ಮುದ್ದೇಬಿಹಾಳ : ಈ ಭಾಗದಲ್ಲಿ ಹಲವು ಉದ್ಯಮಗಳಲ್ಲಿ ಹೆಸರುವಾಸಿಯಾಗಿರುವ ಯುವ ಉದ್ಯಮಿ, ಸಂಘಟನಾ ಚತುರರು, ಚಿನ್ಮ ಜೆಸಿ ಸಂಸ್ಥೆಯ ಅಧ್ಯಕ್ಷರಾದ ಶರಣು ಸಜ್ಜನ ಅವರಿಗೆ ಹುಬ್ಬಳ್ಳಿ ಚೇಂರ‍್ಸ್ ಆಫ್ ಕಾಮರ್ಸ್ ವತಿಯಿಂದ ನೀಡಲಾಗುವ ಸನ್ 2024ರ ವಾಣಿಜ್ಯ ರತ್ನ ಪ್ರಶಸ್ತಿ (Commercial Gem Award) ಸಂದಿದೆ.
Join Our Telegram: https://t.me/dcgkannada
ಬೀಜ ಮತ್ತು ಗೊಬ್ಬರ ಮಾರಾಟ, ಏಪಿಎಂಸಿ ವರ್ತಕರಾಗಿ ಹೆಸರು ಮಾಡಿರುವ ಸಜ್ಜನ ಅವರು ಈಚೇಗಷ್ಟೇ ಸಾಯಿನಾಥ ದಾಲ್ ಮಿಲ್ ಅನ್ನು ಕುಂಟೋಜಿ ರಸ್ತೆಯಲ್ಲಿ ತೆರೆದು ನೂರಾರು ಜನಕ್ಕೆ ಕೆಲಸವನ್ನು ನೀಡಿ ಅನ್ನದಾತರೆನ್ನಿಸಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಅವರಿಗೆ ವಾಣಿಜ್ಯೋದ್ಯಮ ಸಂಸ್ಥೆಯ ಮುಖ್ಯಸ್ಥರು ಶನಿವಾರ ರಾಜ್ಯದ ಪ್ರತಿಷ್ಠಿತ ಉದ್ಯಮಿಗಳಿಗೆ ಕೊಡಮಾಡುವ ವಾಣಿಜ್ಯ ರತ್ನ ಪ್ರಶಸ್ತಿಯನ್ನು ಚಿನ್ಮ ಜೆಸಿ ಸಂಸ್ಥೆಯ ಅಧ್ಯಕ್ಷರಾದ ಶರಣು ಸಜ್ಜನ ಅವರಿಗೆ ಹುಬ್ಬಳ್ಳಿ ಚೇಂರ‍್ಸ್ ಆಫ್ ಕಾಮರ್ಸ್ ವತಿಯಿಂದ ನೀಡಲಾಗುವ ಸನ್ 2024ರ ವಾಣಿಜ್ಯ ರತ್ನ ಪ್ರಶಸ್ತಿ (Commercial Gem Award) ಸಂದಿದೆ ಪ್ರದಾನ ಮಾಡಿದರು.
ಇದನ್ನೂ ಓದಿ: TB Dam: ಪರಿಶೀಲಿಸಿದ ಡಿಸಿಎಂ ಡಿಕೆಶಿ.. ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅಗತ್ಯವಿಲ್ಲ (ವಿಡಿಯೋ ನೋಡಿ)
ಮುದ್ದೇಬಿಹಾಳದಿಂದ ಈ ಸಮಾರಂಭ ಕಣ್ತುಂಬಿಕೊಳ್ಳಲು ಹುಬ್ಬಳ್ಳಿಗೆ ತೆರಳಿದ್ದ ಅವರ ಸ್ನೇಹಿತರು, ಗಣ್ಯರು ಸಜ್ಜನ ಅವರನ್ನು ಇದೇ ವೇಳೆ ಸನ್ಮಾನಿಸಿದರು.