ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಹೊಸ ವೇತನ ಆಯೋಗವನ್ನು ಸ್ಥಾಪಿಸುತ್ತದೆ ಮತ್ತು ಇದೀಗ 8ನೇ ವೇತನ ಆಯೋಗ (8th Pay Commission) ವನ್ನು ಸ್ಥಾಪಿಸುವ ಕುರಿತು ದೇಶದಲ್ಲಿ ಚರ್ಚೆ ಶುರುವಾಗಿದೆ. ಈ ಆಯೋಗದಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹುದೊಡ್ಡ ಪ್ರಯೋಜನವಾಗಲಿದೆ.
Join Our Telegram: https://t.me/dcgkannada
8th Pay Commission ನಿಂದ
ಏನು ನಿರೀಕ್ಷಿಸಬಹುದು?
* ವೇತನ ಹೆಚ್ಚಳ: 8ನೇ ವೇತನ ಆಯೋಗವು ಸರ್ಕಾರಿ ನೌಕರರ ಮೂಲ ವೇತನದಲ್ಲಿ ಗಣನೀಯ ಹೆಚ್ಚಳವನ್ನು ಶಿಫಾರಸು ಮಾಡುವ ನಿರೀಕ್ಷೆಯಿದೆ. ಇದು ಲಕ್ಷಾಂತರ ನೌಕರರ ವೇತನದಲ್ಲಿ ನೇರ ಪರಿಣಾಮ ಬೀರಲಿದೆ.
* ಪಿಂಚಣಿ ಹೆಚ್ಚಳ: ಪಿಂಚಣಿದಾರರಿಗೂ ಸಹ ಈ ಆಯೋಗದಿಂದ ಪ್ರಯೋಜನವಾಗಲಿದೆ. ಪಿಂಚಣಿ ಮೊತ್ತದಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು.
* ತುಟ್ಟಿ ಭತ್ಯೆ ಹೆಚ್ಚಳ: ತುಟ್ಟಿ ಭತ್ಯೆ (DA) ಕೂಡ ಈ ಆಯೋಗದ ಶಿಫಾರಸಿನ ಮೇರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇದು ನೌಕರರ ಕೈಗೆ ಸಿಗುವ ಒಟ್ಟು ವೇತನದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
8th Pay Commission ಯಾವಾಗ ಜಾರಿ ಆಗಲಿದೆ?
ಕೇಂದ್ರ ಸರ್ಕಾರವು ಇನ್ನೂ 8ನೇ ವೇತನ ಆಯೋಗದ ರಚನೆಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಮುಂದಿನ ಕೇಂದ್ರ ಬಜೆಟ್ ಮಂಡನೆಯ ಸಮಯದಲ್ಲಿ ಈ ಬಗ್ಗೆ ಪ್ರಕಟಣೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
8th Pay Commission ರಚನೆ ಕುರಿತು ಕೇಂದ್ರ ಸರ್ಕಾರ ಹೇಳಿದ್ದೇನು?
8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಕೇಳಲಾದ ಪ್ರಶ್ನೆಗೆ ಸರ್ಕಾರ ನಕಾರಾತ್ಮಕವಾಗಿ ಉತ್ತರಿಸಿದೆ. ಹೌದು, ಸದ್ಯ 8th Pay Commission ರಚನೆಯ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರವು ಸದನದಲ್ಲಿ ಉತ್ತರಿಸಿದೆ. ಈ ಮೂಲಕ ಒಂದು ಕೋಟಿ ಉದ್ಯೋಗಿಗಳು, ಪಿಂಚಣಿದಾರರ ಆಸೆಗೆ ನಿರಾಸೆಯುಂಟು ಮಾಡಿದೆ.
ಕೇಂದ್ರದಲ್ಲಿ 7th Pay Commission ಯಾವಾಗ ಜಾರಿಗೆ ಬಂದಿತ್ತು?
ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಶಿಫಾರಸುಗಳನ್ನು 2016ರ ಜೂನ್ 29 ರಂದು ಸ್ವೀಕರಿಸಲಾಯಿತು. ಈ ಶಿಫಾರಸುಗಳು 2016ರ ಜನವರಿ 1 ರೊಂದಿಗೆ ಜಾರಿಗೆ ಬಂದವು. ಆದಾಗ್ಯೂ, ಹಿಂದುಳಿದ ಸಂಬಳವನ್ನು 2016-17ರ ಹಣಕಾಸು ವರ್ಷದಲ್ಲಿ ಪಾವತಿಸಲಾಯಿತು.
ಇದು ಹಿಂದಿನ ವೇತನ ಆಯೋಗಗಳಿಗೆ ಹೋಲಿಸಿದರೆ ತ್ವರಿತ ಜಾರಿಯಾಗಿತ್ತು. 7ನೇ ವೇತನ ಆಯೋಗದ ಶಿಫಾರಸುಗಳಿಂದ ಕೇಂದ್ರ ಸರ್ಕಾರದ ನೌಕರರು ಹಲವಾರು ಪ್ರಯೋಜನಗಳನ್ನು ಪಡೆದುಕೊಂಡರು. ಇದರಲ್ಲಿ ಸಂಬಳ ಹೆಚ್ಚಳ, ಹೊಸ ವೇತನ ಶ್ರೇಣಿಗಳು, ಹೆಚ್ಚಿದ ಭತ್ಯೆಗಳು ಮುಂತಾದವು ಸೇರಿವೆ. ಈ ಶಿಫಾರಸುಗಳ ಜಾರಿಯಿಂದ ಕೇಂದ್ರ ಸರ್ಕಾರದ ನೌಕರರ ಜೀವನ ಮಟ್ಟ ಸುಧಾರಿಸಿದೆ.
7ನೇ ವೇತನ ಆಯೋಗದ ಶಿಫಾರಸುಗಳು ಕೇಂದ್ರ ಸರ್ಕಾರದ ನೌಕರರ ಜೀವನ ಮಟ್ಟ ಸುಧಾರಿಸಲು ಪ್ರಮುಖ ಪಾತ್ರ ವಹಿಸಿವೆ. ಇದು ಕೇಂದ್ರ ಸರ್ಕಾರದ ನೌಕರರ ಕ್ಷೇಮಾಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸುವುದು ವಾಡಿಕೆ.
ಕರ್ನಾಟಕದಲ್ಲಿ ಎಷ್ಟನೇ Pay Commission ಜಾರಿಲ್ಲಿದೆ?
ಇತ್ತೀಚೆಗೆ ಅಷ್ಷೇ ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ 7th pay commission ಜಾರಿಗೆ ಅನುಷ್ಠಾನಗೊಳಿಸಿದೆ.
ಇದನ್ನೂ ಓದಿ: ಯುಪಿಐ ವ್ಯಾಲೆಟ್ (UPI Valet) ಮಿತಿ ಭಾರೀ ಹೆಚ್ಚಳ