BJP Rebels Basanagouda patil yatnal vs BY Vijayendra

BJP Rebels: ಬಂಡಾಯ ಶಮನಕ್ಕೆ ಯತ್ನ ಶುರು..! ಆ.21ಕ್ಕೆ ಬೆಂಗಳೂರಿನಲ್ಲಿ ಮೊಳಗುವುದೇ ಬಂಡಾಯದ ಕಹಳೆ..?

BJP Rebels: ಬಂಡಾಯ ಶಮನಕ್ಕೆ ಯತ್ನ ಶುರು..! ಆ.21ಕ್ಕೆ ಬೆಂಗಳೂರಿನಲ್ಲಿ ಮೊಳಗುವುದೇ ಬಂಡಾಯದ ಕಹಳೆ..?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ತಮ್ಮ ವಿರುದ್ಧ ಸ್ವಪಕ್ಷೀಯರಿಂದ ಬಂಡಾಯದ (BJP Rebels) ಕಹಳೆ ಮೊಳಗಿದ ಬೆನ್ನಲ್ಲೇ ಬಿ.ವೈ.ವಿಜಯೇಂದ್ರ (BY Vijayendra) ಸಂಘ ಪರಿವಾರದ ಮುಖಂಡರು ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕೇಂದ್ರ ಕಚೇರಿಗೆ ಸ್ವತಃ ವಿಜಯೇಂದ್ರ ತೆರಳಿದ್ದರು.

Join Our Telegram: https://t.me/dcgkannada

21ಕ್ಕೆ ಬೆಂಗಳೂರಲ್ಲೇ ವಿಜಯೇಂದ್ರ ವಿರುದ್ಧ ಅತೃಪ್ತರ ಬಂಡಾಯ (BJP Rebels) ಸಭೆ?

ಒಂದು ವೇಳೆ ಅಷ್ಟರೊಳಗಾಗಿ ಬಿಜೆಪಿಯ ವರಿಷ್ಠರು ಬ್ರೇಕ್ ಹಾಕಿದಲ್ಲಿ ಮಾತ್ರ ಸಭೆ ರದ್ದಾಗಬಹುದು ಅಥವಾ ಮುಂದೂಡಬಹುದು. ಇಲ್ಲದಿದ್ದರೆ ಸಭೆ ನಡೆಯುವುದು ನಿಶ್ಚಿತ ಎನ್ನಲಾಗಿದೆ.

ಇದನ್ನೂ ಓದಿ: Murder: ಆಸ್ತಿ ವಿಚಾರಕ್ಕೆ ಗಲಾಟೆ; ಮಚ್ಚಿನಿಂದ ಅಪ್ಪನನ್ನೆ ಕೊಚ್ಚಿ ಕೊಂದ ಪಾಪಿ ಮಗ..!

ಕಳೆದ ಭಾನುವಾರ ಬೆಳಗಾವಿಯ ಹೊರವಲಯದ ರೆಸಾರ್ಟ್‌ವೊಂದರಲ್ಲಿ ನಡೆದ ಸಭೆಯ ಮುಂದುವರಿದ ಭಾಗವಿದು. ಈ ಸಭೆಯಲ್ಲೂ ಯತ್ನಾಳ್, ಜಾರಕಿಹೊಳಿ ಜತೆಗೆ ಅರವಿಂದ್ ಲಿಂಬಾವಳಿ, ಅಣ್ಣಾ ಸಾಹೇಬ್ ಜೊಲ್ಲೆ, ಜಿ.ಎಂ.ಸಿದ್ದೇಶ್ವರ್, ಪ್ರತಾಪ್ ಸಿಂಹ, ಕುಮಾರ್‌ ಬಂಗಾರಪ್ಪ, ಬಿ.ಪಿ.ಹರೀಷ್ ಅವರೊಂದಿಗೆ ಇತರ ಹಲವು ಮುಖಂಡರೂ ಜತೆಗೂಡುವ ನಿರೀಕ್ಷೆಯಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಪಾದಯಾತ್ರೆ ಹೆಸರಲ್ಲಿ ಸಭೆ:

ಮೇಲ್ನೋಟಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಈ ಸಭೆ ನಡೆಸಲಾಗುವುದು ಎಂದು ಹೇಳಲಾಗುತ್ತಿದ್ದರೂ ಇದು ವಿಜಯೇಂದ್ರ ಅವರ ನಾಯಕತ್ವಕ್ಕೆ ಸಡ್ಡು ಹೊಡೆಯುವುದೇ ಆಗಿದೆ ಎನ್ನುವುದು ಸತ್ಯ.

