Swachcha Bharath Abhiyan: ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಿ: ಮದಭಾವಿ

Swachcha Bharath Abhiyan: ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಿ: ಮದಭಾವಿ


ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣವೂ ಸೇರಿದಂತೆ ಪಕ್ಕದ ನಿಡಗುಂದಿ, ನಾಲತವಾಡ ಬಸ್ ನಿಲ್ದಾಣಗಳಲ್ಲಿ ಇಲಾಖೆಯ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಎರಡು ದಿನಗಳ ಕಾಲ ಸ್ವಚ್ಛತಾ ಅಭಿಯಾನ (Swachcha Bharath Abhiyan) ಹಮ್ಮಿಕೊಂಡಿರುವುದಾಗಿ ಸಾರಿಗೆ ಘಟಕ ವ್ಯವಸ್ಥಾಪಕ ಅಬೂಬಕರ್ ಮದಭಾವಿ ಹೇಳಿದರು.

Join Our Telegram: https://t.me/dcgkannada
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ (Swachcha Bharath Abhiyan) ಚಾಲನೆ ನೀಡಿ ಅವರು ಮಾತನಾಡಿದರು.

ಬಸ್ ನಿಲ್ದಾಣ ನಮ್ಮ ಆಸ್ತಿ ಎಂಬುದು ಸಾರ್ವಜನಿಕರು ಅರಿತುಕೊಳ್ಳಬೇಕಿದೆ. ನಿಲ್ದಾಣದ ಕಂಬಗಳಿಗೆ ಎಲ್ಲೆಂದರಲ್ಲಿ ಭಿತ್ತಿಪತ್ರ ಅಂಟಿಸಿ ನಿಲ್ದಾಣದ ಅಂದವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದರು.

ಇದನ್ನೂ ಓದಿ: ಅನ್ನದಾತನಿಗೆ ವಾಣಿಜ್ಯ ರತ್ನ ಪ್ರಶಸ್ತಿ ಗರಿ.. ಯುವ ಉದ್ಯಮಿಗೆ ಸಂದ ಗೌರವ


ಯುವ ಮುಖಂಡ ಉದಯ ರಾಯಚೂರ ಮಾತನಾಡಿ, ಸಾರಿಗೆ ಇಲಾಖೆಯ ಸಿಬ್ಬಂದಿಯೇ ಬಸ್ ನಿಲ್ದಾಣದ ಸ್ವಚ್ಛತೆ ಕೈಗೊಂಡಿರುವುದಕ್ಕೆ ಸಾರ್ವಜನಿಕರ ಪರವಾಗಿ ಧನ್ಯವಾದ ಹೇಳುತ್ತೇವೆ.ನಿಲ್ದಾಣಕ್ಕೆ ಬರುವವರು ಎಲ್ಲೆಂದರಲ್ಲಿ ಗುಟ್ಖಾ ಅಗೆದು ಉಗಿಯುವುದು, ಎಲ್ಲೆಂದರಲ್ಲಿ ಬಹಿರ್ದೆಸೆ, ಮೂತ್ರ ವಿಸರ್ಜನೆ ಮಾಡುವುದನ್ನು ಮಾಡಬಾರದು. ನಿಲ್ದಾಣದ ಸ್ವಚ್ಛತೆಗೆ ಯುವಕರು ಕೈಜೋಡಿಸಬೇಕು ಎಂದರು.


ಘಟಕದ ಎಡಿಎಂ ಸೂಪರವೈಸರ್ ಎಸ್.ಬಿ.ಪಾಟೀಲ್, ಎನ್.ಎಸ್.ಮಠ, ಬಸವರಾಜ ಬಿರಾದಾರ,ಎಸ್.ಡಿ.ಪತ್ತಾರ, ಎಸ್.ಎಂ.ಹೊಳಿ, ಎಸ್.ಆರ್.ಮುಲ್ಲಾ ಹಾಗೂ ಆಡಳಿತ ವರ್ಗ, ತಾಂತ್ರಿಕ ಸಿಬ್ಬಂದಿ, ಚಾಲಕ ನಿರ್ವಾಹಕ, ಸಿಬ್ಬಂದಿ ಪಾಲ್ಗೊಂಡಿದ್ದರು.

Latest News

‘ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಮಾಡಿ,ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ’

‘ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಮಾಡಿ,ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ’

ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ನೂತನ

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಪಟ್ಟಣದಲ್ಲಿ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೃತಪ್ಪಟ ಕಟ್ಟಡ ಕಾರ್ಮಿಕರಾದ ಶಕೀಲಅಹ್ಮದ್

17.17 ಲಕ್ಷ ರೂ.ಅನುದಾನ ದುರುಪಯೋಗ;                   ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

17.17 ಲಕ್ಷ ರೂ.ಅನುದಾನ ದುರುಪಯೋಗ; ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

ಮುದ್ದೇಬಿಹಾಳ : ಪ್ರಸ್ತುತ ಬಾಗಲಕೋಟ ತಾಪಂ ಅಧೀಕ್ಷಕಿಯಾಗಿ ಸೇವೆಯಲ್ಲಿರುವ ಹಿಂದಿನ ಮುದ್ದೇಬಿಹಾಳ ತಾಲ್ಲೂಕು ಯರಝರಿ

ಅನುಭವಿ ನಾಯಕ ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ

ಅನುಭವಿ ನಾಯಕ ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ

ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಅನುಭವಿ ಶಾಸಕ ರುದ್ರಪ್ಪ ಮಾ. ಲಮಾಣಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ. ಗುಡಿಮನಿ ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕಬಡ್ಡಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಕ್ಕೆ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಮುದ್ದೇಬಿಹಾಳ ತಾಲೂಕು ಪಂಚಾಯತ ಕಚೇರಿಯಲ್ಲಿ ತಾಪಂ ಇಒ ಸಂಗನಗೌಡ ಬಿರಾದಾರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಾಪಂ ಪ್ರಭಾರ ಎಡಿ ಮಲ್ಲಿಕಾರ್ಜುನ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು ಬಂಕ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹಲವು ಪೆಟ್ರೋಲ್ ಬಂಕ್‌ಗಳ ಮುಂದೆ ಅಡ್ಡಲಾಗಿ ಹಗ್ಗ ಕಟ್ಟಿ ನೋ ಸ್ಟಾಕ್ ಬೋರ್ಡ್ ಹಾಕಿದ್ದರೆ ಡಿಸೇಲ್ ಲಭ್ಯವಿರುವ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಸವಾರರು,ಖಾಲಿ ಕ್ಯಾನ್‌ಗಳೊಂದಿಗೆ ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು. ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ನಾಗಠಾಣ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್