ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ಕ್ಲೀನ್‌ಸ್ವೀಪ್ ಮಾಡಿದ್ದು, ಮೂರನೇ ಪಂದ್ಯ ಸೂಪರ್ ಓವರ್‌ಗೆ ಹೋದರೂ ಟೀಂ ಇಂಡಿಯಾ ರೋಚಕವಾಗಿ ಗೆಲುವಿನ ನಗೆ ಬೀರಿತು.
ಅಚ್ಚರಿಯೆಂಬಂತೆ ಕೊನೆಯ ಓವರ್ ಎಸೆದ ನಾಯಕ ಸೂರ್ಯಕುಮಾರ್ 2 ವಿಕೆಟ್ ತೆಗೆದರೂ ಜಯ ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು 19ನೇ ಓವರ್ ಅನ್ನು ರಿಂಕು ಸಿಂಗ್ ಎಸೆದರು.
138 ರನ್‌ಗಳ ಗುರಿ ಪಡೆದ ಲಂಕಾ, 137/8 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು. ಸೂಪರ್ ಓವರ್‌ನಲ್ಲಿ ಲಂಕಾ 2 ರನ್‌ಗೆ ಆಲೌಟ್ ಆಯ್ತು (2/2). ಸೂರ್ಯಕುಮಾರ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು.
ಅಲ್ಪ ಮೊತ್ತಕ್ಕೆ ಕುಸಿದ ಭಾರತ: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿಯಿತು. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು.
ಭಾರತದ ಪರ ಶುಭಮನ್ ಗಿಲ್-39, ರಿಯಾನ್ ಪರಾಗ್-26 ರನ್ ಗಳಿಸಿದರು. ಉಳಿದ ಬ್ಯಾಟರ್ಸ್ ಹೆಚ್ಚಿನ ರನ್ ಸೇರಿಸಲಿಲ್ಲ.
ಶ್ರೀಲಂಕಾ ಪರವಾಗಿ ಮಹೀಶ್ ತೀಕ್ಷಣ-3, ಹಸರಂಗ-2, ಚಮಿಂದು ವಿಕ್ರಮಸಿಂಘ, ಅಸಿತ ಫರ್ನಾಂಡೊ, ಮೆಂಡಿಸ್ ತಲಾ 1 ವಿಕೆಟ್ ಪಡೆದರು.