ಮುದ್ದೇಬಿಹಾಳ : 500-1000 ರೂ.ಗಳಿಗೆ ನಿಮ್ಮ ಓಟು ಮಾರಿಕೊಂಡರೆ ಐದು ವರ್ಷಗಳ ಕಾಲ ಅವರು ನಿಮ್ಮನ್ನು ಆಳುತ್ತಾರೆ ಎಂಬುದನ್ನು ಮರೆಯಬೇಡಿ.ಒಳ್ಳೆಯವರನ್ನು ಚುನಾಯಿಸುವ ಅಧಿಕಾರ ಸಂವಿಧಾನ ನಿಮಗೆ ನೀಡಿದ್ದು ಅದನ್ನು ಸಮರ್ಥ ವ್ಯಕ್ತಿಯ ಆಯ್ಕೆಗೆ ಬಳಸಿಕೊಳ್ಳಿ ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 246 ಮತಗಟ್ಟೆಗಳಿದ್ದು ಒಟ್ಟು 2,30,196 ಲಕ್ಷ ಮತದಾರರು ಅರ್ಹರಿದ್ದು 1,15,094 ಪುರುಷರು, 1,15,020, ಮಂಗಳಮುಖಿಯರು 32 ಜನ ಇದ್ದಾರೆ ಎಂದು ಮಾಹಿತಿ ನೀಡಿದರು.
ಹಿರಿಯ ಸಿವ್ಹಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಮಾತನಾಡಿ, ಚುನಾವಣೆಗಳಲ್ಲಿ ಪ್ರಭಾವವನ್ನು ಬೀರುವ ಕೆಲಸವನ್ನು ರಾಜಕಾರಣಿಗಳು ಮತದಾರರಿಗೆ ಮಾಡುತ್ತಾರೆ.ಆದರೆ ಪ್ರಭಾವಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಉತ್ತಮ ವ್ಯಕ್ತಿಗಳನ್ನು ಚುನಾಯಿಸುವ ಕೆಲಸ ಮತದಾರರು ಮಾಡಬೇಕು.ಚುನಾವಣೆಯಲ್ಲಿ ಲಂಚ ನೀಡುವುದು, ಪ್ರಭಾವ ಬೀರುವ ಅಪರಾಧಗಳಿಗೆ ಬಿಎನ್‌ಎಸ್ ಕಾಯ್ದೆಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದರು.
ಹಿರಿಯ ವಕೀಲರಾದ ಎನ್.ಬಿ.ಮುದ್ನಾಳ ಮತದಾನ ಮಹತ್ವದ ಕುರಿತು ಉಪನ್ಯಾಸ ನೀಡಿದರು.ತಾಪಂ ಇಒ ವೆಂಕಟೇಶ ವಂದಾಲ, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಜೆ.ದಖನಿ,ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ, ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ, ನ್ಯಾಯಾಲಯದ ಸಿಬ್ಬಂದಿ ಅರವಿಂದ ಕುಂಬಾರ ಇದ್ದರು.ಎಸ್.ಜಿ.ಲೊಟಗೇರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಬಿಎಲ್‌ಒಗಳಾಗಿ ಸೇವೆ ಸಲ್ಲಿಸಿದ ಬಿ.ಎಂ.ಲಮಾಣಿ, ಸಿ.ಕೆ.ಪತ್ತಾರ, ಪರಶುರಾಮ ಮೇಟಿ,ಬಿ.ಆಯ್.ಗಣಿಹಾರ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಮತದಾರರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮತದಾನದ ಕುರಿತು ಅರಿವು ಮೂಡಿಸಿದ ಹಡಲಗೇರಿ ವಸತಿಯುಕ್ತ ಪದವಿ ಕಾಲೇಜಿನ ಉಪನ್ಯಾಸಕ ರವಿ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು.



