ಕೊರಟಗೆರೆ: ಆಸ್ತಿಯ ವಿಚಾರಕ್ಕೆ ತಂದೆಯನ್ನು ಮಗನೇ ಮಚ್ಚಿನಲ್ಲಿ ಕೊಚ್ಚಿ ಬರ್ಬರವಾಗಿ ಕೊಲೆ (Murder) ಮಾಡಿರುವ ದುರ್ಘಟನೆ ಕೊರಟಗೆರೆ ತಾಲೂಕಿನಲ್ಲಿ ಸಂಭವಿಸಿದೆ.
ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದ 75 ವರ್ಷದ ವೆಂಕಟಪ್ಪ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
Join Our Telegram: https://t.me/dcgkannada
ವೆಂಕಟ್ಟಪ್ಪ ಮೂರೂವರೆ ಎಕರೆ ಆಸ್ತಿ ಹೊಂದಿದ್ದನು. ಇತ್ತೀಚೆಗೆ ಒಂದಿಷ್ಟು ಜಮೀನು ಮಾರಾಟ ಮಾಡಿ ಬಂದ ಹಣವನ್ನು ಮಗಳಿಗೆ ಕೊಟ್ಟಿದ್ದರು. ಹಾಗೂ ಜಮೀನನ್ನೂ ಕೂಡ ಮಗಳ ಹೆಸರಿಗೆ ಬರೆದು ಕೊಟ್ಟಿದ್ದರು.
ಇದೇ ವಿಚಾರವಾಗಿ ಮಗ ಮಗ ಸಿದ್ದಪ್ಪ ಹಾಗೂ ಮೃತ ವೆಂಕಟಪ್ಪ ನಡುವೆ ಹಲವು ಬಾರಿ ಗಲಾಟೆಯಾಗಿದೆ. ಈ ಬಗ್ಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು. ಆದರೆ ಆಸ್ತಿಯನ್ನು ಮಗನಿಗೆ ಕೊಡಲು ವೆಂಕಟಪ್ಪ ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: Hunagund: ಹಾಸ್ಟೆಲ್ ಗೆ ಲೋಕಾಯುಕ್ತ ಎಸ್ಪಿ ಭೇಟಿ.. ಅಧಿಕಾರಿಗಳಿಗೆ ತರಾಟೆ
ಇದರಿಂದ ಬೇಸತ್ತು ಸಿದ್ದಪ್ಪ ವೆಂಕಟಪ್ಪನ ತಲೆಗೆ ಮಚ್ಚಿನಿಂದ (Murder) ಬಲವಾಗಿ ಹೊಡೆದಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ವೆಂಕಟಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗ ಸಿದ್ದಪ್ಪ ನಾಪತ್ತೆಯಾಗಿದ್ದಾನೆ.
ಸದ್ಯ ಸ್ಥಳಕ್ಕೆ ಕೋಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಪತ್ತೆಯಾಗಿರುವ ಮಗ ಸಿದ್ದಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶಿಕ್ಷಕಿಯನ್ನು ಮಂಚಕ್ಕೆ ಕರೆದ ಹೆಡ್ ಮಾಸ್ಟರ್! ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು
ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮಂಚಕ್ಕೆ ಕರೆದ ಸರ್ಕಾರಿ ಶಾಲೆಯೊಂದರ ಪ್ರಭಾರ ಮುಖ್ಯ ಶಿಕ್ಷಕನಿಗೆ ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಶಿಕ್ಷಕಿಯನ್ನು ಮಂಚಕ್ಕೆ ಕರೆದ ಮುಖ್ಯ ಶಿಕ್ಷಕನನ್ನು ರಾಯಚೂರು ನಗರದ ಹೊರವಲಯದಲ್ಲಿರುವ ಸರ್ಕಾರಿ ಶಾಲೆಯ ಮೆಹಬೂಬ್ ಅಲಿ ಎಂದು ಗುರುತಿಸಲಾಗಿದೆ.
ಈತ ತರಬೇತಿಗೆ ಬಂದಿದ್ದ ಶಿಕ್ಷಕಿಯ ಜೊತೆ ಅನುಚಿತವಾಗಿ ವರ್ತಿಸಿ, ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಈ ವಿಷಯ ತಿಳಿದ ಕೂಡಲೇ ಶಿಕ್ಷಕಿಯ ಕುಟುಂಬಸ್ಥರು ಶಾಲೆಗೆ ಆಗಮಿಸಿ ಅಲಿ ಬಟ್ಟೆ ಹರಿದು ಸ್ಥಳೀಯರೊಂದಿಗೆ ಸೇರಿ ಮನಬಂದಂತೆ ಥಳಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ “ರಾತ್ರಿ ಮಲಗೋದಕ್ಕೆ ಬಾ 10 ಸಾವಿರ ಕೊಡುತ್ತೇನೆ” ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿ ಹಿಂಸೆ ಕೊಟ್ಟಿದ್ದಾನೆ. ಇದನ್ನು ಶಿಕ್ಷಕಿ ನಮಗೆ ತಿಳಿಸಿದ್ದು ಕೂಡಲೇ ಶಾಲೆಗೆ ಆಗಮಿಸಿ ವಿಚಾರಿಸಿದೆವು. ಮೊದಲು ನಿರಾಕರಿಸಿದ ಆತ ನಂತರ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಶಿಕ್ಷಕಿಯ ಕುಟುಂಬಸ್ಥರು ತಿಳಿಸಿದ್ದಾರೆ.
ಶಿಕ್ಷಕಿಯು ವಿಚಾರವನ್ನು ಇಲಾಖೆಯ ಮೇಲಾಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ್ ವಿಚಾರಣೆ ಕಾಯಂ ಅಮಾನುಗೊಳಿಸಿ ಆದೇಶ ಹೊರಡಿಸಿದ್ದಾರೆ.