ಈ ಬಾರಿಯ ಸಭೆಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಬಗ್ಗೆ, ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಈಗಾಗಲೇ ಬೆಳಗಾವಿ ಸಭೆ ಬಳಿಕ ಬಿಜೆಪಿ ಪಾಳೆಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ವಿಜಯೇಂದ್ರ ಅವರು ಬುಧವಾರ ಬೆಂಗಳೂರಿನಲ್ಲಿ ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರ ಬೆನ್ನಲ್ಲೇ ಬಂಡಾಯದ ಮತ್ತೊಂದು ಸಭೆ ನಡೆಸಲು ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

BPL Card: ಬಿಪಿಎಲ್ ಕಾರ್ಡ್, ಗ್ಯಾರಂಟಿ ಯೋಜನೆ ರದ್ದು? ಸಚಿವ ಎಂ.ಬಿ.ಪಾಟೀಲ ಕ್ಲಾರಿಟಿ

ವಿಜಯಪುರ: ಗ್ಯಾರಂಟಿ ಯೋಜನೆ ಮತ್ತು BPL Card ರದ್ದು ಮಾಡುವ ಕುರಿತು ಎದ್ದಿರುವ ಊಹಾಪೋಹಗಳಿಗೆ ಸಚಿವ ಎಂ.ಬಿ
ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಕಮಿಟ್ ಮೆಂಟ್, ಅದು ನಮ್ಮ ಬದ್ಧತೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ನಮ್ಮ ಸರ್ಕಾರ ಇರೋವರೆಗೂ ಗ್ಯಾರಂಟಿ ಇರುತ್ತದೆ ಎಂದು ವಿಜಯಪುರದಲ್ಲಿ ಸಚಿವ ಎಂ. ಬಿ.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ನಮ್ಮ ಮುಖ್ಯಮಂತ್ರಿಗಳು ಹಣಕಾಸು ತಜ್ಞರು. 15 ಬಜೆಟ್ ಮಂಡನೆ ಮಾಡಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸ್ಪಷ್ಟವಾಗಿ ಹೇಳಿದರು.

BPL Card ರದ್ದು:

ಸತೀಶ್ ಜಾರಕಿಹೊಳಿ ಹೇಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಮ್ಮಲ್ಲಿ ಒತ್ತಡ ಬಹಳ ಇದೆ ರಾಜ್ಯದಲ್ಲಿ ಅತಿ ಹೆಚ್ಚು 82% ಬಿಪಿಎಲ್ ಕಾರ್ಡ್. ಎಲ್ಲರಿಗೂ ಬಿಪಿಎಲ್ ಕಾರ್ಡ್ ಇದೆ ಎಂದು ಮಾಹಿತಿ ನೀಡಿದ್ದಾರೆ.

ಅನವಶ್ಯಕವಾಗಿ ಶ್ರೀಮಂತರ ಬಿಪಿಎಲ್ ಯಾಕೆ ಎಂಬ ಚಿಂತನೆ ನಡೆಯುತ್ತಿದೆ ಎಂದ ಎಂಬಿ ಪಾಟೀಲ್, ಈ ಬಗ್ಗೆ ಸಮಗ್ರವಾಗಿ ಸಮೀಕ್ಷೆ ಆಗಬೇಕಾಗಿದೆ. ಸರಕಾರ ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

Latest News

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಬೆಂಗಳೂರು, ಜೂನ್‌ 26: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳು ಹಾಗೂ ಮನೆ ಕೆಲಸದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಕಾರ್ಮಿಕರ ಸಮಸ್ಯೆ ಚರ್ಚೆ:ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಬೆಂಗಳೂರು ಇವರ ಮನವಿ ಮೇರೆಗೆ ಮೆ. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಲಿಮಿಟೆಡ್.. ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಮುದ್ದೇಬಿಹಾಳ : ಜೂ.27 ರಿಂದ ಮೊಹರಂ ಹಬ್ಬದ ಆಚರಣೆ ಆರಂಭಗೊಳ್ಳಲಿದ್ದು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜೂ.27 ರಂದು ಮೊಹರಂ ಹಬ್ಬದ ಆಚರಣೆ ಆರಂಭಗೊಂಡು 29 ರಂದು ದಫನ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅಲಾಯ್ ದೇವರುಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು ಉಭಯ