು ಜನ ಯೋಧರಿಗೆ ಬೀಳ್ಕೊಡುಗೆ

ಸೇನೆಯಿಂದ ತುರ್ತು ಕರೆ: ಹುಲ್ಲೂರು ತಾಂಡಾದ ಎಂಟು ಜನ ಯೋಧರಿಗೆ ಬೀಳ್ಕೊಡುಗೆ

ಮುದ್ದೇಬಿಹಾಳ : ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೇನೆಯಿಂದ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುಲ್ಲೂರ ತಾಂಡಾದ ಎಂಟು ಯೋಧರು ಶನಿವಾರ ಮರಳಿ ದೇಶ ಸೇವೆಗೆ ಮರಳಿದರು. ರಜೆಯ ಮೇಲೆ ತಮ್ಮ ಊರುಗಳಿಗೆ ಬಂದಿದ್ದ ಯೋಧರನ್ನು ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ದೇಶಕ್ಕಿಂತ ದೊಡ್ಡದು ಯಾವುದು ಇಲ್ಲ. ದೇಶ ಉಳಿದರೆ ನಾವು, ನಮ್ಮ ಕುಟುಂಬ ಇರಲು ಸಾಧ್ಯ. ಹೀಗಾಗಿ ಸೇನೆಯ ಕರೆಗೆ

170 ಮೆಡಿಕಲ್ ಸೀಟು ಗಳಿಸುವ ಗುರಿ:ಶೇ.98ರಷ್ಟು ಅಂಕ ಪಡೆದರೆ ಪಿಯುಸಿಯಲ್ಲಿ ಉಚಿತ ಶಿಕ್ಷಣ-ಅಮೀತರೆಡ್ಡಿ ಪಾಟೀಲ್

170 ಮೆಡಿಕಲ್ ಸೀಟು ಗಳಿಸುವ ಗುರಿ:ಶೇ.98ರಷ್ಟು ಅಂಕ ಪಡೆದರೆ ಪಿಯುಸಿಯಲ್ಲಿ ಉಚಿತ ಶಿಕ್ಷಣ-ಅಮೀತರೆಡ್ಡಿ ಪಾಟೀಲ್

ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ವಿದ್ಯಾಸಂಸ್ಥೆಯಿಂದ ಎರಡು ವರ್ಷದವರೆಗೆ ವಸತಿಯೊಂದಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತರೆಡ್ಡಿ ಪಾಟೀಲ ಹೇಳಿದರು. ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ನೀಟ್‌ನಲ್ಲಿ